ಜಾಗತಿಕ ಮಾರುಕಟ್ಟೆಯಲ್ಲಿ ಗೂಗಲ್ (Google) ತನ್ನದೇ ಆದ ಜನಪ್ರಿಯತೆ ಪಡೆದಿದ್ದು, ಇದೀಗ ಗ್ರಾಹಕರಿಗಾಗಿ ಪಿಕ್ಸೆಲ್ ವತಿಯಿಂದ ನಾಲ್ಕು ಸ್ಮಾರ್ಟ್ಫೋನ್ಗಳನ್ನು ಪರಿಚಯಿಸಲು ಮುಂದಾಗಿದೆ. ನೂತನ ಫೋನ್ಗಳನ್ನು ಆಗಸ್ಟ್ (August) 14ರಂದು ರಿಲೀಸ್ ಮಾಡಲಿದೆ.
ಗೂಗಲ್ ಪಿಕ್ಸೆಲ್ 9 (Google Pixel 9) ಪ್ರೊ ಫೋಲ್ಡ್ ಸ್ಮಾರ್ಟ್ಫೋನನ್ನು ಪರಿಚಯಿಸುತ್ತಿದೆ. ಇದು ಮಡಚಬಹುದಾದ ಫೋನ್ ಆಗಿದೆ. ಇದರ ಮೇಲೆ ಎಲ್ಲರ ಗಮನ ಕೇಂದ್ರಿಕರಿಸಿದೆ. ಗೂಗಲ್ ಎಐ, ಜಿಮಿನಿಯೊಂದಿಗೆ ಸಂಯೋಜಿಸಲಾಗಿದೆ. ಇದರ ಕುರಿತಾಗಿ ಸ್ಪಷ್ಟವಾದ ಮಾಹಿತಿಯನ್ನು ಕಂಪನಿ ಹಂಚಿಕೊಂಡಿಲ್ಲ. ಆದರೆ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ನೂತನ ಫೋನ್ ಟೆನ್ಸರ್ ಜಿ4 ಚಿಪ್ಸೆಟ್ (The Phone Has Tensor G4 Chipset)ನಿಂದ ಚಾಲಿತವಾಗಿದೆ ಎಂದು ಹೇಳಲಾಗುತ್ತಿದೆ.
ಮಡಚಬಹುದಾದ ವಿನ್ಯಾಸವನ್ನು ಹೊಂದಿದೆ. 256ಜಿಬಿ ಮತ್ತು 512ಜಿಬಿ ಸಂಗ್ರಹಣ ಸಾಮರ್ಥ್ಯದೊಂದಿಗೆ ಪರಿಚಯಿಸಲಾಗುತ್ತದೆ ಎನ್ನಲಾಗುತ್ತಿದೆ. ಗೂಗಲ್ ಪಿಕ್ಸೆಲ್ 9 ಪ್ರೊ ಫೋಲ್ಡ್ ದೊಡ್ಡದಾದ ಡಿಸ್ಪ್ಲೇಯೊಂದಿಗೆ ಬರಲಿದೆ. ಕ್ಯಾಮೆರಾ (Camera) ವಿಚಾರಕ್ಕೆ ಬರುವುದಾದರೆ 2152 x 2076 ಪಿಕ್ಸೆಲ್ ರೆಸಲ್ಯೂಶನ್. 120HZ ರಿಫ್ರೆಶ್ ದರದೊಂದಿಗೆ ಬರಲಿದೆ ಎನ್ನಲಾಗುತ್ತಿದೆ. ಗ್ರಾಹಕರಿಗಾಗಿ ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ಪರಿಚಯಿಸಲಿದೆ ಎನ್ನಲಾಗುತ್ತಿದೆ. ಇನ್ನು ಸ್ಮಾರ್ಟ್ಫೋನಿನ (Smartphone) ಬೆಲೆಯ ಬಗ್ಗೆ ಬಿಡುಗಡೆಗೊಂಡ ಬಳಿಕವಷ್ಟೇ ತಿಳಿದುಬರಬೇಕಿದೆ.
ಸಿಕ್ಕ ಸಿಕ್ಕ ವಾಟ್ಸಾಪ್ ಗ್ರೂಪ್ಗಳಿಗೆ ಸೇರಿಸುತ್ತಿದ್ದಾರಾ? ತಡೆಯುವುದು ಹೇಗೆ?
ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ (WhatsApp) ಅನ್ನು ಕೇವಲ ವೈಯಕ್ತಿಕ ಬಳಕೆಗಾಗಿ ಅಲದ್ಲೇ ಬಿಸಿನೆಸ್ ಮತ್ತು ಪ್ರಚಾರಗಳಂತಹ ವ್ಯವಹಾರಗಳಿಗಾಗಿಯೂ ಬಳಸಲಾಗುತ್ತಿದೆ. ಏಕಕಾಲದಲ್ಲಿ ಅನೇಕ ಬಳಕೆದಾರರಿಗೆ ಸಂದೇಶಗಳನ್ನು ಪ್ರಸಾರ ಮಾಡುವ ಸಲುವಾಗಿ ಗುಂಪುಗಳನ್ನು ರಚಿಸಲು ವಾಟ್ಸಾಪ್ ಬಳಕೆದಾರರಿಗೆ ಅನುಮತಿಸುತ್ತದೆ.
ಇದರಿಂದ ಮೊಬೈಲ್ (Mobile) ಸಂಖ್ಯೆಗಳ ಸುಲಭ ಲಭ್ಯತೆಯಿಂದಾಗಿ, ಅನೇಕರು ಇದನ್ನು ದುರುಪಯೋಗಪಡಿಸಿಕೊಂಡು ಜನರನ್ನು ಮೋಸಗೊಳಿಸಲು ವಾಟ್ಸಾಪ್ ಗುಂಪುಗಳನ್ನು ರಚಿಸುತ್ತಾರೆ. ಇಂತಹ ವಂಚನೆಗಳಿಂದ ಬಳಕೆದಾರರನ್ನು ರಕ್ಷಿಸಲು ಅವರನ್ನು ಗುಂಪುಗಳಿಗೆ ಯಾರು ಸೇರಿಸಬಹುದು ಎಂಬುದನ್ನು ಆಯ್ಕೆ ವಾಟ್ಸಾಪ್ ಆಯ್ಕೆಗಳನ್ನು ತಂದಿದೆ. ಈ ಮೂಲಕ ನಿಮ್ಮನ್ನು ಯಾರು ವಿವಿಧ ಗ್ರೂಪ್ಗಳಿಗೆ (Groups) ಸೇರಿಸಬಹುದು ಎಂಬ ಆಯ್ಕೆಯನ್ನು ನೀಡಿದೆ. ಇದರಲ್ಲಿ 3 ಆಯ್ಕೆಗಳನ್ನು ನೀಡಲಾಗಿದೆ.
ಎಲ್ಲರೂ(Everyone)
ನನ್ನ ಸಂಪರ್ಕದಲ್ಲಿ ಇರುವವರು (MY Contacts)
ನನ್ನ ಸಂಪರ್ಕದಲ್ಲಿರುವ ಕೆಲವನ್ನು ಹೊರೆತುಪಡಿಸಿ (MY Contacts except)
ಈ ಮೂಲಕ ಬಳಕೆದಾರು ಸ್ವತಃ ತಮ್ಮನ್ನು ಯಾರು ಗುಂಪುಗಳಿಗೆ ಸೇರಿಸಬಹುದು ಎಂಬುದನ್ನು ಆರಿಸಿಕೊಳ್ಳಬಹುದಾಗಿದೆ