ಅಮೆರಿಕ, ಮಾ. 17: ಇಲ್ಲಿನ ಜಾರ್ಜಿಯಾದಲ್ಲಿ ಅಪರಿಚಿತರಿಂದ ಮೂರು ಪ್ರತೇಕ ಸ್ಥಳಗಳಲ್ಲಿ ಗುಂಡಿನ ದಾಳಿ ನಡೆದಿದ್ದು 8 ಜನರು ಮೃತಪಟ್ಟಿದ್ದಾರೆ. ಈಶಾನ್ಯ ಅಟ್ಲಾಂಟಾದ ಎರಡು ಸ್ಪಾಗಳ ಮೇಲೆ ಅಪರಿಚಿತರು ಗುಂಡು ಹಾರಿಸಿದ್ದು, ಚೆರೋಕೀ ಕೌಂಟಿ ಸ್ಪಾದ ಮೇಲೆ ನಡೆದ ದಾಳಿಯಲ್ಲಿ ನಾಲ್ಕು ಜನರು ಮೃತಪಟ್ಟಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಚೆರೋಕೀ ಕೌಂಟಿ ಮಸಾಜ್ ಪಾರ್ಲರ್ನಲ್ಲಿ ಗುಂಡಿನ ದಾಳಿ ಮಾಡುತ್ತಿದ್ದ ಶಂಕಿತ ಬಂದೂಕುಧಾರಿ ವುಡ್ಸ್ಟಾಕ್ನ ರಾಬರ್ಟ್ ಆರನ್ ಲಾಂಗ್ (21) ಎಂಬ ಯುವಕ ಸಿಕ್ಕಿಬಿದ್ದಿದ್ದಾನೆ.
ಸುದ್ದಿಗೋಷ್ಠಿಯಲ್ಲಿ ಅಟ್ಲಾಂಟಾ ಪೊಲೀಸ್ ಮುಖ್ಯಸ್ಥ ರೊಡ್ನಿ ಬ್ರ್ಯಾಂಟ್, ಈಶಾನ್ಯ ಅಟ್ಲಾಂಟಾ ಸ್ಪಾಗಳ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಮಹಿಳೆಯರು ಮೃತಪಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಗೋಲ್ಡ್ ಮಸಾಜ್ ಸ್ಪಾದಲ್ಲಿ ದರೋಡೆ ನಡೆಯುತ್ತಿದೆ ಎಂದು ನಮಗೆ ಕರೆ ಬಂದಿತ್ತು. ಸ್ಥಳಕ್ಕೆ ಭೇಟಿ ನೀಡುತ್ತಿದ್ದ ವೇಳೆ ದಾರಿ ಮಧ್ಯೆ ಮತ್ತೊಂದು ಕರೆ ಬಂತು. ದಾರಿ ಮಧ್ಯೆ ವ್ಯಕ್ತಿಯನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾರೆ ಎಂದು ಕರೆಯಲ್ಲಿ ಹೇಳಿದ್ರು. ಆಗ ಸ್ಥಳಕ್ಕೆ ಭೇಟಿ ನೀಡಿದಾಗ ವ್ಯಕ್ತಿ ಮೃತಪಟ್ಟಿದ್ದ ಎಂದು ಹೇಳಿದ್ದಾರೆ ರಾಷ್ಟ್ರೀಯ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ.