• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಹಾಂಗ್‌ಕಾಂಗ್‌ನ ತೈ ಪೊ ಪ್ರದೇಶದಲ್ಲಿ ಬೆಂಕಿ ದುರಂತ: 44 ಮಂದಿ ಸಾವು, 279 ಮಂದಿ ನಾಪತ್ತೆ

Teju Srinivas by Teju Srinivas
in ದೇಶ-ವಿದೇಶ, ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
ಹಾಂಗ್‌ಕಾಂಗ್‌ನ ತೈ ಪೊ ಪ್ರದೇಶದಲ್ಲಿ ಬೆಂಕಿ ದುರಂತ: 44 ಮಂದಿ ಸಾವು, 279 ಮಂದಿ ನಾಪತ್ತೆ
0
SHARES
36
VIEWS
Share on FacebookShare on Twitter
  • 2,000 ಅಪಾರ್ಟ್‌ಮೆಂಟ್ಸ್‌ನ 7 ಗಗನಚುಂಬಿ (Fire tragedy in Hong Kong) ಕಟ್ಟಡಗಳು ಬೆಂಕಿಗಾಹುತಿ
  • 44 ಸಾವು, ಹಲವರಿಗೆ ಗಂಭೀರ ಗಾಯ
  • ಹಾಂಗ್ ಕಾಂಗ್ ನ ತೈಪೋ ಜಿಲ್ಲೆಯಲ್ಲಿ ಘಟನೆ

Hangkong: ಹಾಂಗ್‌ಕಾಂಗ್‌ನ ತೈ ಪೊ ಪ್ರದೇಶದಲ್ಲಿ ಬುಧವಾರ ಸಂಭವಿಸಿದ ಭೀಕರ (Fire tragedy in Hong Kong) ಬೆಂಕಿ ಅವಘಡ ಇಡೀ ವಿಶ್ವದ ಗಮನ ಸೆಳೆದಿದೆ.

ವಾಂಗ್ ಫುಕ್ ಕೋರ್ಟ್‌ (Wong Fook Court) ಎಂಬ 2,000 ಕ್ಕೂ ಹೆಚ್ಚು ಜನ ವಾಸಿಸುವ ದೊಡ್ಡ ವಸತಿ ಸಂಕೀರ್ಣದ 7 ಗೋಪುರಗಳು ಬೆಂಕಿಯಲ್ಲಿ ಸಿಲುಕಿದ್ದು, ಘಟನೆಯ ತೀವ್ರತೆ ಕ್ಷಣಾರ್ಧದಲ್ಲೇ ನಿಯಂತ್ರಣ ತಪ್ಪಿತು.

ಈ ದುರಂತದಲ್ಲಿ ಈಗಾಗಲೇ 44 ಜನರು ಸಾವನ್ನಪ್ಪಿರುವುದು ದೃಢವಾಗಿದೆ. ಆದರೆ ಅತ್ಯಂತ ಆತಂಕಕಾರಿ ಸಂಗತಿ ಎಂದರೆ 279 ಮಂದಿ ಇನ್ನೂ ಪತ್ತೆಯಾಗಿಲ್ಲ.

ಹೆಚ್ಚಿನವರು ವೃದ್ಧರು ಮತ್ತು ಚಲನೆಯ ಸಮಸ್ಯೆ ಹೊಂದಿರುವ ನಿವಾಸಿಗಳಾಗಿರುವುದರಿಂದ (Fire tragedy in Hong Kong) ರಕ್ಷಣಾ ಕಾರ್ಯಾಚರಣೆಗಳಲ್ಲಿ ಹೆಚ್ಚಿನ ಸವಾಲುಗಳಿವೆ.

ಈ ಬೆಂಕಿ ಮಧ್ಯಾಹ್ನ 3 ಗಂಟೆ ವೇಳೆಗೆ 32 ಅಂತಸ್ತಿನ ವಾಂಗ್ ಚಿಯೋಂಗ್ ಹೌಸ್ (Wong Cheong House) ಎಂಬ ಕಟ್ಟಡದಲ್ಲಿ ಆರಂಭವಾಯಿತು.

