ವಾಷಿಂಗ್ಟನ್, ಡಿ. 11: ಸತತ ಹತ್ತು ತಿಂಗಳಿನಿಂದ ಇಡೀ ಪ್ರಪಂಚ ಮಹಾಮಾರಿ ಕೊರೊನದ ಮರಣ ಮೃದಂಗದಲ್ಲಿ ತೊಂದರೆ ಅನುಭವಿಸುತ್ತಿದೆ. ಅದರಲ್ಲೂ ಹಲವು ಬಡ ದೇಶಗಳು ಯಾವುದೇ ಸೌಕರ್ಯಗಳಿಲ್ಲದೆ ದಿನ ಸಾವುಗಳ ಸಂಖ್ಯೆ ಹೆಚ್ಚುತ್ತಿದೆ. ಇದರ ನಡುವೆ ಅಭಿವೃದ್ಧಿ ಹೊಂದಿರುವ ದೇಶಗಳು ಲಸಿಕೆ ತಯಾರಿಕೆಯ ಪೈಪೋಟಿಗೆ ಇಳಿದಿದೆ.ಹಾಗೆ ಕೋವಿಡ್-19 ವಿರುದ್ಧ ಪರಿಣಾಮಕಾರಿ ಲಸಿಕೆ ಆಗಿ ಗುರುತಿಸಿಕೊಂಡಿರುವ ಫೈಝರ್ ಲಸಿಕೆ ಬಳಕೆಗೆ ಅಮೆರಿಕದ ಫುಡ್ ಆಯಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್‌ಡಿಎ) ಅವರು ಅನುಮತಿ ನೀಡಿದೆ.
ದಿನಾಂಕ 10-12-2020ರಂದು ನಡೆದ ಎಫ್‌ಡಿಎ ತಜ್ಞರ ಸಲಹಾ ಮಂಡಳಿಯು ಲಸಿಕೆ ಪರಿಣಾಮದ ಬಗ್ಗೆ ಚರ್ಚೆ ನಡೆಸಿದರು.ಈ ಚರ್ಚೆಯ ನಂತರ ತುರ್ತು ಬಳಕೆಯ ಅಂತಿಮ ನಿರ್ಧಾರದ ಬಗ್ಗೆ 17ಮತ ಹಾಕುವ ಮೂಲಕ ಅಭಿಪ್ರಾಯ ಸಂಗ್ರಹಿಸಲಾಯಿತು. ಇದರಲ್ಲಿ 17 ಮತಗಳು ತುರ್ತು ಬಳಕೆಯ ಪರವಾಗಿದ್ದರೆ, 4 ಮತಗಳು ವಿರುದ್ಧವಾಗಿದ್ದವು.
ಲಭ್ಯವಿರುವ ಮಾಹಿತಗಳ ಪ್ರಕಾರ, ವೈಜ್ಞಾನಿಕ ಪುರಾವೆಗಳ ಆಧಾರದ ಮೇಲೆ ಫೈಝರ್ ಲಸಿಕೆ 16 ವರ್ಷ ಮತ್ತು ಮೇಲ್ಪಟ್ಟ ವ್ಯಕ್ತಿಗಳಲ್ಲಿ ಅಪಾಯಕ್ಕಿಂತ ಹೆಚ್ಚು ಪ್ರಯೋಜನಗಳನ್ನು ಹೊಂದಿದೆ ಎಂಬುದು ಪ್ರಾಥಮಿಕ ಹಂತದಲ್ಲಿ ತಿಳಿದಿರುವುದರಿಂದ ತುರ್ತು ಬಳಕೆಗೆ ಅನುಮೋದಿಸಲಾಗಿದೆ ಎಂದು ಸಮಿತಿ ಸ್ಪಷ್ಟನೆ ನೀಡಿದೆ ಹಾಗೂ ಇದಕ್ಕೆ ಅಮೇರಿಕ ಸಹ ಪ್ರಯೋಗಿಸಲು ಮುಂದಾಗಿದೆ.
ಸದ್ಯ ಮಂಡಳಿಯು ಲಸಿಕೆ ಬಳಕೆಗೆ ಒಪ್ಪಿಗೆ ನೀಡಿರುವ ಬೆನ್ನಲ್ಲೆ ಲಕ್ಷಾಂತರ ಡೋಸ್‌ಗಳನ್ನು ಆಮದು ಮಾಡಿಕೊಳ್ಳಲು ಅಮೆರಿಕ ಸಜ್ಜಾಗಿದೆ. ಇನ್ನು ಈಗಾಗಲೇ , ಕೆನಾಡ, ಬಹ್ರೇನ್ ,ಬ್ರಿಟನ್ ಮತ್ತು ಸೌದಿ ಅರೇಬಿಯಾ ದೇಶಗಳು ಫೈಝರ್ ಲಸಿಕೆ ತುರ್ತು ಬಳಕೆಗೆ ಅನುಮೋದನೆ ನೀಡಿವೆ.
ಇನ್ನು ಹಲವು ಕೊರೊನ ಲಸಿಕೆ ಕಂಡುಹಿಡಿಯುವಲ್ಲಿ ಔಷಧಿ ಕಂಪನಿಗಳು ಪ್ರಯೋಗಗಳನ್ನು ನಡೆಸಲಾಗುತ್ತಿದೆ.ಮುಂದಿನ ದಿನಗಳಲ್ಲಿ ಇದಕ್ಕೆ ಶಾಶ್ವತ ಪರಿಹಾರ ನೀಡುವ ರೀತಿಯ ಲಸಿಕೆ ತಯಾರಿಸುವುದಾಗಿ ಅಮೇರಿಕ ದೇಶದ ಮೂಲಗಳಿಂದ ತಿಳಿಸಲಾಗಿದೆ.ಹಾಗೂ ಪ್ರತಿಯೊಂದು ದೇಶ ಈ ಕೊರೊನ ಲಸಿಕೆ ತಯಾರಿಕೆಯಲ್ಲಿ ತೊಡಗಿದೆ. ಆದಷ್ಟು ಬೇಗ ಲಸಿಕೆಯನ್ನು ತರಲು ಪ್ರಯತ್ನಿಸಲಾಗುತ್ತಿದೆ.