- 2026ರ ಏಪ್ರಿಲ್ 1ರಿಂದ ಸೆಪ್ಟೆಂಬರ್ 30ರವರೆಗೆ (First phase of census 2026) ಮೊದಲ ಹಂತ; 33 ಪ್ರಶ್ನೆಗಳೊಂದಿಗೆ ಡಿಜಿಟಲ್ ಮಾಹಿತಿ ಸಂಗ್ರಹ
- 2027ರ ಫೆಬ್ರವರಿ 9ರಿಂದ 28ರವರೆಗೆ ಎರಡನೇ ಹಂತದ ಜನಸಂಖ್ಯಾ ಮಾಹಿತಿ ಸಂಗ್ರಹ
- ಮನೆಮನೆಗೆ ಡಿಜಿಟಲ್ ಜನಗಣತಿ: ನೀರು, ವಿದ್ಯುತ್, ಶೌಚಾಲಯದ ಮಾಹಿತಿ ಕಡ್ಡಾಯ
New Delhi: ಕೇಂದ್ರ ಸರ್ಕಾರವು 2027ರ ಜನಗಣತಿಗೆ ಅಧಿಕೃತ ಗ್ರೀನ್ ಸಿಗ್ನಲ್ (Green Signal) ನೀಡಿದ್ದು, ದೇಶವ್ಯಾಪಿ (First phase of census 2026) ಮಹತ್ವದ ಅಂಕಿಅಂಶ ಸಂಗ್ರಹಣೆಗೆ ಸಜ್ಜಾಗಿದೆ.
ಗೃಹ ವ್ಯವಹಾರಗಳ ಸಚಿವಾಲಯದ ಘೋಷಣೆಯಂತೆ, ಜನಗಣತಿಯ ಮೊದಲ ಹಂತವಾದ ಮನೆ ಪಟ್ಟಿ ಮತ್ತು ವಸತಿ ಗಣತಿ ಪ್ರಕ್ರಿಯೆ 2026ರ ಏಪ್ರಿಲ್ 1ರಿಂದ ಸೆಪ್ಟೆಂಬರ್ 30ರವರೆಗೆ ನಡೆಯಲಿದೆ.
ಕೋವಿಡ್ (Covid) ಕಾರಣದಿಂದ ಮುಂದೂಡಲ್ಪಟ್ಟಿದ್ದ ಈ ಪ್ರಕ್ರಿಯೆ ಇದೀಗ ಪುನರಾರಂಭವಾಗುತ್ತಿದ್ದು, ದೇಶದ ಸಾಮಾಜಿಕ, ಆರ್ಥಿಕ ಹಾಗೂ ಮೂಲಭೂತ ಸೌಲಭ್ಯಗಳ ನಿಖರ ಚಿತ್ರಣ ನೀಡಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಈ ಮೊದಲ ಹಂತದಲ್ಲಿ ಪ್ರತಿ ಮನೆ ಹಾಗೂ ಕಟ್ಟಡಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಕಟ್ಟಡದ ಸಂಖ್ಯೆ, ಮನೆಯ ನೆಲ, ಗೋಡೆ ಮತ್ತು ಛಾವಣಿಗೆ ಬಳಸಿರುವ ವಸ್ತುಗಳು, ಮನೆಯ ಬಳಕೆಯ ಸ್ವರೂಪ, ಅದರ ಸ್ಥಿತಿ ಹಾಗೂ ವಸತಿ ಘಟಕಗಳ ಸಂಖ್ಯೆ ಮೊದಲಾದ ವಿವರಗಳು ದಾಖಲಾಗಲಿವೆ.
