• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಲೈಫ್ ಸ್ಟೈಲ್

ದಾಂಪತ್ಯ ಜೀವನದಲ್ಲಿ ಪ್ರೀತಿ ಸದಾ ಇರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ

Sharadhi by Sharadhi
in ಲೈಫ್ ಸ್ಟೈಲ್
ದಾಂಪತ್ಯ ಜೀವನದಲ್ಲಿ ಪ್ರೀತಿ ಸದಾ ಇರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ
0
SHARES
0
VIEWS
Share on FacebookShare on Twitter

ಮದುವೆಯಾದ ಮೊದಮೊದಲು ಎಲ್ಲವೂ ಅದ್ಭುತ ಎನಿಸುತ್ತದೆ. ಹೊಸ ಜೀವನ, ಹೊಸ ಬಾಳು ಎಲ್ಲವೂ ಒಂದು ರೀತಿಯ ಹುರುಪು ತಂದಿರುತ್ತದೆ. ಆದರೆ ದಿನಕಳೆದಂತೆ ಅದೇ ಕೆಲಸ, ಮನೆ ಜವಾಬ್ದಾರಿಯನ್ನು ನಿರ್ವಹಿಸುವಾಗ ನಿಮ್ಮ ದಾಂಪತ್ಯದಲ್ಲಿ ಮೊದಲಿದ್ದ ಕಳೆ ಇರುವುದಿಲ್ಲ. ಇದರ ಪರಿಣಾಮವಾಗಿ ದಾಂಪತ್ಯ ಜೀವನ ಸಪ್ಪೆಸಪ್ಪೆ ಎನಿಸುವುದು. ಪತಿ-ಪತ್ನಿ ನಡುವೆ ಆದ್ದರಿಂದ ನೀವು ನಿಮ್ಮ ದಾಂಪತ್ಯದಲ್ಲಿ ಖುಷಿ ತರುವ ಸಣ್ಣ ಸಣ್ಣ ಕೆಲಸಗಳನ್ನು ಆಗಾಗ ಮಾಡುತ್ತಿರಬೇಕು. ಅಂತಹ ಕೆಲವು ವೈವಾಹಿಕ ಜೀವನದಲ್ಲಿ ಪ್ರೀತಿ ಕಿಡಿಯನ್ನು ಹೆಚ್ಚಿಸುವ ಕೆಲವೊಂದು ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ:

ವೈವಾಹಿಕ ಜೀವನದಲ್ಲಿ ಪ್ರೀತಿ ಸದಾ ಉಳಿಸುವಂತಹ ಕೆಲವೊಂದು ವಿಧಾನಗಳನ್ನು ಇಲ್ಲಿ ನೀಡಲಾಗಿದೆ:

ರೊಮ್ಯಾಂಟಿಕ್ ನೈಟ್ ಪ್ಲಾನ್ ಮಾಡಿ:
ನೀವು ಎಷ್ಟೇ ಬ್ಯುಸಿಯಾಗಿದ್ದರೂ ಸಹ, ಆಗಾಗ ರೊಮ್ಯಾಂಟಿಕ್ ನೈಟ್ ಡಿನ್ನರ್ ಅಥವಾ ನೈಟ್ ಡೇಟಿಂಗ್ ನ್ನು ಪ್ಲಾನ್ ಮಾಡಿ. ಯಾವುದಾದರೂ ಒಳ್ಳೆಯ ರೆಸ್ಟೋರೆಂಟ್‌ನಲ್ಲಿ ಟೇಬಲ್ ಬುಕ್ ಮಾಡಿ. ಅಲ್ಲಿಗೆ ಹೋಗುವಾಗ ನಿಮ್ಮ ಸಂಗಾತಿಯನ್ನು ಈ ಸಂದರ್ಭಕ್ಕೆ ತಕ್ಕಂತೆ ರೆಡಿಯಾಗಲು ಹೇಳಿ. ಇದ್ಯಾವುದೂ ಸಾಧ್ಯವಾಗದಿದ್ದರೆ ಮನೆಯಲ್ಲಿಯೇ ಕ್ಯಾಂಡಲ್ ಲೈಟ್ ಡಿನ್ನರ್ ನ್ನು ಪ್ಲಾನ್ ಮಾಡಿ, ರೊಮ್ಯಾಂಟಿಕ್ ಆಗಿ ಒಟ್ಟಿಗೆ ಸಮಯ ಕಳೆಯಿರಿ. ಇದು ಪ್ರತಿದಿನವೂ ಇರಬೇಕಾಗಿಲ್ಲ, ಆದರೆ ಆಗಾಗ ಹೀಗೆ ಮಾಡುವುದರಿಂದ ನಿಮ್ಮಿಬ್ಬರ ನಡುವಿನ ಪ್ರೀತಿ ಚಿರಕಾಲವಿರುವುದು.

