ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳು ಯಾವಾಗ ಪೀರಿಯೆಡ್ ಆಗುತ್ತಾರೆ ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಾಗುತ್ತಿಲ್ಲ. ಆಧುನಿಕ ಜೀವನ ಶೈಲಿ, ಆಹಾರ, (First Period self care) ಹವಾಮಾನ

ಸೇರಿದಂತೆ ಅನೇಕ ಕಾರಣಗಳಿಂದ ಈ ಹಿಂದೆ 14-16 ವರ್ಷಕ್ಕೆ ಹೆಣ್ಣುಮಕ್ಕಳು ಋತುಮತಿಯಾಗುತ್ತಿದ್ದರು. ಆದರೆ ಈಗ ಕೇವಲ 12-13 ವರ್ಷಕ್ಕೆ ಋತುಮತಿಯಾಗುತ್ತಿದ್ದಾರೆ.
ಇನ್ನು ಕೆಲವು ಕಡೆ ಅತ್ಯಂತ ಚಿಕ್ಕ ವಯಸ್ಸಿಗೂ ಪೀರಿಯೆಡ್ಸ್ ಆಗುತ್ತಿರುವುದು ಕಂಡು ಬಂದಿದೆ. ಭಾರತದಲ್ಲಿ ಸದ್ಯ ಪೀರಿಯೆಡ್ಸ್ಗೆ ಸರಾಸರಿ ವಯಸ್ಸು 12. ಆದರೆ ಪ್ರತಿಯೊಬ್ಬರಲ್ಲೂ ಭಿನ್ನ
ವೈಯಸ್ಸಿನಲ್ಲಿ ಪೀರಿಯೆಡ್ಸ್ ಆಗುತ್ತಾರೆ. ಹೆಣ್ಣುಮಕ್ಕಳು ಪೀರಿಯೆಡ್ಸ್ ಆಗುವುದಕ್ಕಿಂತ ಮುನ್ನವೇ ಹೆಣ್ಣುಮಕ್ಕಳಿಗೆ ಕೆಲ ದೈಹಿಕ ಬದಲಾವಣೆಗಳು ಪೀರಿಯೆಡ್ಸ್ ಆಗುವ ಮುನ್ಸೂಚನೆ ನೀಡುತ್ತವೆ.
ಅಂತಹ ಪ್ರಮುಖ ಬದಲಾವಣೆಗಳೆಂದರೆ, ಈ ಅವಧಿಯಲ್ಲಿ ಮಕ್ಕಳ ಸ್ತನಗಾತ್ರದಲ್ಲಿ ಬೆಳವಣಿಗೆಯಾಗುತ್ತದೆ. ಸ್ತನಗಾತ್ರದ ಬೆಳವಣಿಗೆ ಅವರು ಪ್ರೌಢವಸ್ಥೆಗೆ ತಲುಪುವ ಮೊದಲ ಲಕ್ಷಣ ಕೂಡ ಆಗಿದೆ.

ಇದೇ ವೇಳೆ ಮೊದಲು ಕೂದಲಿಲ್ಲದ ಸ್ಥಳಗಳಲ್ಲಿ ಕೂದಲು ಬೆಳೆಯಲಾರಂಭಿಸುತ್ತದೆ. ಕಂಕಳು, ಕಾಲುಗಳು ಹಾಗೂ ಜನನಾಂಗ ಪ್ರದೇಶದಲ್ಲಿ ಕೂದಲು ಬೆಳೆಯುತ್ತದೆ. ಇದು ಕೂಡ ಮುಟ್ಟಿನ ಹತ್ತಿರದ ಸಂಕೇತ.
ಮುಖದಲ್ಲಿ ಮೊಡವೆಗಳು ಕಾಣಿಸಿಕೊಳ್ಳುವುದು, ಹೊಟ್ಟೆ ಉಬ್ಬುವುದು, ದೇಹದ ಆಕಾರದಲ್ಲಿ ಬದಲಾವಣೆ ಕಂಡು (First Period self care) ಬರುತ್ತದೆ.
ಇದನ್ನು ಓದಿ: ಧಾರವಾಡ- ಬೆಂಗಳೂರು ವಂದೇ ಭಾರತ್ ರೈಲು ಟಿಕೆಟ್ ದರ ಹೆಚ್ಚಳ, ಪ್ರಯಾಣಿಕರ ಆಕ್ರೋಶ! : ಎಷ್ಟು ದರ ಹೆಚ್ಚಾಗಿದೆ?
