• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಧರ್ಮ** ಸಾಮೂಹಿಕ ಸಮಾಧಿ ಪ್ರಕರಣ : ಮಾಸ್ಕ್ ಮ್ಯಾನ್ ಕುರಿತು ಮೊದಲ ಪತ್ನಿಯ ಸ್ಫೋಟಕ ಹೇಳಿಕೆ!

Shwetha Mohan by Shwetha Mohan
in ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
ಧರ್ಮ** ಸಾಮೂಹಿಕ ಸಮಾಧಿ ಪ್ರಕರಣ : ಮಾಸ್ಕ್ ಮ್ಯಾನ್ ಕುರಿತು ಮೊದಲ ಪತ್ನಿಯ ಸ್ಫೋಟಕ ಹೇಳಿಕೆ!
0
SHARES
23
VIEWS
Share on FacebookShare on Twitter
  • ಮಾಸ್ಕ್ ಮ್ಯಾನ್ ಸುಳ್ಳುಗಾರ, ಮೋಸಗಾರ ಎಂದ ಮೊದಲ ಪತ್ನಿಯ ಹೇಳಿಕೆ ವೈರಲ್
  • ಎಸ್‌ಐಟಿ ತನಿಖೆ ವೇಗ ಆನ್‌ಸ್ಪಾಟ್ ಮರಣೋತ್ತರ ಪರೀಕ್ಷೆಗಳ ವಿವರ ಸಂಗ್ರಹ
  • ಮಾಸ್ಕ್ ಮ್ಯಾನ್ ನಂತರದಲ್ಲಿ ಡಾ.ಮಹಾಬಲ ಶೆಟ್ಟಿ ವಿಚಾರಣೆ (First wifes explosive statement about Mask Man)

Manglore: ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿರುವ ಧರ್ಮ** ಸಾಮೂಹಿಕ ಸಮಾಧಿ ಪ್ರಕರಣದಲ್ಲಿ ಮಾಸ್ಕ್ ಮ್ಯಾನ್ ಎಂದು ಗುರುತಿಸಲ್ಪಟ್ಟಿರುವ ವ್ಯಕ್ತಿ ಕುರಿತು ಈಗ ಹೊಸ ತಿರುವು ಸಿಕ್ಕಿದೆ.

ನೂರಾರು ಶ*ಗಳನ್ನು ಹೂತುಬಿಟ್ಟಿದ್ದೇನೆ ಎಂದು ಆರೋಪ ಮಾಡಿದ್ದ ಆ ಮುಸುಕುಧಾರಿಯ ಬಗ್ಗೆ ಅವನ ಮೊದಲ ಪತ್ನಿಯೇ ಬಾಯ್ಬಿಟ್ಟಿದ್ದು,

ಆತ ಸುಳ್ಳುಗಾರ ಮತ್ತು ಮೋಸಗಾರನೆಂದು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದಾರೆ.ಮಾಸ್ಕ್ ಮ್ಯಾನ್ ಯಾರು ಎಂಬ ಕುತೂಹಲ ದೇಶದಾದ್ಯಂತ ಹೆಚ್ಚಿದ್ದ ಸಂದರ್ಭದಲ್ಲಿ,

ಇತ್ತೀಚೆಗೆ ಅವನ ಸ್ನೇಹಿತ ರಾಜು ಕೆಲವು ವಿಷಯಗಳನ್ನು ಹಂಚಿಕೊಂಡಿದ್ದ. ಇದರ ಬೆನ್ನಲ್ಲೇ ಇದೀಗ ಅವನ ಮೊದಲ ಪತ್ನಿ ಮಾಧ್ಯಮಗಳ ಮುಂದೆ ಬಂದು, ನಾನು ಆತನ ಪತ್ನಿ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾಳೆ.

ಮಂಡ್ಯ ಜಿಲ್ಲೆಯ ಈ ಮಹಿಳೆ ತನ್ನ ಪತಿ ಬಗ್ಗೆ ನೀಡಿದ ಮಾಹಿತಿ ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ಅವಳ ಪ್ರಕಾರ, 1999ರಲ್ಲಿ ಇವರ ಮದುವೆ ಆಗಿದ್ದು, ಏಳು ವರ್ಷಗಳ ಕಾಲ ಸಂಸಾರ ನಡೆಸಿದ್ದಾರೆ. ಇವರಿಗೆ ಒಬ್ಬ ಹೆಣ್ಣುಮಗಳು, ಒಬ್ಬ ಗಂಡುಮಗನು ಇದ್ದಾರೆ.