ಜೊತೆಗೆ ಮನೆಯಲ್ಲಿರುವ ಒಟ್ಟು ಸದಸ್ಯರ ಸಂಖ್ಯೆ, ಮನೆಯ ಮುಖ್ಯಸ್ಥರ ಹೆಸರು ಮತ್ತು ಲಿಂಗ, ವಿವಾಹಿತ (First phase of census 2026) ದಂಪತಿಗಳ ಸಂಖ್ಯೆ ಹಾಗೂ ಮನೆ ಮಾಲೀಕತ್ವದ ಸ್ಥಿತಿಯಂತಹ ಮಾಹಿತಿಯೂ ಸೇರಲಿದೆ.
ಈ ಹಂತವು ಜನಸಂಖ್ಯಾ ಗಣತಿಯ ಮೂಲಾಧಾರವಾಗಿರುವುದರಿಂದ, ಅತ್ಯಂತ ನಿಖರತೆ ಮತ್ತು ಪಾರದರ್ಶಕತೆಯೊಂದಿಗೆ ಮಾಹಿತಿ ಸಂಗ್ರಹಿಸುವುದಕ್ಕೆ ಸರ್ಕಾರ ಒತ್ತು ನೀಡಿದೆ.
ಜನಗಣತಿ ಪ್ರಕ್ರಿಯೆಯಲ್ಲಿ ಈ ಬಾರಿ ಮೂಲಭೂತ ಸೌಲಭ್ಯಗಳ ವಿವರವಾದ ಮಾಹಿತಿ ಪ್ರಮುಖ ಸ್ಥಾನ ಪಡೆದಿದೆ.
ಕುಡಿಯುವ ನೀರಿನ ಮೂಲ, ವಿದ್ಯುತ್ ಅಥವಾ ಇತರೆ ಬೆಳಕಿನ ವ್ಯವಸ್ಥೆ, ಶೌಚಾಲಯಕ್ಕೆ ಇರುವ ಪ್ರವೇಶ ಮತ್ತು ಅದರ ಪ್ರಕಾರ, ತ್ಯಾಜ್ಯ ನೀರಿನ ಹೊರಹರಿವು ವ್ಯವಸ್ಥೆ, ಸ್ನಾನದ ಸೌಲಭ್ಯಗಳ ಲಭ್ಯತೆ ಸೇರಿದಂತೆ ದಿನನಿತ್ಯದ ಜೀವನಕ್ಕೆ ಅಗತ್ಯವಾದ ಸೌಲಭ್ಯಗಳ ಕುರಿತು ಪ್ರಶ್ನೆಗಳು ಇರಲಿವೆ.
ಅಲ್ಲದೆ LPG ಅಥವಾ CNG ಸಂಪರ್ಕವಿದೆಯೇ, ಅಡುಗೆಗೆ ಬಳಸುವ ಮುಖ್ಯ ಇಂಧನ ಯಾವುದು ಎಂಬುದನ್ನೂ ದಾಖಲಿಸಲಾಗುತ್ತದೆ. ಈ ಎಲ್ಲ ಮಾಹಿತಿಯನ್ನು ಡಿಜಿಟಲ್ (Digital) ರೂಪದಲ್ಲಿ, ಜನಗಣತಿ ಅಪ್ಲಿಕೇಶನ್ ಮೂಲಕ ಅಥವಾ ಗಣತಿದಾರರ ನೇರ ಭೇಟಿಯ ವೇಳೆ ಸಂಗ್ರಹಿಸಲಾಗುತ್ತದೆ.
ಇದಕ್ಕಿಂತಲೂ ಮುಂದಾಗಿ, ಮನೆಗಳಲ್ಲಿ ಲಭ್ಯವಿರುವ ಉಪಕರಣಗಳು ಮತ್ತು ತಂತ್ರಜ್ಞಾನ ಬಳಕೆಯ ಮಾಹಿತಿಯನ್ನೂ ಜನಗಣತಿಯಲ್ಲಿ ಸೇರಿಸಲಾಗಿದೆ.
