New delhi : ಬ್ರಿಟಿಷ್ ಏರ್‌ವೇಸ್ ವಿಮಾನದಲ್ಲಿ(British Airways Flight) ಕಿಟಕಿ ಸೀಟಿನಲ್ಲಿಯೇ(Window seat) ಕುಳಿತು ಪ್ರಯಾಣ ಮಾಡಬೇಕು ಎಂದು ಪ್ರಯಾಣಿಕನೊಬ್ಬ ನಿಗದಿಪಡಿಸಿದ ಟಿಕೆಟ್ ದರವನ್ನು ಮೀರಿ ಹೆಚ್ಚುವರಿ (foods for constipation problem) ಹಣವನ್ನು ಪಾವತಿ ಮಾಡಿದರೂ ಕೂಡ ಆತನಿಗೆ ಉಂಟಾಗಿದ್ದು ಕೇವಲ ನಿರಾಸೆ! ಅಷ್ಟಕ್ಕೂ ಆಗಿದ್ದೇನು? ಇಲ್ಲಿದೆ ಮಾಹಿತಿ.
ಬ್ರಿಟಿಷ್ ಏರ್‌ವೇಸ್ ವಿಮಾನದಲ್ಲಿ ತನ್ನ ಪ್ರಯಾಣವನ್ನು ಸುಖಕರವಾಗಿ ಆನಂದಿಸಲು ಮುಂಚಿತವಾಗಿಯೇ ಯೋಚಿಸಿ,
ಕಿಟಕಿ ಸೀಟನ್ನು ಏರ್‌ವೇಸ್(Airways) ಸಂಸ್ಥೆ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚುವರಿ ಹಣವನ್ನು ಪಾವತಿ ಮಾಡಿ,
ಅದೇ ಸೀಟು ಬೇಕು ಎಂದು ಹೇಳಿ ಬುಕ್ ಮಾಡಿದ್ದಾನೆ. ಆದ್ರೆ, ಆತ ಹೆಚ್ಚುವರಿ ಹಣ ನೀಡಿ ಬುಕ್ ಮಾಡಿದ ಆಸನ ಅವರಿಗೆ ಲಭಿಸಿತೇ? ಇಲ್ಲ!
ಅದರ ಬದಲಾಗಿ ಅವರು ಪಡೆದದ್ದೇ ಬೇರೆ ಸೀಟು! ಈ ಬಗ್ಗೆ ಮೋಸ ಹೋದ ಪ್ರಯಾಣಿಕ ತಮ್ಮ ಅಧಿಕೃತ ಟ್ವಿಟರ್(Twitter) ಖಾತೆಯಲ್ಲಿ ತಮಗೆ ಎದುರಾದ ಪರಿಸ್ಥಿತಿಯನ್ನು ಈ ರೀತಿ ವಿವರಿಸಿದ್ದಾರೆ.
ಬ್ರಿಟಿಷ್ ಏರ್‌ವೇಸ್ ವಿಮಾನ ಹತ್ತಿದ ಪ್ರಯಾಣಿಕ ಅನಿರುದ್ಧ್ ಮಿತ್ತಲ್(Anirudh Mithal) ಎಂಬ ವ್ಯಕ್ತಿ,
ಲಂಡನ್‌ನ(London) ಹೀಥ್ರೂ ವಿಮಾನ ನಿಲ್ದಾಣದಲ್ಲಿ ಇಳಿಯುವ ಸಮಯದಲ್ಲಿ ಆ ಸುಂದರ ನೋಟವನ್ನು ವೀಕ್ಷಿಸಲು ಬ್ರಿಟಿಷ್ ಏರ್‌ವೇಸ್ ವಿಮಾನದ (foods for constipation problem) ಬಲಭಾಗದ ಕಿಟಕಿ ಸೀಟಿಗಾಗಿ ಹೆಚ್ಚುವರಿ ಹಣವನ್ನು ಪಾವತಿಸಿದ್ದಾರೆ.
ಆದರೆ, ವಿಮಾನ ಹತ್ತಿದ ಬಳಿಕ ಸೀಟು ಯಾವುದು ಎಂದು ಒಳಗೆ ನೋಡಿದಾಗ, ಅಚ್ಚರಿಯಾಗುವುದರ ಜೊತೆಗೆ ನಿರಾಸೆಗೊಂಡಿದ್ದಾರೆ.
ತಾನು ಕೇಳಿದ ಸೀಟು ತನಗೆ ಕೊಡದೆ, ಕಿಟಕಿ ಇಲ್ಲದ ಸೀಟನ್ನು ನೀಡಿದ ಬಗ್ಗೆ ಬೇಸರಗೊಂಡ ಅನಿರುದ್ಧ್, ತನಗೆ ಸಿಕ್ಕ ಸೀಟಿನ ಫೋಟೊವನ್ನು ತೆಗೆದು ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಲಂಡನ್‌ಗೆ ಬಂದಾಗ ವಿಮಾನ ಲ್ಯಾಡಿಂಗ್ ಆಗುವ ವೇಳೆ ಕಿಟಕಿಯಿಂದ ವಿಹಂಗಮ ನೋಟ ಕಾಣಿಸುತ್ತದೆ.
ಅದು ಸುಂದರವಾಗಿರಬೇಕು ಎಂಬ ಕಾರಣಕ್ಕಾಗಿ ನಾನು ಬಲಭಾಗದ ಕಿಟಕಿ ಸೀಟಿಗಾಗಿ ಹೆಚ್ಚುವರಿ ಹಣವನ್ನು ಪಾವತಿಸಿದ್ದೇನೆ.
ಬ್ರಿಟಿಷ್ ಏರ್‌ವೇಸ್(British_Airways) ನನ್ನ ಕಿಟಕಿ ಎಲ್ಲಿದೆ? ಎಂದು ಅನಿರುದ್ಧ ಮಿತ್ತಲ್ ಪ್ರಶ್ನಿಸಿ, ಟ್ವೀಟ್ ಮಾಡಿದ್ದಾರೆ.
ಅನಿರುದ್ಧ್ ಮಿತ್ತಲ್ ಹಂಚಿಕೊಂಡ ಈ ಒಂದು ಟ್ವೀಟ್ ಸುಮಾರು 4.5 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಈ ಪೋಸ್ಟ್‌ಗೆ 6,000 ಕ್ಕೂ ಹೆಚ್ಚು ಲೈಕ್ ಮತ್ತು 350 ರೀಟ್ವೀಟ್‌ಗಳು ಬಂದಿದೆ.