First wifes explosive statement about Mask Man
ಆದರೆ ಸಂಸಾರ ಜೀವನದಲ್ಲಿ ಆತ ಎಂದಿಗೂ ಒಳ್ಳೆಯತನ ತೋರಲಿಲ್ಲ. ಸದಾ ಸುಳ್ಳು ಹೇಳುತ್ತಿದ್ದು, ಆಕೆಯನ್ನು ಹೊಡೆಯುತ್ತಿದ್ದ, ಬಡಿತ ಮಾಡುತ್ತಿದ್ದ ಎಂದು ಮೊದಲ ಪತ್ನಿ ಹೇಳಿಕೆ ನೀಡಿದ್ದಾರೆ.

ವಿಚ್ಛೇದನ ಸಮಯದಲ್ಲಿ ಜೀವನಾಂಶ ನೀಡಲು ಕೆಲಸವಿಲ್ಲ ಎಂದು ಕೋರ್ಟ್‌ಗೆ ಸುಳ್ಳು ಹೇಳಿ ಮೋಸ ಮಾಡಿದ್ದನೆಂದೂ, ತಾನು ಮತ್ತು ತನ್ನ ಮಕ್ಕಳು ತಾಯಿಯ ನೆರವಿನಿಂದ ಬದುಕಬೇಕಾದ ಪರಿಸ್ಥಿತಿ

ಎದುರಾಯಿತೆಂದೂ ಆಕೆ ತಿಳಿಸಿದ್ದಾರೆ.“ಅವನ ಅಹಂಕಾರಕ್ಕೆ ಮಿತಿಯೇ ಇಲ್ಲ. ಅಣ್ಣ-ತಮ್ಮಂದಿರಿಗೂ ಬೈಯುತ್ತಿದ್ದ. ಅವನು ಮೋಸಗಾರ, ಸುಳ್ಳುಗಾರ.

ಅವನಿಂದ ದೂರವಾದದ್ದು ನನ್ನ ಜೀವನಕ್ಕೆ ಒಳ್ಳೆಯದಾಯಿತು. ಮತ್ತೊಬ್ಬಳನ್ನು ಮದುವೆಯಾಗಲು ನನ್ನ ಮೇಲೆ ಹಿಂಸೆ ನಡೆಸಿ ಮನೆ ಬಿಟ್ಟನು” ಎಂದು ಆಕೆ ಹೇಳಿಕೊಂಡಿದ್ದಾರೆ.

ಮದುವೆಯ ನಂತರ ಧರ್ಮ**ದ ನೇತ್ರಾವತಿ ಪ್ರದೇಶದಲ್ಲಿ ಏಳು ವರ್ಷಗಳ ಕಾಲ ವಾಸವಾಗಿದ್ದು, ಆ ಸಮಯದಲ್ಲಿ ದೇವಸ್ಥಾನದಲ್ಲಿ ಕಸ ತೆಗೆದು ಹಾಕುವುದು,

ಬಾತ್‌ರೂಮ್ ತೊಳೆಯುವಂತಹ ಕೆಲಸಗಳನ್ನು ಮಾಡುತ್ತಿದ್ದನೆಂದೂ ಅವರು ಬಿಚ್ಚಿಟ್ಟಿದ್ದಾರೆ.ಈಗ ಆತ ನೂರಾರು ಶ*ಗಳನ್ನು ಹೂತಿದ್ದೇನೆ ಎಂದು ಹೇಳಿಕೊಳ್ಳುತ್ತಿರುವುದು ನಿಜವಲ್ಲ.

“ದುಡ್ಡಿನ ಆಮಿಷಕ್ಕೆ ಹೀಗೆ ಹೇಳುತ್ತಿರುವನು. ಧರ್ಮ** ಎಂದರೆ ನಮಗೆ ಪ್ರೀತಿಯ ಸ್ಥಳ. ಅಲ್ಲಿ ಶ*ಗಳನ್ನು ಹೂತಿದ್ದಾರೆ ಎನ್ನುವುದು ಕೇವಲ ಸುಳ್ಳು. ಗುಂಡಿ ತೋಡಿದರೂ ಏನೂ ಸಿಕ್ಕಿಲ್ಲ.

ಅ*ಚಾರ, ಕೊ* ನಡೆದ ಶ*ಗಳ ಬಗ್ಗೆ ಆತ ಯಾವತ್ತೂ ಹೇಳಿರಲಿಲ್ಲ” ಎಂದು ಆಕೆ ಸ್ಪಷ್ಟಪಡಿಸಿದ್ದಾರೆ.

