ಇಡೀ ಜಗತ್ತನ್ನು ಕಾಡುತ್ತಿರುವ ಖಾಯಿಲೆಗಳಲ್ಲಿ ಕ್ಯಾನ್ಸರ್ ಖಾಯಿಲೆಯೂ ಕೂಡ ಪ್ರಮುಖವಾದದ್ದು, ಅದರಲ್ಲೂ ಕೂಡ ಮಹಿಳೆಯರಿಗೆ ಕ್ಯಾನ್ಸರ್ ಖಾಯಿಲೆ ಅತಿಯಾಗಿ ಕಾಡುತ್ತದೆ.
ಜನರಲ್ಲಿ ಕ್ಯಾನ್ಸರ್ ನ ಬಗ್ಗೆ ಜಾಗೃತಿಯನ್ನು ಮೂಡಿಸುವ ಸಲುವಾಗಿ ಫೆಬ್ರವರಿ 4 ರಂದು ವಿಶ್ವ ಕ್ಯಾನ್ಸರ್ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತದೆ. ಅಷ್ಟೇ ಅಲ್ಲದೆ ಜನರ ಮನಸಿನಲ್ಲಿ ಇರುವ ಭಯ ಮತ್ತು ತಪ್ಪು ಕಲ್ಪನೆಯನ್ನು ಹೋಗಲಾಡಿಸುವುದು ಈ ದಿನದ ಪ್ರಮುಖ ಉದ್ದೇಶವಾಗಿರುತ್ತದೆ. ಕ್ಯಾನ್ಸರ್ ಪೀಡಿತ ರೋಗಿಗಳಿಗೆ ಉಂಟಾಗುವ ತೊಂದರೆಗಳ ಬಗ್ಗೆ ಹೇಗೆ ಎಚ್ಚರ ವಹಿಸಬೇಕು,ಕ್ಯಾನ್ಸರ್ ಬಂದ ನಂತರ ವ್ಯಕ್ತಿಯು ತನ್ನ ಮುಂದಿನ ಹೆಜ್ಜೆಯನ್ನು ಹೇಗೆ ಧೈರ್ಯದಿಂದ ಸಾಗಿಸಬೇಕು ಮತ್ತು ಆರೋಗ್ಯದ ಬಗ್ಗೆ ಹೇಗೆ ಕಾಳಜಿ ವಹಿಸಬೇಕು ಎಂಬ ಅರಿವು ಮೂಡಿಸುತ್ತದೆ.

ಕ್ಯಾನ್ಸರ್ ನ ಬಗ್ಗೆ ಹೆದರುವ ರೋಗಿಗಳಿಗೆ ಧೈರ್ಯ ತುಂಬುವ ಸಲುವಾಗಿಯೂ ಕೂಡಾ ವಿಶ್ವ ಕ್ಯಾನ್ಸರ್ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಅಷ್ಟೇ ಅಲ್ಲ ಎಷ್ಟೋ ಜನರ ಮನಸ್ಸಲ್ಲಿ ತಪ್ಪು ಕಲ್ಪನೆ ಇರುತ್ತದೆ ಮತ್ತು ಕ್ಯಾನ್ಸರ್ ಪೀಡಿತ ರೋಗಿಗಳನ್ನು ಜನರು ನೋಡುವ ದೃಷ್ಟಿಯೇ ಬೇರೆಯಾಗಿರುತ್ತದೆ. ಇದು ಕ್ಯಾನ್ಸರ್ ಪೀಡಿತ ರೋಗಿಗಳಿಗೆ ಬಹಳ ಅವಮಾನ ಮತ್ತು ನೋವನ್ನುಂಟು ಮಾಡುತ್ತದೆ. ಕ್ಯಾನ್ಸರ್ ಖಾಯಿಲೆ ಬಗ್ಗೆ ಜನರಲ್ಲಿ ಸಾಮಾನ್ಯರಿಗೆ ಅರಿವನ್ನು ಮೂಡಿಸುವುದು ಸಹ ಈ ಆಚರಣೆಯ ಪ್ರಮುಖ ಉದ್ದೇಶವಾಗಿದೆ.
ಕ್ಯಾನ್ಸರ್ ಎಂಬುದು ಮಾರಣಾಂತಿಕ ಖಾಯಿಲೆಯಾಗಿದ್ದು, ಇವು ಮನುಷ್ಯನ ಆರೋಗ್ಯಕ್ಕೆ ಭಾರೀ ಹಾನಿಯನ್ನುಂಟು ಮಾಡುತ್ತದೆ. ಕ್ಯಾನ್ಸರ್ ಕೆಲವು ಬಾರಿ ಮೊದಲ ಹಂತದಲ್ಲಿ ಪತ್ತೆಯಾದರೆ, ಇನ್ನೂ ಕೆಲವು ಬಾರಿ ಕೊನೆಯ ಹಂತದಲ್ಲಿ ಪತ್ತೆಯಾಗುತ್ತದೆ. ಇದರ ಚಿಕಿತ್ಸೆಗಾಗಿ ಲಕ್ಷಾನುಗಟ್ಟಲೆ ಹಣ್ಣವನ್ನು ಕಟ್ಟಬೇಕಾದ ಪರಿಸ್ಥಿತಿ ಇಂದು ಬಂದಿದೆ. ಕ್ಯಾನ್ಸರ್ ನ ಬಗ್ಗೆ ಪ್ರತಿ ವ್ಯಕ್ತಿಯೂ ಕೂಡ ಕಾಳಜಿವಹಿಸುವುದು ಮುಖ್ಯವಾಗಿದೆ.

