ನಿರ್ಬಂಧಗಳಿದ್ದರೂ ಪಟಾಕಿ ಮಾರಾಟ (Firecrackers sold openly in Delhi markets) ಮುಂದುವರಿಕೆ
ನವೆಂಬರ್ 7 ಮತ್ತು 8ರಂದು ಮಾತ್ರ ಷರತ್ತುಬದ್ಧ ಅವಕಾಶ; ನವೆಂಬರ್ 9ರಿಂದ ಮತ್ತೆ ಸಂಪೂರ್ಣ ನಿಷೇಧ.
ಪರವಾನಗಿ ಇರುವ, ಇಲ್ಲದ ಪಟಾಕಿಗಳೂ ಮಾರಾಟವಾಗುತ್ತಿರುವ ಬಗ್ಗೆ ಕಳವಳ; ನಿಯಮ ಉಲ್ಲಂಘನೆ ತಡೆಯಲು ಕೇಂದ್ರಕ್ಕೆ ಸೂಚನೆ
New Delhi : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪಟಾಕಿಗಳ ಮಾರಾಟ ಮತ್ತು (Firecrackers sold openly in Delhi markets) ಬಳಕೆಗೆ ಸುಪ್ರೀಂ ಕೋರ್ಟ್ ನಿರ್ಬಂಧ ವಿಧಿಸಿದ್ದರೂ, ಮಾರುಕಟ್ಟೆಗಳಲ್ಲಿ ಮಾತ್ರ ಎಲ್ಲ ರೀತಿಯ ಪಟಾಕಿಗಳು ಬಹಿರಂಗವಾಗಿ ಮಾರಾಟವಾಗುತ್ತಿರುವ ವರದಿಗಳು ನ್ಯಾಯಾಲಯದ ಗಮನ ಸೆಳೆದಿವೆ.
ನಿಯಮಗಳು ಜಾರಿಯಲ್ಲಿದ್ದರೂ ಅವುಗಳನ್ನು ಉಲ್ಲಂಘಿಸಿ ಅಂಗಡಿಗಳಲ್ಲಿ ಪಟಾಕಿಗಳು ಸುಲಭವಾಗಿ ಲಭ್ಯವಾಗುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ.

ನ್ಯಾಯಾಲಯದ ಆದೇಶಗಳು ಕೇವಲ ಕಾಗದಕ್ಕೆ ಸೀಮಿತವಾಗಬಾರದು, ಅವುಗಳನ್ನು (Firecrackers sold openly in Delhi markets) ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಮಂಗಳವಾರ ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ (M. M. Sundresh) ಮತ್ತು ಪಿ.ಬಿ. ವರಾಳೆ (P. B. Varale) ಅವರನ್ನೊಳಗೊಂಡ ನ್ಯಾಯಪೀಠ ಈ ವಿಚಾರವನ್ನು ಪ್ರಸ್ತಾಪಿಸಿತು.
ಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿಯನ್ನು ಹೆಚ್ಚುವರಿ ಸಾಲಿಸಿಟರ್ ಜನರಲ್ (Solicitor General) ಐಶ್ವರ್ಯ ಭಾಟಿ (Aishwarya Bhati) ಅವರ ಗಮನಕ್ಕೆ ತಂದ
ನ್ಯಾಯಪೀಠ, ನಿರ್ಬಂಧಗಳ ನಡುವೆಯೂ ದೆಹಲಿಯ ಮಾರುಕಟ್ಟೆಗಳಲ್ಲಿ ವಿವಿಧ ಬಗೆಯ ಪಟಾಕಿಗಳು ಮಾರಾಟವಾಗುತ್ತಿರುವುದನ್ನು ಉಲ್ಲೇಖಿಸಿತು.
ಪರವಾನಗಿ ಹೊಂದಿರುವ ಪಟಾಕಿಗಳು, ಪರವಾನಗಿ ಇಲ್ಲದ ಪಟಾಕಿಗಳು, ಕ್ಯೂಆರ್ ಕೋಡ್ (QR Code) ಇರುವ ಹಾಗೂ ಇಲ್ಲದ ಪಟಾಕಿಗಳು ಹೀಗೆ ಎಲ್ಲ
ಬಗೆಯ ಪಟಾಕಿಗಳೂ ಮಾರುಕಟ್ಟೆಯಲ್ಲಿ ಸಿಗುತ್ತಿವೆ ಎಂಬ ವರದಿಯನ್ನು ಗಂಭೀರವಾಗಿ ಪರಿಗಣಿಸುವಂತೆ ತಿಳಿಸಿತು.
ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವನ್ನೂ ನ್ಯಾಯಾಲಯ ಒತ್ತಿಹೇಳಿತು.
ಇತ್ತೀಚೆಗೆ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಹಸಿರು ಪಟಾಕಿಗಳ ಮಾರಾಟ ಮತ್ತು ಬಳಕೆಗೆ ಸುಪ್ರೀಂ ಕೋರ್ಟ್ ಕೆಲವು ಷರತ್ತುಗಳೊಂದಿಗೆ
ಅನುಮತಿ ನೀಡಿತ್ತು. ಅಕ್ಟೋಬರ್ 29ರಂದು ನೀಡಿದ್ದ ಆದೇಶದ ಪ್ರಕಾರ, ನವೆಂಬರ್ 7 ಮತ್ತು 8ರಂದು ಮಾತ್ರ ಪಟಾಕಿ ಸಿಡಿಸಲು ಅವಕಾಶ ಕಲ್ಪಿಸಲಾಗಿದೆ.