ಇನ್ನು ಈ ಕುರಿತಾಗಿ ಮತ್ತಷ್ಟು ಮಾಹಿತಿ ಹಂಚಿಕೊಂಡ ಆಕೆ ನಮ್ಮ ಮನೆಯವರಿಗೆ ಧರ್ಮ**ದ ಮೇಲೆ ಪ್ರೀತಿ. ಅಲ್ಲಿ ಕೆಲಸ ಕೊಟ್ಟ, ಅನ್ನ ಕೊಟ್ಟ ಜಾಗಕ್ಕೆ ಆತ ಅನ್ಯಾಯ ಮಾಡುತ್ತಿದ್ದಾನೆ.

ದೇವಸ್ಥಾನದ ಹೆಸರನ್ನು ಹಾಳುಮಾಡಲು ಯತ್ನಿಸುತ್ತಿದ್ದಾನೆ. ಇವನ ಸತ್ಯ ಸ್ವರೂಪ ಬಹಿರಂಗವಾಗಬೇಕು. ಅವನು ಸತ್ತು ಹೆಣ ಆದರೂ ನಾವು ಹೋಗಿ ನೋಡುವುದಿಲ್ಲ ಎಂದು ಕಿಡಿ ಕಾರಿದ್ದಾರೆ.

ಇದೇ ವೇಳೆ ಮಾಸ್ಕ್ ಮ್ಯಾನ್ ಅವರ ಕುಟುಂಬದವರು ಒಳ್ಳೆಯವರಾಗಿದ್ದು, ಆತ ತನ್ನನ್ನು ಹೊಡೆದಾಗ ಅವರೇ ನನ್ನನ್ನು ಬೆಂಬಲಿಸಿದ್ದರು. “ಟಿವಿಯಲ್ಲಿ ಅವನನ್ನು ನೋಡಿದ ಕ್ಷಣವೇ ಆತನ ದೇಹದ ಆಕಾರ ನೋಡಿ ಗುರುತಿಸಿದೆ”

ಎಂದು ಪತ್ನಿ ಹೇಳಿಕೆ ನೀಡಿದ್ದಾರೆ.ಇನ್ನೊಂದೆಡೆ, ಧರ್ಮ** ಪ್ರಕರಣವನ್ನು ತನಿಖೆ ಮಾಡುತ್ತಿರುವ ಎಸ್‌ಐಟಿ (SIT) ತಂಡ ಮಾಸ್ಕ್ ಮ್ಯಾನ್ ಮೇಲೆ ತೀವ್ರ ವಿಚಾರಣೆ ನಡೆಸುತ್ತಿದೆ.

ನಿನ್ನೆ ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಅವರ ಸಮ್ಮುಖದಲ್ಲಿ ವಿಚಾರಣೆ ನಡೆದಿದ್ದು, ಇಂದು ಹಲವು ಆಯಾಮಗಳಲ್ಲಿ ತನಿಖೆ ಮುಂದುವರಿಯುತ್ತಿದೆ.

ಫಾರೆನ್ಸಿಕ್ ತಜ್ಞ ಡಾ. ಮಹಾಬಲ ಶೆಟ್ಟಿ ಕೂಡ 20ಕ್ಕೂ ಹೆಚ್ಚು ಶ*ಗಳ ಮರಣೋತ್ತರ ಪರೀಕ್ಷೆ ನಡೆಸಿದ್ದಾಗಿ ಹೇಳಿಕೆ ನೀಡಿದ್ದು, ಆ ಮಾಹಿತಿಯನ್ನು ಸಹ ಎಸ್‌ಐಟಿ ಸಂಗ್ರಹಿಸಿದೆ.

ಇದನ್ನು ಓದಿ :  ಧರ್ಮ** ಶೋಧ ಕಾರ್ಯಾಚರಣೆ, ಅಸ್ಥಿಪಂಜರ,ಮೂಳೆ ಮಣ್ಣುಗಳನ್ನ FSL ಗೆ ರವಾನಿಸಿದ್ದೇವೆ, ಎಫ್‌ಎಸ್‌ಎಲ್ ವರದಿ ಬರುವವರೆಗೂ ತಾತ್ಕಾಲಿಕ ಸ್ಥಗಿತ: ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ

ಧರ್ಮ**ದಲ್ಲಿ ನಡೆದ ಆನ್‌ಸ್ಪಾಟ್ ಮರಣೋತ್ತರ ಪರೀಕ್ಷೆಗಳ ಬಗ್ಗೆ ಕೂಡ ಎಸ್‌ಐಟಿ ಅನುಮಾನ ವ್ಯಕ್ತಪಡಿಸಿದ್ದು, ಸ್ಥಳದಲ್ಲೇ ಶ*ಗಳ ಮರಣೋತ್ತರ ಪರೀಕ್ಷೆ ಏಕೆ ನಡೆಸಲಾಯಿತು ಎಂಬುದರ ಬಗ್ಗೆ ತನಿಖೆ ನಡೆಯಲಿದೆ ಎನ್ನಲಾಗಿದೆ. ಈ ಮೂಲಕ ಧರ್ಮ** ಸಾಮೂಹಿಕ ಸಮಾಧಿ ಪ್ರಕರಣ ಮತ್ತಷ್ಟು ಕುತೂಹಲಕಾರಿ ಹಂತ ತಲುಪಿದೆ. (First wifes explosive statement about Mask Man)