ಕ್ಯಾನ್ಸರ್ ಎಂಬುದು ಪುರುಷ ಮತ್ತು ಮಹಿಳೆಯರಿಬ್ಬರಲ್ಲೂ ಇರುತ್ತದೆ. ಅದರಲ್ಲೂ ಕೂಡ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವಂತ ಕ್ಯಾನ್ಸರ್ ಖಾಯಿಲೆ. ಪುರುಷರು ಹೆಚ್ಚಾಗಿ ಧೂಮಪಾನ, ಮದ್ಯಪಾನ ಮಾಡುವುದರಿಂದ ಕ್ಯಾನ್ಸರ್ ಬರುತ್ತದೆ. ಆದರೆ ಕೆಲವು ಕ್ಯಾನ್ಸರ್ ಖಾಯಿಲೆಗಳು ಮಾತ್ರ ಪ್ರಮುಖವಾಗಿ ಮಹಿಳೆಯರಲ್ಲಿ ಕಂಡುಬರುತ್ತವೆ. ಮಹಿಳೆಯರು ಕೂಡ ಇಂದಿನ ದಿನಗಳಲ್ಲಿ ಧೂಮಪಾನ ಮತ್ತು ಮದ್ಯಪಾನ ಮಾಡುತ್ತಾರೆ. ಕೊಬ್ಬಿನ ಆಹಾರವನ್ನು ಸೇವಿಸುತ್ತಾರೆ, ಸರಿಯಾದ ಆಹಾರ ಕ್ರಮ ಪಾಲನೆ ಮಾಡುವುದಿಲ್ಲ, ವ್ಯಾಯಾಮ ವನ್ನು ಕೂಡ ಮಾಡುವುದಿಲ್ಲ. ಇವೆಲ್ಲವೂ ಕೂಡ ಮಹಿಳೆಯರಲ್ಲಿ ಹೆಚ್ಚಾಗಿ ಕ್ಯಾನ್ಸರ್ ಪ್ರವೇಶಿಸಲು ಪ್ರಮುಖ ಕಾರಣವಾಗಿದೆ.
ಮಹಿಳೆಯರಲ್ಲಿ ಕಂಡುಬರುವ ಕ್ಯಾನ್ಸರ್ ನ ವಿಧಗಳು ಹೀಗಿವೆ.

ಸ್ತನ ಕ್ಯಾನ್ಸರ್ : ಸ್ತನ ಕ್ಯಾನ್ಸರ್ ಐವತ್ತು ವರ್ಷಕ್ಕಿಂತ ಮೇಲ್ಪಟ್ಟವರಿಗೆ ಹೆಚ್ಚಾಗಿ ಕಾಡುತ್ತದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಮಕ್ಕಳಾಗದೇ ಇರುವುದು ,ಕೆಂಪು ಮಾಂಸ ಸೇವನೆ , ಧೂಮಪಾನ, ಮದ್ಯಪಾನ ಮಾಡುವುದು. ಕ್ಯಾನ್ಸರ್ ನ ಬಗ್ಗೆ ಮುಂಜಾಗ್ರತಾ ಕ್ರಮವಾಗಿ 20 ವರ್ಷವಾದ ನಂತರ ಪ್ರತಿ ಮಹಿಳೆಯರು ಕೂಡ ತಿಂಗಳಿಗೊಮ್ಮೆ ಸ್ತನ ಕ್ಯಾನ್ಸರ್ ಪರೀಕ್ಷೆ ಮಾಡಿಸಬೇಕು ಎಂದು ರಾಷ್ಟ್ರೀಯ ಸ್ತನ ಕ್ಯಾನ್ಸರ್ ಫೌಂಡೇಷನ್ ಹೇಳುತ್ತದೆ.

