Bengaluru: ನಟ ಯಶ್ (Yash) ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾ (Toxic movie) ಚಿತ್ರೀಕರಣದ ಸೆಟ್ಗಾಗಿ ಮರಗಳ ಮಾರಣಹೋಮ (Death of trees) ಮಾಡಿರುವ ಕಾರಣದಿಂದಾಗಿ ಕೆವಿಎನ್ (KVS) ಹಾಗೂ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ (Monster Mind Creations) , ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್, ಎಚ್ಎಂಟಿ ಲಿಮಿಟೆಡ್ (HMT LTD) ವಿರುದ್ಧ ಅರಣ್ಯ ಇಲಾಖೆ ಎಫ್ಐಆರ್ (FIR) ದಾಖಲು ಮಾಡಿದೆ. ನ್ಯಾಯಾಲಯದ ಅನುಮತಿ ಪಡೆದುಕೊಂಡು ಮೂರು ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸಲಾಗಿದೆ. ಆರೋಪಿಗಳಿಗೆ ನೊಟೀಸ್ ನೀಡಿ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ. ಸ್ಯಾಟಲೈಟ್ ಚಿತ್ರದ ಮೂಲಕ ಅರಣ್ಯ ಇಲಾಖೆ (Forest Department) ದಾಖಲೆಗಳನ್ನು ಪಡೆದುಕೊಂಡಿದೆ.
ಟಾಕ್ಸಿಕ್ ಸಿನಿಮಾಗಾಗಿ (Toxic movie) ಬೆಂಗಳೂರಿನ ಎಚ್ಎಂಟಿ ಗ್ರೌಂಡ್ನಲ್ಲಿ (HMT Ground) ಸೆಟ್ ಹಾಕಿದ್ದ ಚಿತ್ರತಂಡ, ಇದಕ್ಕಾಗಿ ಮರಗಳನ್ನು ಕಡಿದಿತ್ತು. ಈ ಬಗ್ಗೆ ಸ್ಯಾಟಲೈಟ್ ಚಿತ್ರದ ಮೂಲಕ ದಾಖಲೆಗಳನ್ನು ಪಡೆದುಕೊಂಡಿದ್ದ ಅರಣ್ಯ ಇಲಾಖೆ (Forest Department,) , ಚಿತ್ರೀಕರಣಕ್ಕಾಗಿ ಮರ ಕಡಿದ ಆರೋಪದ ಹಿನ್ನೆಲೆಯಲ್ಲಿ ಇದೀಗ ಸಿನಿಮಾ ನಿರ್ಮಾಣ ತಂಡ ಹಾಗೂ ಇತರರ ವಿರುದ್ದ ನ್ಯಾಯಾಲಯದ ಅನುಮತಿ ಪಡೆದುಕೊಂಡು ಎಫ್ಐಆರ್ ದಾಖಲು ಮಾಡಿಕೊಂಡಿದೆ.
ಕಳೆದ ಕೆಲ ತಿಂಗಳಿಂದಲೂ ಟಾಕ್ಸಿಕ್ ಸಿನಿಮಾದ ಸೆಟ್ (set of the movie Toxic) ನಿರ್ಮಾಣವಾಗಿರುವ ಜಾಗ ಮತ್ತು ಮರ ಕಡಿದಿರುವ ಕುರಿತು ವಿವಾದಗಳು ಚಾಲ್ತಿಯಲ್ಲಿವೆ. ಅರಣ್ಯ ಸಚಿವ ಈಶ್ವರ ಖಂಡ್ರೆಯವರು (Eshwara Khandre) , ಎಚ್ಎಂಟಿ ತನಗೆ ನೀಡಲಾಗಿದ್ದ ಜಾಗವನ್ನು ಸಿನಿಮಾಗಳಿಗೆ ಬಾಡಿಗೆ ನೀಡಿ ಹಣ ಮಾಡುತ್ತಿದೆ ಎಂದು ಆರೋಪಿಸಿತ್ತು. ಟಾಕ್ಸಿಕ್’ (‘toxic’) ಸಿನಿಮಾದ ಸೆಟ್ ನಿರ್ಮಾಣ ಮಾಡಿದ ಜಾಗದಲ್ಲಿ ಮುಂಚೆ ಇದ್ದ ಮರಗಳು ಆ ನಂತರ ನಾಶವಾದ ಮರಗಳ ಮಾಹಿತಿ ಒದಗಿಸುವ ಸ್ಯಾಟಲೈಟ್ ಚಿತ್ರವನ್ನು ಸಹ ಬಿಡುಗಡೆ ಮಾಡಲಾಗಿತ್ತು.ಬಳಿಕ ಈ ಆರೋಪಗಳಿಗೆ ಸ್ಪಂದಿಸಿದ್ದ ಎಚ್ಎಂಟಿ (HMT) , ಟಾಕ್ಸಿಕ್ ಸಿನಿಮಾದ ಸೆಟ್ ನಿರ್ಮಾಣ ಆಗಿರುವ ಸ್ಥಳ ನಮ್ಮದಲ್ಲ, ಅದು ಕೆನರಾ ಬ್ಯಾಂಕ್ಗೆ (Canara Bank) ಸೇರಿದ್ದು, ಕೆನರಾ ಬ್ಯಾಂಕ್ಗೆ ಸೇರಿದ ಸ್ಥಳವನ್ನು ನಾವು ಬಾಡಿಗೆಗೆ ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದಿತ್ತು. ಚಿತ್ರತಂಡ ಸಹ ಈ ಬಗ್ಗೆ ಪ್ರತಿಕ್ರಿಯಿಸಿ, ಮರ ಕಡಿದಿರುವ ಆರೋಪಗಳನ್ನು ತಳ್ಳಿ ಹಾಕಿತ್ತು. ಈ ಎಲ್ಲ ಘಟನೆ ತುಸು ರಾಜಕೀಯ (Politics) ಕೋನವನ್ನು ಸಹ ಪಡೆದುಕೊಂಡಿವೆ. ಈಗ ಎಫ್ಐಆರ್ ಸಹ ದಾಖಲಾಗಿದ್ದು, ಚಿತ್ರದ ನಿರ್ಮಾಣ ಸಂಸ್ಥೆ ಏನು ಪ್ರತಿಕ್ರಿಯೆ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.