Tags: DharmasthalainvestigationMask ManpolicePranav MohantySIT

Related News

ಕೇರಳದಲ್ಲಿ ಶಿಗೆಲ್ಲಾ ಸೋಂಕಿನ ಆತಂಕ: 443 ಮಂದಿಗೆ ಸೋಂಕಿನ ಶಂಕೆ, ಆರೋಗ್ಯ ಇಲಾಖೆ ಹೈ ಅಲರ್ಟ್
ಪ್ರಮುಖ ಸುದ್ದಿ

ಕೇರಳದಲ್ಲಿ ಶಿಗೆಲ್ಲಾ ಸೋಂಕಿನ ಆತಂಕ: 443 ಮಂದಿಗೆ ಸೋಂಕಿನ ಶಂಕೆ, ಆರೋಗ್ಯ ಇಲಾಖೆ ಹೈ ಅಲರ್ಟ್

June 9, 2026
ಇನ್ಮುಂದೆ ಐಡಿ ಕಾರ್ಡ್ ಇಲ್ಲದಿದ್ದರೆ ಪಬ್, ಬಾರ್, ಕ್ಲಬ್‌ಗಳಿಗೆ ಪ್ರವೇಶ ಇಲ್ಲ: ಅಪ್ರಾಪ್ತರ ಮದ್ಯಪಾನ ತಡೆಗೆ ರಾಜ್ಯ ಸರ್ಕಾರದ ಕಟ್ಟುನಿಟ್ಟಿನ ಕ್ರಮ
ಪ್ರಮುಖ ಸುದ್ದಿ

ಇನ್ಮುಂದೆ ಐಡಿ ಕಾರ್ಡ್ ಇಲ್ಲದಿದ್ದರೆ ಪಬ್, ಬಾರ್, ಕ್ಲಬ್‌ಗಳಿಗೆ ಪ್ರವೇಶ ಇಲ್ಲ: ಅಪ್ರಾಪ್ತರ ಮದ್ಯಪಾನ ತಡೆಗೆ ರಾಜ್ಯ ಸರ್ಕಾರದ ಕಟ್ಟುನಿಟ್ಟಿನ ಕ್ರಮ

June 9, 2026
ಟಾಟಾ ಮ್ಯೂಚುವಲ್ ಫಂಡ್‌ನಿಂದ ಗೋಲ್ಡ್ ಇಟಿಎಫ್ ಹೂಡಿಕೆಗೆ ತಾತ್ಕಾಲಿಕ ನಿರ್ಬಂಧ: ಎಸ್‌ಐಪಿ ಹೂಡಿಕೆದಾರರಿಗೆ ಯಾವುದೇ ಬದಲಾವಣೆಗಳಿಲ್ಲ
ಪ್ರಮುಖ ಸುದ್ದಿ

ಟಾಟಾ ಮ್ಯೂಚುವಲ್ ಫಂಡ್‌ನಿಂದ ಗೋಲ್ಡ್ ಇಟಿಎಫ್ ಹೂಡಿಕೆಗೆ ತಾತ್ಕಾಲಿಕ ನಿರ್ಬಂಧ: ಎಸ್‌ಐಪಿ ಹೂಡಿಕೆದಾರರಿಗೆ ಯಾವುದೇ ಬದಲಾವಣೆಗಳಿಲ್ಲ

June 9, 2026
H-1B ವೀಸಾ ಅರ್ಜಿದಾರರಿಗೆ ಮಹತ್ವದ ಜಯ: ಟ್ರಂಪ್ ಹೇರಿದ್ದ ₹83 ಲಕ್ಷ ‘ಫಾಸ್ಟ್-ಟ್ರ್ಯಾಕ್’ ಶುಲ್ಕ ರದ್ದು
ದೇಶ-ವಿದೇಶ

H-1B ವೀಸಾ ಅರ್ಜಿದಾರರಿಗೆ ಮಹತ್ವದ ಜಯ: ಟ್ರಂಪ್ ಹೇರಿದ್ದ ₹83 ಲಕ್ಷ ‘ಫಾಸ್ಟ್-ಟ್ರ್ಯಾಕ್’ ಶುಲ್ಕ ರದ್ದು

June 9, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.