ಗರ್ಭಕೋಶ ಕ್ಯಾನ್ಸರ್ :
ಗರ್ಭಕೋಶದ ಕ್ಯಾನ್ಸರ್ ಸಾಮಾನ್ಯವಾಗಿ 35ರ ವಯಸ್ಸಿನಲ್ಲಿ ಬರುತ್ತದೆ ಮತ್ತು 55 ಮತ್ತು 64 ನಂತರ ಇದು ತೀವ್ರಗೊಳ್ಳುತ್ತದೆ ಎಂದು ಕೆಲವು ಅಧ್ಯಯನಗಳು ತಿಳಿಸಿವೆ. ಇದಕ್ಕೆ ಪ್ರಮುಖ ಕಾರಣವೆಂದರೆ ಗರ್ಭ ನಿಲ್ಲದಂತೆ ಮಾತ್ರ ತೆಗೆದುಕೊಳ್ಳುವುದು, ಅತಿಯಾದ ಬೊಜ್ಜು ,ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವಾಗದಂತೆ ಮಾತ್ರೆ ತೆಗೆದುಕೊಳ್ಳುವುದು, ಇವೆಲ್ಲವೂ ಕೂಡ ಗರ್ಭಕೋಶ ಕ್ಯಾನ್ಸರ್ ಗೆ ಬಹುಮುಖ್ಯ ಕಾರಣವಾಗಿದೆ. ಗರ್ಭಕೋಶ ಕ್ಯಾನ್ಸರ್ ಇದ್ದರೆ ಜೀರಿಗೆ, ಶೇಂಗಾ ಬೀಜ, ಬೆಂಡೆಕಾಯಿ, ಹಸಿರುಎಲೆ ಮತ್ತು ತರಕಾರಿಗಳನ್ನು ಸೇವಿಸುವುದು ಉತ್ತಮ.

ಚರ್ಮದ ಕ್ಯಾನ್ಸರ್ :
ಕಾಲ ಕಳೆದಂತೆ ಮಹಿಳೆಯರು ಹೆಚ್ಚಾಗಿ ತಮ್ಮ ಮುಖದ ಅಂದ, ಚಂದವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಅನೇಕ ಫೇಸ್ ಪ್ಯಾಕ್ ಅನ್ನು ಬಳಕೆ ಮಾಡುತ್ತಾರೆ. ಫೇಸ್ ಪ್ಯಾಕ್ ಗಳಲ್ಲಿ ಬಹಳಷ್ಟು ಕೆಮಿಕಲ್ ಬಳಸುವುದರಿಂದ ಅದನ್ನು ಮುಖಕ್ಕೆ ಹಚ್ಚಿದ ನಂತರ ಚರ್ಮವೆಲ್ಲಾ ಸುಕ್ಕುಗಟ್ಟಿದಂತಾಗುತ್ತದೆ. ಇದನ್ನು ರೂಡಿಸಿಕೊಳ್ಳುವ ಮಹಿಳೆಯರು ತಮಗೆ ಗೊತ್ತಿಲ್ಲದ ರೀತಿಯಲ್ಲಿ ಚರ್ಮದ ಕ್ಯಾನ್ಸರ್ ಗೆ ತುತ್ತಾಗುತ್ತಾರೆ.

ಕರುಳಿನ ಕ್ಯಾನ್ಸರ್ :
ಕರುಳಿನ ಕ್ಯಾನ್ಸರ್ ನಮ್ಮ ಭಾರತದಲ್ಲಿ ಏರುತ್ತಲೇ ಇದೆ.
ಕರುಳಿನ ಕ್ಯಾನ್ಸರ್ ನ ಪ್ರಮಾಣವು ಅಪಾರ ಪ್ರಮಾಣದಲ್ಲಿ ಇರುವುದರಿಂದ ಇದಕ್ಕೆ ಚಿಕಿತ್ಸೆ ಕೂಡ ಸರಿಯಾದ ಸಮಯದಲ್ಲಿ ಸಿಗುತ್ತಿಲ್ಲ. ಆದ್ದರಿಂದ ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ.
ಹೀಗಾಗಿ ಮಹಿಳೆಯರು ಆದಷ್ಟೂ ಕರುಳಿನ ಕ್ಯಾನ್ಸರ್ ನ ಬಗ್ಗೆ ಎಚ್ಚರಿಕೆ ವಹಿಸಬೇಕು.
ತುಟಿ ಮತ್ತು ಬಾಯಿಯ ಕ್ಯಾನ್ಸರ್ :