ಟ್ರಾನ್ಸಿಸ್ಟರ್ (Transistor) , ರೇಡಿಯೋ, ಟಿವಿ, ಇಂಟರ್ನೆಟ್ ಸಂಪರ್ಕ, ಮೊಬೈಲ್ ಫೋನ್ ಅಥವಾ ಸ್ಮಾರ್ಟ್‌ಫೋನ್ (Smartphone) ಇರುವಿಕೆಯ ಜೊತೆಗೆ ಸಾರಿಗೆ ಸಾಧನಗಳ ವಿವರಗಳನ್ನೂ ಕೇಳಲಾಗುತ್ತದೆ.
ವಿಶೇಷವಾಗಿ, ಮನೆಗಳಲ್ಲಿ ಯಾವ ಧಾನ್ಯಗಳನ್ನು (ಅಕ್ಕಿ, ರಾಗಿ, ಜೋಳ ಮುಂತಾದವು) ಪ್ರಧಾನ ಆಹಾರವಾಗಿ ಸೇವಿಸುತ್ತಾರೆ ಎಂಬ ಮಾಹಿತಿ ಸೇರಿಸುವ ಮೂಲಕ ಆಹಾರ ಪದ್ಧತಿ ಕುರಿತ ಅಂಕಿಅಂಶಗಳನ್ನೂ ಸಂಗ್ರಹಿಸಲಾಗುತ್ತದೆ.
ಜನಗಣತಿಯ ಉದ್ದೇಶಕ್ಕಾಗಿ ಮನೆಯ ಮುಖ್ಯಸ್ಥರ ಅಥವಾ ಸದಸ್ಯರ ಮೊಬೈಲ್ ಸಂಖ್ಯೆಯನ್ನು ಕೇಳಲಾಗುತ್ತದೆ; ಆದರೆ ಈ ಮಾಹಿತಿಯನ್ನು ಕೇವಲ ಅಧಿಕೃತ ಸಂವಹನಕ್ಕಾಗಿ ಮಾತ್ರ ಬಳಸಲಾಗುತ್ತದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಇನ್ನು ಈ ಸಮಗ್ರ ಜನಗಣತಿ ಪ್ರಕ್ರಿಯೆ ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದ ಬಳಿಕ, ಜನಸಂಖ್ಯಾ ಗಣತಿ ಹಂತವನ್ನು 2027ರ ಫೆಬ್ರವರಿ 9ರಿಂದ ಫೆಬ್ರವರಿ 28ರವರೆಗೆ ನಡೆಸಲು ನಿರ್ಧರಿಸಲಾಗಿದೆ.
ಮಾರ್ಚ್ 1, 2027ರ ರಾತ್ರಿ 12 ಗಂಟೆಯನ್ನು ಉಲ್ಲೇಖ ದಿನಾಂಕವಾಗಿ ಪರಿಗಣಿಸಲಾಗುತ್ತದೆ. ವಿಶೇಷವಾಗಿ, ಈ ಬಾರಿ ಜಾತಿ ಮಾಹಿತಿಯನ್ನೂ ಸಂಗ್ರಹಿಸುವ ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿದೆ.
1931ರ ನಂತರ ಮೊದಲ ಬಾರಿಗೆ ಜಾತಿ ಆಧಾರಿತ ಅಂಕಿಅಂಶಗಳು ದಾಖಲೆಯಾಗಲಿದ್ದು, ಇದು ಸಾಮಾಜಿಕ ನ್ಯಾಯ, ಆರ್ಥಿಕ ಯೋಜನೆ ಮತ್ತು ನೀತಿ ರೂಪಣೆಯಲ್ಲಿ ಮಹತ್ವದ ಪಾತ್ರ ವಹಿಸುವ ಸಾಧ್ಯತೆ ಇದೆ. ಸರ್ಕಾರದ ಈ ಹೆಜ್ಜೆ ದೇಶದ ಸಮಗ್ರ ಅಭಿವೃದ್ಧಿಗೆ ದಿಕ್ಕು ತೋರಿಸುವ ಪ್ರಮುಖ ಹಂತವಾಗಲಿದೆ.