ಋತು ಸ್ರಾವಕ್ಕೆ ಮುನ್ನ ಮಕ್ಕಳಲ್ಲಿ ಯೋನಿಯಲ್ಲಿ ಬಿಳಿ, ಹಳದಿ ಬಣ್ಣದ ನೀರಿನಂಶ ಬಿಡುಗಡೆಯಾಗುತ್ತದೆ. ಈ ಮೂಲಕ ದೇಹವು ಹೆಚ್ಚು ಈಸ್ಟ್ರೋಜೆನ್ ಉತ್ಪಾದಿಸುತ್ತಿದೆ ಎಂಬ ಸಂಕೇತವನ್ನು ನೀಡುತ್ತದೆ.
ಸ್ತ್ರೀರೋಗ ತಜ್ಞರನ್ನು ಯಾವಾಗ ಸಂಪರ್ಕಿಸಬೇಕು?
ಋತುಮತಿಯಾದ 2-3 ವರ್ಷಗಳ ಬಳಿಕವೂ ಋತುಚಕ್ರದಲ್ಲಿ ಏರುಪೇರಾಗುತ್ತಿದ್ದರೆ.
ತಲೆತಿರುಗುವುದು/ಸುಸ್ತಾಗುತ್ತಿದ್ದರೆ,
7 ದಿನಗಳಿಗಿಂತ ಹೆಚ್ಚುಕಾಲ ರಕ್ತಸ್ರಾವವಾದರೆ,
ಎರಡು ಋತುಚಕ್ರಗಳ ನಡುವಿನ ಅಂತರ 20 ದಿನಗಳಿಗಿಂತ ಕಡಿಮೆಯಿದ್ದರೆ.
ಮುಟ್ಟಿನ ಸಮಯದಲ್ಲಿ ಅಸಹನೀಯ ನೋವು ಕಾಣಿಸಿಕೊಂಡರೆ.
ಸ್ವಯಂ ಆರೈಕೆ ಹೇಗೆ?
ಪ್ರತೀ 3-4 ಗಂಟೆಗಳಿಗೊಮ್ಮೆ ಪ್ಯಾಡ್ ಗಳನ್ನು ಬದಲಾಯಿಸಿ.
ಋತುಚಕ್ರ ಸಮಯದಲ್ಲಿ ಉತ್ತಮವಾದ ಪ್ಯಾಡ್, ಟ್ಯಾಂಪ್ಯೂ ಅಥವಾ ಕಪ್ ಅನ್ನು ಬಳಸಬೇಕು.
ಸದಾಕಾಲ ನಿಮ್ಮೊಂದಿಗೆ ಸ್ಯಾನಿಟರಿ ಪ್ಯಾಡ್ ಗಳನ್ನು ಇಟ್ಟುಕೊಂಡಿರಿ.
ಅತೀವ್ರ ಹೊಟ್ಟೆ ನೋವಿದ್ದರೆ, ಹಾಟ್ ವಾಟರ್ ಬ್ಯಾಗ್ ಗಳನ್ನು ಹೊಟ್ಟೆಯ ಬಳಿ ಇಟ್ಟುಕೊಳ್ಳಿ. .
ಅತೀವ್ರ ನೋವಿದ್ದರೆ, ಪ್ಯಾರಾಸಿಟಮೋಲ್ ಮಾತ್ರೆಗಳನ್ನು ತೆಗೆದುಕೊಳ್ಳಿ.
ಪೀರಿಯಡ್ಸ್ ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಲು ಆ್ಯಪ್ ಗಳನ್ನು ಬಳಸಿ.
ಬೆಚ್ಚಗಿನ ನೀರು ಅಥವಾ ದ್ರವ ಪದಾರ್ಥಗಳನ್ನು ಸೇವಿಸಿ
ಶೌಚಾಲಯ ಬಳಕೆ ಮಾಡುವ ಸಂದರ್ಭದಲ್ಲಿ ಯೋನಿಯ ಬಾಹ್ಯ ಭಾಗದಲ್ಲಿ ತೊಳೆಯುತ್ತಿರಿ.