Kerala : ಸಾಲ (Loan) ಪಡೆದು ಅದನ್ನು ಮರುಪಾವತಿ ಮಾಡುವಲ್ಲಿ ವಿಫಲವಾಗಿದ್ದ ಕೇರಳದ (Kerala) ಮೀನು ವ್ಯಾಪಾರಿಗೆ ಒಲಿದು ಬಂತು ಅದೃಷ!
ಸಾಲ ಮಾಡಿ ಅದನ್ನು ಮರುಪಾವತಿ ಮಾಡುವಲ್ಲಿ ಹಲವು ಬಾರಿ ವಿಫಲನಾಗಿದ್ದ ಮೀನು ವ್ಯಾಪಾರಿಗೆ, ಬ್ಯಾಂಕ್‌ನಿಂದ ಅಟ್ಯಾಚ್‌ಮೆಂಟ್ ನೋಟಿಸ್ ಮನೆ ಬಾಗಿಲಿಗೆ ಬಂದಿತ್ತು.

ಬ್ಯಾಂಕ್ ಕಳಿಸಿದ ಗಡುವು ನೋಟಿಸ್ ಸ್ವೀಕರಿಸಿದ ಕೆಲವೇ ಗಂಟೆಗಳ ಬಳಿಕ, ಕೇರಳದ ಮೀನು ವ್ಯಾಪಾರಿಗೆ ರಾಜ್ಯ ಸರ್ಕಾರದ 70 ಲಕ್ಷ ರೂಪಾಯಿ ಅಕ್ಷಯ ಲಾಟರಿ (Fish seller wins 70 lakh lottery) ಬಂಪರ್ ಉಡುಗೊರೆಯಾಗಿ ಬಂದಿದೆ.
ಅಕ್ಟೋಬರ್ 12 ರಂದು ಪೂಕುಂಜು ಎಂಬ ವ್ಯಕ್ತಿ ಮೀನು ಸಂಗ್ರಹಿಸಲು ತೆರಳುತ್ತಿದ್ದಾಗ ಮೊದಲ ಬಹುಮಾನದ 70 ಲಕ್ಷ ರೂಪಾಯಿಗಳ ಅಕ್ಷಯ ಲಾಟರಿ ಟಿಕೆಟ್ ಖರೀದಿಸಿದ್ದರು ಎನ್ನಲಾಗಿದೆ.
ಮಧ್ಯಾಹ್ನ ಮನೆಗೆ ಹಿಂದಿರುಗಿದಾಗ ಸುಮಾರು 9 ಲಕ್ಷ ರೂಪಾಯಿ ಸಾಲವನ್ನು ಮರುಪಾವತಿಸಲು ಸಾಧ್ಯವಾಗದ ಕಾರಣ ಬ್ಯಾಂಕ್ ಅಧಿಕಾರಿಗಳು ಪೂಕುಂಜು ಮನೆಗೆ ಅಟ್ಯಾಚ್‌ಮೆಂಟ್ ನೋಟಿಸ್ ಕಳುಹಿಸಿದೆ.
ಈ ನೋಟಿಸ್ ನೋಡಿ ತಲೆಯ ಮೇಲೆ ಕೈಹೊತ್ತು ಕುಳಿತ ವ್ಯಕ್ತಿಗೆ ಅದೃಷ್ಟವೇ ಮನೆ (Fish seller wins 70 lakh lottery) ಬಾಗಿಲಿಗೆ ಬಂದಿದ್ದು ನಿಜಕ್ಕೂ ಅಶ್ಚರ್ಯವೇ!
ಇದನ್ನೂ ಓದಿ : https://vijayatimes.com/congress-points-out-bjp/
ಸ್ವತಃ ಈ ಬಗ್ಗೆ ಮಾತನಾಡಿದ ಪೂಕುಂಜು ಅವರ ಹೆಂಡತಿ, ಬ್ಯಾಂಕ್‌ನಿಂದ ನೋಟಿಸ್ ಬಂದ ನಂತರ ನಾವು ಹತಾಶೆಯಲ್ಲಿದ್ದೆವು, ನಮಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ನಮ್ಮ ಆಸ್ತಿಯನ್ನು ಮಾರಾಟ ಮಾಡಬೇಕೇ ಎಂಬ ಯೋಚನೆಯಲ್ಲಿ ಮುಳುಗಿದ್ದೆವು ಎಂದು ಹೇಳಿಕೊಂಡಿದ್ದಾರೆ.
ಯಾರಿಗೆ ಯಾವ ಸಮಯಕ್ಕೆ ಸರಿಯಾಗಿ ಏನು ಸೇರಬೇಕೋ ಅದು ಸೇರುತ್ತದೆ ಎಂಬ ಹಿರಿಯರ ಮಾತು ಸತ್ಯವಾದಂತೆ, ನೋಟಿಸ್ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ, ಲಾಟರಿಯ ವಿಜೇತ ಸಂಖ್ಯೆ ಘೋಷಣೆಯಾಗಿ, ಪೂಕುಂಜು ಅವರಿಗೆ 70 ಲಕ್ಷ ರೂ. ನಗದು ಮೊದಲ ಬಹುಮಾನವಾಗಿ ದೊರೆತಿದೆ.

ಕೆಲವೇ ಗಂಟೆಗಳ ಹಿಂದೆ ಸಾಲದ ಸುಳಿಯಲ್ಲಿ ಸಿಲುಕಿದ್ದ ವ್ಯಕ್ತಿ ಈಗ ಲಕ್ಷಾಧಿಪತಿಯಾಗಿದ್ದಾನೆ ಎಂಬುದು ನಿಜಕ್ಕೂ ಅಚ್ಚರಿಯ ಸಂಗತಿ! ಪೂಕುಂಜು ಅವರ ಪತ್ನಿ, ಮೊದಲು ನಮ್ಮ ಪತಿ ಎಲ್ಲಾ ಸಾಲಗಳನ್ನು ತೀರಿಸುತ್ತಾರೆ ಮತ್ತು ನಂತರ ಅವರ ಮಕ್ಕಳ ಉತ್ತಮ ಶಿಕ್ಷಣಕ್ಕಾಗಿ ಮೀಸಲಿಡುತ್ತಾರೆ.
ಇದರಿಂದ ನಾವು ಜೀವನದಲ್ಲಿ ಉತ್ತಮ ಮಟ್ಟವನ್ನು ತಲುಪುವಲ್ಲಿ ಇದು ಸಹಕಾರಿಯಾಗಲಿದೆ ಎಂದು ಹೇಳುವ ಮೂಲಕ ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.