ಬಾಯಿ ಕ್ಯಾನ್ಸರ್ ಎಂಬುದು ಬಹಳ ಅಪಾಯಕಾರಿ ಕ್ಯಾನ್ಸರ್. ಬಾಯಿಯಲ್ಲಿ ದುರ್ಮಾಂಸ ಹುಟ್ಟಿಕೊಳ್ಳುವುದು ಮತ್ತು ಊದಿಕೊಳ್ಳುವುದು ಇದು ಬಾಯಿ ಕ್ಯಾನ್ಸರ್ ನ ಮುಖ್ಯ ಲಕ್ಷಣವಾಗಿದೆ. ಗಟ್ಟಿ ಪದಾರ್ಥಗಳನ್ನು ಸೇವಿಸಿದ ನಂತರ ಹಲ್ಲುಗಳು ತಾನಾಗಿಯೇ ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಅದು ತನ್ನ ಸಾಮರ್ಥ್ಯ ಕಳೆದುಕೊಂಡಂತೆ ಅನೇಕ ಕಾಯಿಲೆಗಳಿಗೆ ತಿರುಗುವ ಸಂಭವವಿದೆ. ಆದ್ದರಿಂದ ಬಾಯಿ ಕ್ಯಾನ್ಸರ್ ನಿಂದ ಕೂಡ ಮಹಿಳೆಯರು ಎಚ್ಚರಿಕೆ ವಹಿಸಬೇಕು. ಇನ್ನೂ ತುಟಿಯ ಬಗ್ಗೆ ಹೇಳುವುದಾದರೆ ಹೆಚ್ಚಿನದಾಗಿ ತುಟಿಗೆ ಕೆಮಿಕಲ್ ಭರಿತ ಲಿಪ್ ಸ್ಟಿಕ್ಕನ್ನು ಹಚ್ಚುವುದರಿಂದ ಅದು ನೇರವಾಗಿ ನಮ್ಮ ತುಟಿಯ ಮೇಲೆ ಪ್ರಭಾವವನ್ನು ಬೀರುತ್ತದೆ ಮತ್ತು ಅದು ತುಟಿ ಕ್ಯಾನ್ಸರ್ ಗೆ ತಿರುಗುತ್ತದೆ.
ಇದರಿಂದ ಮಹಿಳೆಯರು ಹೆಚ್ಚಾಗಿ ತಾವು ತಿನ್ನುವ ಪದಾರ್ಥ ಆಗಿರಬಹುದು ಅಥವಾ ತಾವು ಬಳಸುವ ಕೆಮಿಕಲ್ ಭರಿತ ಲಿಪ್ ಸ್ಟಿಕ್ ನ ಬಗ್ಗೆ ಎಚ್ಚರಿಕೆ ವಹಿಸಬೇಕು. ಹೀಗೆ ನಾನಾ ರೀತಿಯ ಕ್ಯಾನ್ಸರ್ ಗಳು ಮಹಿಳೆಯರ ಮೇಲೆ ಪ್ರಭಾವ ಬೀರುತ್ತಿದೆ. ಆದ್ದರಿಂದ ಮಹಿಳೆಯರೆಲ್ಲರೂ ಕೂಡ ಈ ಕ್ಯಾನ್ಸರ್ ಗಳ ಬಗ್ಗೆ ಎಚ್ಚರ ವಹಿಸಬೇಕು ಹಾಗೂ ಉತ್ತಮವಾದ ಪದಾರ್ಥವನ್ನು ಸೇವಿಸಬೇಕು. ಹಸಿರು ತರಕಾರಿ ತಿನ್ನಬೇಕು, ವ್ಯಾಯಾಮ ಮಾಡಬೇಕು. ಹೀಗೆ ಮಾಡುವುದರಿಂದ ಸ್ವಲ್ಪ ಮಟ್ಟಿಗಾದರೂ ಕ್ಯಾನ್ಸರ್ ಎಂಬ ಮಾರಾಣಾಂತಿಕ ಖಾಯಿಲೆಯಿಂದ ದೂರವಿರಬಹುದು.