ಅದೂ ಬೆಳಗ್ಗೆ 6ರಿಂದ 7ರವರೆಗೆ ಹಾಗೂ ರಾತ್ರಿ 8ರಿಂದ 10ರವರೆಗೆ ಮಾತ್ರ ಪಟಾಕಿ ಸಿಡಿಸಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ಸಮಯದ ಹೊರತಾಗಿ
ಪಟಾಕಿ ಸಿಡಿಸುವುದಕ್ಕೆ ಅವಕಾಶವಿಲ್ಲ. ಹಸಿರು ಪಟಾಕಿಗಳ ಬಳಕೆಗೆ ಮಾತ್ರ ಅನುಮತಿ ನೀಡಲಾಗಿದ್ದು, ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.
ಪಟಾಕಿಗಳ ಮೇಲೆ ಸಂಪೂರ್ಣ ನಿಷೇಧ ಹೇರುವುದೇ ಮಾಲಿನ್ಯ ನಿಯಂತ್ರಣಕ್ಕೆ ಅತ್ಯಂತ ಪರಿಣಾಮಕಾರಿ ಮಾರ್ಗವೇ ಎಂಬುದನ್ನು ನಿರ್ಧರಿಸಲು ಸಾಕಷ್ಟು ದತ್ತಾಂಶಗಳು ಸದ್ಯ ಲಭ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಧಾರ್ಮಿಕ ಆಚರಣೆಗಳಿಗೂ ಪರಿಸರ ಸಂರಕ್ಷಣೆ ಮತ್ತು ಸಾರ್ವಜನಿಕ ಆರೋಗ್ಯಕ್ಕೂ ನಡುವೆ ಸಮತೋಲನ ಕಾಯ್ದುಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದೆ. ಪಟಾಕಿ
ಸಿಡಿಸುವುದರಿಂದ ವಾಯುಮಾಲಿನ್ಯ ಹೆಚ್ಚಾಗುವುದು ಅನಿವಾರ್ಯವಾಗಿರುವುದರಿಂದ, ಸಾರ್ವಜನಿಕರ ಆರೋಗ್ಯದ ಹಿತಾಸಕ್ತಿಯನ್ನು ಕಡೆಗಣಿಸಲಾಗದು.
ಧಾರ್ಮಿಕ ಆಚರಣೆಯ ಭಾಗವಾಗಿದ್ದರೂ, ಯಾವುದೇ ಚಟುವಟಿಕೆಯೂ ಸಂವಿಧಾನ ವಿಧಿಸಿರುವ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ ಎಂಬುದನ್ನು ನ್ಯಾಯಾಲಯ ನೆನಪಿಸಿದೆ.
ಇನ್ನು ನವೆಂಬರ್ 9ರಿಂದ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಪಟಾಕಿಗಳ ಮೇಲಿನ ಸಂಪೂರ್ಣ ನಿಷೇಧ ಮತ್ತೆ ಜಾರಿಗೆ ಬರಲಿದೆ.
ಆಸ್ಪತ್ರೆಗಳು, ನರ್ಸಿಂಗ್ ಹೋಮ್‌ಗಳು, ಪ್ರಾಥಮಿಕ ಮತ್ತು ಜಿಲ್ಲಾ ಆರೋಗ್ಯ ಕೇಂದ್ರಗಳು, ವೃದ್ಧಾಶ್ರಮಗಳು ಹಾಗೂ ಅಧಿಸೂಚಿತ ನಿಶ್ಶಬ್ದ ವಲಯಗಳ 300 ಮೀಟರ್ ವ್ಯಾಪ್ತಿಯಲ್ಲಿ ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಈ ಪ್ರದೇಶಗಳನ್ನು ಪಟಾಕಿ ಮುಕ್ತ ವಲಯಗಳೆಂದು ಘೋಷಿಸಿ, ಸಾರ್ವಜನಿಕರಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.
ನಿಯಮಗಳನ್ನು ರೂಪಿಸುವುದಷ್ಟೇ ಅಲ್ಲ, ಅವುಗಳ ಪರಿಣಾಮಕಾರಿ ಜಾರಿಯೂ ಮುಖ್ಯ ಎಂಬ ಸಂದೇಶವನ್ನು ಸುಪ್ರೀಂ ಕೋರ್ಟ್ (Supreme Court) ಮತ್ತೊಮ್ಮೆ ನೀಡಿದೆ. ದೀಪಾವಳಿ ಸಂಭ್ರಮದ ನಡುವೆ ಪರಿಸರ ಮತ್ತು ಜನರ ಆರೋಗ್ಯದ ಸುರಕ್ಷತೆಯೂ ಅಷ್ಟೇ ಮಹತ್ವದ್ದಾಗಿದೆ.
ಇದನ್ನು ಓದಿ : https://vijayatimes.com/be-aware-of-early-menopause/