ನವೀಕರಣ ಕಾರ್ಯ ಮುಂದುವರಿಯುತ್ತಿದ್ದ ಕಾರಣ, ಕಟ್ಟಡವನ್ನು ಸಂಪೂರ್ಣವಾಗಿ ಬಿದಿರಿನ ಸ್ಕ್ಯಾಫೋಲ್ಡಿಂಗ್‌ನಿಂದ ಮುಚ್ಚಲಾಗಿತ್ತು.

ಬಿದಿರು ಬೇಗನೆ ಬೆಂಕಿಯನ್ನು ಹಿಡಿಯುವುದರಿಂದ, ಜ್ವಾಲೆಗಳು ತಕ್ಷಣವೇ ಹೊರಗಿನ ರಚನೆಗಳನ್ನು ಆವರಿಸಿ ಬೇರೇ ಗೋಪುರಗಳಿಗೆ ಹರಡಿದವು.

ಇನ್ನು ಬೆಂಕಿ ಆವರಿಸಿದ ಕೆಲವೇ ನಿಮಿಷಗಳಲ್ಲಿ ಏಳು ಗೋಪುರಗಳು ಹೊಗೆ ಮತ್ತು ಜ್ವಾಲೆಗಳಿಂದ ತುಂಬಿದ್ದು.

ಅಗ್ನಿಶಾಮಕ ದಳದ 128 ವಾಹನಗಳು, 57 ಆಂಬ್ಯುಲೆನ್ಸ್‌ಗಳು (Ambulance) ಮತ್ತು 888 ಕ್ಕೂ ಹೆಚ್ಚು ರಕ್ಷಣಾ ಸಿಬ್ಬಂದಿಗಳನ್ನು ಸ್ಥಳಕ್ಕೆ ಕಳುಹಿಸಲಾಗಿದ್ದರೂ, ಕಟ್ಟಡಗಳ ಮೇಲಿನ ಮಹಡಿಗಳಿಗೆ ತಲುಪುವುದು ಬಹಳ ಕಷ್ಟಕರವಾಗಿತ್ತು.

ಅಗ್ನಿಶಾಮಕ ದಳದವರು ಹಲವಾರು ಗಂಟೆಗಳ ಹೋರಾಟ ನಡೆಸಿದರೂ, ತೀವ್ರವಾದ ಉಷ್ಣತೆ ಮತ್ತು ಗಾಳಿಯ ವೇಗದಿಂದ ರಕ್ಷಣಾ ಕಾರ್ಯಗಳಲ್ಲಿ ಅಡೆತಡೆ ಉಂಟಾಯಿತು. ಅನೇಕ ನಿವಾಸಿಗಳು ತಮ್ಮ ಮನೆಗಳಲ್ಲೇ ಸಿಲುಕಿಕೊಂಡಿದ್ದರು.

ಕಿಟಕಿಗಳನ್ನು ಮುಚ್ಚಲಾಗಿದ್ದರಿಂದ ಹೊಗೆ ಒಳಗೆ ತುಂಬಿಕೊಂಡು ಪರಿಸ್ಥಿತಿ ಗಂಭೀರವಾಯಿತು. ಅಧಿಕಾರಿಗಳು ಜನರಿಗೆ ಬಾಗಿಲು ಮತ್ತು ಕಿಟಕಿಗಳನ್ನು ಒದ್ದೆಯಾದ ಬಟ್ಟೆಗಳಿಂದ ಮುಚ್ಚಿ ಒಳಗೇ ಉಳಿಯುವಂತೆ ಸೂಚಿಸಿದ್ದರು.

ದುರ್ಭಾಗ್ಯವಶಾತ್, ರಕ್ಷಣಾ ಕಾರ್ಯಾಚರಣೆಯ ವೇಳೆ ಒಬ್ಬ ಅಗ್ನಿಶಾಮಕ ದಳದ ಸಿಬ್ಬಂದಿಯೂ ಕರ್ತವ್ಯ ನಿರತರಾಗಿಯೇ ಸಾವಿಗೀಡಾಗಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಮೂರು ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ. ಅವರ ವಿರುದ್ಧ ಯಾವ ಆರೋಪಗಳನ್ನು ಮಾಡಲಾಗುತ್ತಿದೆ ಎಂಬುದನ್ನು ಇನ್ನೂ ಬಹಿರಂಗಪಡಿಸಿಲ್ಲ.

