ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ನಾನಾ ರೀತಿಯ ರಾಸಾಯನಿಕಯುಕ್ತ ಸೌಂದರ್ಯ ವರ್ಧಕಗಳನ್ನು(Follow these beauty tips) ಮುಖಕ್ಕೆ ಹಚ್ಚಿ ಪ್ರಯೋಗಿಸುತ್ತೇವೆ.
ಆದರೆ, ಇದರಿಂದ ಸೌಂದರ್ಯ ಹೆಚ್ಚುವುದಿರಲಿ, ಇರುವ ಮುಖದ ಕಾಂತಿಯನ್ನೂ(Follow these beauty tips) ಕಳೆದುಕೊಳ್ಳುವ ಸಂದರ್ಭ ಎದುರಾಗಬಹುದು.

ಹಾಗಾಗಿ, ನಮ್ಮ ಹಿರಿಯರು ಅನುಸರಿಸುತ್ತಿದ್ದ ಪದ್ಧತಿಗಳನ್ನು ಅಳವಡಿಸಿಕೊಂಡರೆ, ಸೌಂದರ್ಯದ ಜೊತೆಗೆ ಅರೋಗ್ಯವೂ ಚೆನ್ನಾಗಿರುತ್ತದೆ. ಹೌದು, ನಮ್ಮ ಸೌಂದರ್ಯದ ಗುಟ್ಟು ಅಡಗಿರುವುದು ಹೊಕ್ಕಳಲ್ಲಿ!
ಆಶ್ಚರ್ಯವಾದರೂ ಇದು ಸತ್ಯ. ಈ ಪುರಾತನ ಮಾರ್ಗವನ್ನು ಅನುಸರಿಸಿದರೆ ಸಾಕು ನಿಮ್ಮ ಹೊಕ್ಕಳಿನ ಮೂಲಕವೇ ನಿಮ್ಮ ಮುಖದ ಸೌಂದರ್ಯ ಕಾಪಾಡಿಕೊಳ್ಳಬಹುದು.
ಇದನ್ನೂ ಓದಿ : https://vijayatimes.com/pfi-bank-accounts-closed/
ಸಾಸಿವೆ ಎಣ್ಣೆ : ನಿಮಗೆ ಆಗಾಗ ತುಟಿ ಒಡೆಯುವ ಸಮಸ್ಯೆ ಕಾಣುತ್ತಿದ್ದರೆ ಯಾವುದೇ ರೀತಿಯ ಜೆಲ್ ಗಳನ್ನೂ ಹಚ್ಚದೆ, ಹೊಕ್ಕಳಿಗೆ ಸಾಸಿವೆ ಎಣ್ಣೆ ಹಚ್ಚಿ ಸಾಕು ಈ ಸಮಸ್ಯೆಯಿಂದ ಖಂಡಿತ ಪರಿಹಾರ ಸಿಗುತ್ತದೆ.

ನಿಂಬೆ ರಸ : ಹೊಕ್ಕಳಿಗೆ ನಿಂಬೆ ರಸ ಸವರಿದರೆ ಹೇರಳವಾದ ಲಾಭ ನಿಮ್ಮದಾಗುತ್ತದೆ ದೇಹ ತಂಪಾಗುವುದಲ್ಲದೆ ನಿಮ್ಮ ಮುಖದ ಕಲೆಗಳು ಕೂಡ ತಟ್ಟನೆ ಮಾಯವಾಗುತ್ತದೆ.
ಇದನ್ನೂ ಓದಿ: https://vijayatimes.com/sc-verdict-over-termination-pregnancy/
ಬೇವಿನ ಎಣ್ಣೆ : ನಿಮ್ಮ ಮುಖದಲ್ಲಿ ಮೊಡವೆಗಳು ಸದಾಕಾಲ ಬೇಡದ ಅತಿಥಿಗಳಾಗಿದ್ದರೆ, ಹೊಕ್ಕಳಿಗೆ ಬೇವಿನ ಎಣ್ಣೆ ಹಚ್ಚಿ ನೋಡಿ. ಪವಾಡವೆಂಬತೆ ಮೊಡವೆಗಳು ಮಾಯವಾಗಿ ನಿಮ್ಮ ಮುಖದ ಲಕ್ಷಣ ಹಿಂತಿರುಗುತ್ತದೆ.

ತುಪ್ಪ : ನಯವಾದ ಕೋಮಲವಾದ ಚರ್ಮವನ್ನು ನಿಮ್ಮದಾಗಿಸಿಕೊಳ್ಳಲು ಹೊಕ್ಕಳಿಗೆ ತುಪ್ಪ ಹಚ್ಚಿ ಸಾಕು, ತುಪ್ಪದಂತೆಯೇ ನಯವಾದ ಕೋಮಲವಾದ ಚರ್ಮವನ್ನು ನೀವು ಪಡೆಯಬಹುದುದು.
ಬಾದಾಮಿ ಎಣ್ಣೆ : ನಿಮ್ಮ ಹೊಕ್ಕಳಿಗೆ ಬಾದಾಮಿ ಎಣ್ಣೆ ಹಚ್ಚಿ. ಕೆಲದಿನಗಳ ಕಾಲ ಇದನ್ನು ಅಬ್ಯಾಸ ಮಾಡಿ ನೋಡಿ ನಿಮ್ಮ ಮುಖ ಪಳ ಪಳನೆ ಹೊಳೆಯುತ್ತಿರುತ್ತದೆ.
- ಪವಿತ್ರ