Massive Firecracker Explosion in Kerala Kasaragod: More than 150 People Injured
Kerala: ಕೇರಳದ ಕಾಸರಗೋಡಿನ (Kasaragodu) ನೀಲೇಶ್ವರಂನ ಬಳಿ ಇರುವ ದೇವಸ್ಥಾನದಲ್ಲಿ ಸಂಗ್ರಹಿಸಿ ಇಟ್ಟಿದ್ದ ಪಟಾಕಿಗಳು ಸ್ಫೋಟಗೊಂಡು ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, 150ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಶಂಕೆ ವ್ಯಕ್ತವಾಗಿದೆ. ದೇವಸ್ಥಾನದ ಉತ್ಸವದ ವೇಳೆ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಪಟಾಕಿಗಳು ಏಕಾಏಕಿ ಒಂದೇ ಬಾರಿಗೆ ಸ್ಫೋಟಗೊಂಡಿದರಿಂದ ಅಲ್ಲಿನ ಜನರಲ್ಲಿ ಭಾರಿ ಆತಂಕ ಉಂಟಾಗಿತ್ತು.
ಈ ಘಟನೆಯಲ್ಲಿ 8 ಜನರ ಸ್ಥಿತಿ ತುಂಬಾ ಗಂಭೀರವಾಗಿದ್ದು ಜೊತೆಗೆ 150ಕ್ಕೂ ಹೆಚ್ಚು ಜನ ಗಾಯಗೊಂಡಿರುವುದು ಬೆಳಕಿಗೆ ಬಂದಿದೆ. ಕಾಸರಗೋಡು, ಕಣ್ಣೂರು ಹಾಗೂ ಮಂಗಳೂರು (Mangalore) ಆಸ್ಪತ್ರೆಗಳಿಗೆ ಗಾಯಾಳುಗಳನ್ನು ದಾಖಲು ಮಾಡಲಾಗಿದೆ. ದೇವಸ್ಥಾನದ ಉತ್ಸವದ ಕಾರಣ #Firecracker Explosion in Kerala Kasaragod ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದು, ಅಲ್ಲದೆ ದೇವಾಲಯದ ಹೊರ ಹೊಲಯದಲ್ಲೂ ಜನ ಅಧಿಕವಾಗಿದ್ದರು ಹಾಗೂ ಈ ಅನಾಹುತದಿಂದ ನೆರೆದಿದ್ದ ಜನರು ಆತಂಕಕ್ಕೆ ಒಳಗಾಗಿದ್ದರು ಎಂದು ಹೇಳಲಾಗುತ್ತಿದೆ.
ಇನ್ನು ಘಟನೆಗೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಕೂಡಲೇ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾಡಳಿತದ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಮಾಡಿ ಘಟನೆಯ ಬಗ್ಗೆ ವಿಮರ್ಶಿಸಿದ್ದಾರೆ. ಪಟಾಕಿಗಳಿಗೆ ಯಾವ ರೀತಿ ಬೆಂಕಿ ಹೊತ್ತಿಕೊಂಡಿರಬಹುದು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಸಿಗದ ಕಾರಣ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.
Kerala: Firecrackers stored in a temple near Nileswaram in Kasargod, Kerala exploded, killing one person and injuring more than 150 people, it is suspected. It is said that this incident took place during the temple festival. There was a lot of panic among the people as the firecrackers exploded all at once.
In this incident, the condition of 8 people is very serious and more than 150 people have been injured. The injured have been admitted to hospitals in Kasaragod, Kannur and Mangalore. Because of the temple festival It is said that there was a large number of people gathered, and there were also people outside the temple and the people who gathered were worried because of this disaster.
Regarding the incident, the district collector, the district superintendent of police and the high officials of the district administration visited the spot immediately and reviewed the incident. Police are continuing to investigate as there is no clear information on how the firecrackers could have caught fire.