ಇದು ಈ ದುರಂತದಲ್ಲಿ ಬೇರೆ ಕಾರಣಗಳೂ ಇದ್ದವೋ ಎಂಬ ಅನುಮಾನವನ್ನು ಹೆಚ್ಚಿಸಿದೆ.

ಕಟ್ಟಡಗಳ ಹೊರಗೆ ಸಂಗ್ರಹಿಸಲಾದ ವಸ್ತುಗಳು, ಬಿದಿರಿನ ಸ್ಕ್ಯಾಫೋಲ್ಡ್‌ಗಳು (Scaffold) ಮತ್ತು ನವೀಕರಣದಿಂದ ಬಂದ ತಾಂತ್ರಿಕ ದೋಷಗಳು ಬೆಂಕಿಯನ್ನು ಅಸಾಮಾನ್ಯ ವೇಗದಲ್ಲಿ ಹರಡಲು ಕಾರಣವಾಗಿರಬಹುದೆಂದು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಇದು ಸಾಮಾನ್ಯ ಅಪಘಾತವೇ ಅಥವಾ ಪೂರ್ವಯೋಜಿತ ಕೃತ್ಯವೇ ಎಂಬುದನ್ನು ತಿಳಿದುಕೊಳ್ಳಲು ಪೊಲೀಸರು ಹಲವು ಮೂಲಗಳಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಈ ನಡುವೆ, 900 ಕ್ಕೂ ಹೆಚ್ಚು ಜನರನ್ನು ತಾತ್ಕಾಲಿಕ ಆಶ್ರಯಗಳಿಗೆ ಸ್ಥಳಾಂತರಿಸಲಾಗಿದೆ. ರಾತ್ರಿಯ ವೇಳೆಗೆ ಕಟ್ಟಡಗಳು ಕಿತ್ತಳೆ ಬೆಳಕಿನಲ್ಲಿ ಹೊತ್ತಿ ಉರಿಯುತ್ತಿರುವ ಭಯಾನಕ ದೃಶ್ಯ ಕಂಡುಬಂತು.

ಸ್ಕ್ಯಾಫೋಲ್ಡಿಂಗ್‌ನ ಭಾಗಗಳು ರಸ್ತೆಗೆ ಬಿದ್ದುದರಿಂದ ಪರಿಸ್ಥಿತಿ ಇನ್ನಷ್ಟು ಅಪಾಯಕಾರಿ ಸ್ಥಿತಿಗೆ ಕುಟುಂಬ ಸದಸ್ಯರು ವರದಿ ಮಾಡುತ್ತಿರುವ ಕಾಣೆಯಾಗಿರುವವರ ಸಂಖ್ಯೆ ಪ್ರತಿ ಗಂಟೆಗೂ ಹೆಚ್ಚುತ್ತಿದ್ದು, ನಾಪತ್ತೆಯಾಗಿರುವವರ ನಿಜವಾದ ಸಂಖ್ಯೆ ಇನ್ನೂ ಸ್ಪಷ್ಟವಾಗಿಲ್ಲ.

ರಕ್ಷಣಾ ಸಿಬ್ಬಂದಿಗೆ ಗೋಪುರಗಳ ಮೇಲಿನ ಮಹಡಿಗಳಲ್ಲಿ ಸಾಗುವಿಕೆಯೇ ದೊಡ್ಡ ಸವಾಲಾಗಿದೆ.

ಎಲ್ಲರನ್ನು ತಲುಪಿ ರಕ್ಷಿಸಲು ಎಷ್ಟು ಸಮಯ ಬೇಕಾಗುತ್ತದೆ ಎಂಬುದೂ ತಿಳಿದಿಲ್ಲ.

ಈ ದುರಂತವನ್ನು ಹಾಂಗ್‌ಕಾಂಗ್‌ನ ಇತ್ತೀಚಿನ ಇತಿಹಾಸದಲ್ಲಿನ ಅತ್ಯಂತ ಭಯಾನಕಾರಿಯ ಅಪಘಾತಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

ಇದನ್ನು ಓದಿ : ಕೊಟ್ಟ ಮಾತು ಉಳಿಸಿಕೊಳ್ಳುವುದು ವಿಶ್ವದ ದೊಡ್ಡ ಶಕ್ತಿ : ಟ್ವೀಟ್ ಮಾಡಿ ಬೆಳ್ಳಂಬೆಳಗ್ಗೆ ಸಿಎಂಗೆ ಪರೋಕ್ಷವಾಗಿ ಟಾಂಗ್ ನೀಡಿದ ಡಿಕೆಶಿ
Tags: accidentfirehangkong

Related News

ಹುಲಿ ಸಫಾರಿಗೆ ಹೋಗುವ ಮುನ್ನ ಎಚ್ಚರಿಕೆ: ಮೊಬೈಲ್ ಬಳಕೆಗೆ ನಿರ್ಬಂಧ, ಪ್ರವಾಸಿಗರಿಗೆ ಹೊಸ ಮಾರ್ಗಸೂಚಿ
ಪ್ರಮುಖ ಸುದ್ದಿ

ಹುಲಿ ಸಫಾರಿಗೆ ಹೋಗುವ ಮುನ್ನ ಎಚ್ಚರಿಕೆ: ಮೊಬೈಲ್ ಬಳಕೆಗೆ ನಿರ್ಬಂಧ, ಪ್ರವಾಸಿಗರಿಗೆ ಹೊಸ ಮಾರ್ಗಸೂಚಿ

October 12, 2026
ಸ್ಟಿಂಗ್ ನಡೆಯುತ್ತಿರುವುದು ಗೊತ್ತಿದೆ : ಕಾರ್ಯಾಚರಣೆಯ ಹಿಂದಿನ ಸತ್ಯ ಬಹಿರಂಗವಾಗಬೇಕಿದೆ ಎಂದ ಮಾಜಿ ಸಿಎಂ ಸಿದ್ದರಾಮಯ್ಯ
ಪ್ರಮುಖ ಸುದ್ದಿ

ಸ್ಟಿಂಗ್ ನಡೆಯುತ್ತಿರುವುದು ಗೊತ್ತಿದೆ : ಕಾರ್ಯಾಚರಣೆಯ ಹಿಂದಿನ ಸತ್ಯ ಬಹಿರಂಗವಾಗಬೇಕಿದೆ ಎಂದ ಮಾಜಿ ಸಿಎಂ ಸಿದ್ದರಾಮಯ್ಯ

October 12, 2026
ಬೆಂಗಳೂರಿನಲ್ಲಿ ಕಸದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹೊಸ ಕ್ರಮ: ಪ್ರತಿ ಮಂಗಳವಾರ ಫೋನ್‌-ಇನ್ ಕಾರ್ಯಕ್ರಮ
ಪ್ರಮುಖ ಸುದ್ದಿ

ಬೆಂಗಳೂರಿನಲ್ಲಿ ಕಸದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹೊಸ ಕ್ರಮ: ಪ್ರತಿ ಮಂಗಳವಾರ ಫೋನ್‌-ಇನ್ ಕಾರ್ಯಕ್ರಮ

October 12, 2026
ಸಿಇಸಿ ರಾಜೀನಾಮೆಗೆ ಪಟ್ಟು: ಸುಪ್ರೀಂ ಕೋರ್ಟ್‌ವರೆಗೆ ಇಂಡಿಯಾ ಮೈತ್ರಿಕೂಟದ ಮೆರವಣಿಗೆ
ದೇಶ-ವಿದೇಶ

ಸಿಇಸಿ ರಾಜೀನಾಮೆಗೆ ಪಟ್ಟು: ಸುಪ್ರೀಂ ಕೋರ್ಟ್‌ವರೆಗೆ ಇಂಡಿಯಾ ಮೈತ್ರಿಕೂಟದ ಮೆರವಣಿಗೆ

October 12, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.