ಇಬ್ಬರೂ ಒಟ್ಟಿಗೆ ಸ್ಪಾ ದಿನವನ್ನು ನಿಗದಿಪಡಿಸಿ:
ದೈನಂದಿನ ಕೆಲಸ ಮತ್ತು ಗದ್ದಲವು ನಿಮಗೆ ಕೆಲಸಗಳಲ್ಲಿ ಆಯಾಸ ಮತ್ತು ಒತ್ತಡವನ್ನುಂಟು ಮಾಡುತ್ತದೆ. ಆದ್ದರಿಂದ, ಸ್ಪಾ ಸೆಷನ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ದಂಪತಿಗಳು ಆಗಾಗ ಮಸಾಜ್ , ಪೆಡಿಕ್ಯೂರ್, ಮೆನಿಕ್ಯೂರ್ ನಂತಹ ಕೆಲಸಗಳಲ್ಲಿ ತೊಡಗಿಕೊಳ್ಳಿ. ಇದನ್ನು ಒಂದೇ ದಿನ ನಿಗದಿಪಡಿಸಿ, ಇಬ್ಬರೂ ಒಟ್ಟಿಗೆ ತೆರಳಿ, ನಿಮ್ಮನ್ನು ನೀವು ಸುಂದರಗೊಳಸಿಕೊಳ್ಳಿ. ಇದನ್ನ ಇಬ್ಬರೂ ಮನೆಯಲ್ಲಿಯೂ ಮಾಡಬಹುದು. ಅಲ್ಲಿ ನೀವು ಇಬ್ಬರೂ ಪರಸ್ಪರ ಮಸಾಜ್ ಮಾಡಬಹುದು, ಜೊತೆಗೆ ಸುವಾಸಿತ ಮೇಣದ ಬತ್ತಿಗಳ ಸುವಾಸನೆಯು ಕೋಣೆಯನ್ನು ತುಂಬಿಸಬಹುದು.

ಸಂಗಾತಿಯ ಮಾತುಗಳ ಕೇಳುಗರಾಗಿ:
ನಿಮ್ಮ ದಾಂಪತ್ಯದಲ್ಲಿ ಪ್ರಗತಿ ಹೊಂದುತ್ತಿರುವಾಗ, ಮನಸ್ಸು ಯಾವಾಗಲೂ ಮಾತನಾಡುವ ಹಂಬಲ ಮಾಡುತ್ತದೆ. ಇದು ಒಳ್ಳೆಯ ಸಂಕೇತವಾಗಿದ್ದರೂ, ನಿಮ್ಮ ಸಂಗಾತಿ ಕೇಳುತ್ತಾರೆ ಎಂದು ಮಾತನಾಡುತ್ತಲೇ ಇರುವುದು ಉತ್ತಮವಲ್ಲ. ಹಾಗೇ ಮಾತನಾಡುವಾಗ ನೀವು ಮಧ್ಯೆ ಬಾಯಿ ಹಾಕುವುದು ಸರಿಯಲ್ಲ. ಅವರ ಮಾತುಗಳನ್ನು ಆಲಿಸಿ. ಅವರ ಮನಸ್ಸಲ್ಲಿ ಇರುವುದನ್ನು ಹೇಳಿಕೊಳ್ಳಲು ಅವಕಾಶ ನೀಡಿ. ನೆನಪಿಡಿ ಅವರ ಮಾತುಗಳನ್ನು ಎಂದಿಗೂ ಟೀಕಿಸಲು ಹೋಗಬೇಡಿ.

ಒಟ್ಟಿಗೆ ಧ್ಯಾನ ಮಾಡಿ:
ಒಟ್ಟಿಗೆ ಧ್ಯಾನ ಮಾಡುವುದು ಪರಸ್ಪರರ ಆಧ್ಯಾತ್ಮಿಕವಾಗಿ ಸಂಪರ್ಕದಲ್ಲಿರಲು ಉತ್ತಮ ಮಾರ್ಗವಾಗಿದೆ. ಮದುವೆಯಲ್ಲಿ ಪ್ರಣಯ ಮತ್ತು ಉತ್ಸಾಹ ಕಳೆದುಹೋದಾಗ, ಬಲವಾದ ಸಂಪರ್ಕವನ್ನು ಬೆಳೆಸಲು ಒಟ್ಟಿಗೆ ಧ್ಯಾನ ಮಾಡುವುದು ಉತ್ತಮ ಮಾರ್ಗವಾಗಿದೆ. ಆದ್ದರಿಂದ ಇಬ್ಬರೂ ಕುಳಿತು ಧ್ಯಾನ ಮಾಡಿ. ಇದು ನಿಮ್ಮನ್ನು ಭಾವನಾತ್ಮಕವಾಗಿ ಹತ್ತಿರ ಮಾಡುವುದು.

ಸಣ್ಣ ಪ್ರವಾಸಗಳನ್ನು ಆಯೋಜಿಸಿ:
ಕೆಲಸದ ಜೀವನವು ನಿಮ್ಮಿಬ್ಬರನ್ನು ದಣಿಯುವಂತೆ ಮಾಡಿದ್ದರೆ, ವಾರಾಂತ್ಯದ ಪ್ರವಾಸವು ನಿಮ್ಮನ್ನು ಫ್ರೀ ಮಾಡಲು ಸಹಾಯ ಮಾಡುವುದು. ನಿಮ್ಮಿಬ್ಬರಿಗೂ ಸೂಕ್ತವಾದ ಸ್ಥಳವನ್ನು ಆಯ್ಕೆ ಮಾಡಿ, ಅಲ್ಲಿಗೆ ತೆರಳಿ ಉತ್ತಮ ಸಮಯವನ್ನು ಕಳೆಯಬಹುದು. ಇದು ಹೊಸ ಚೈತನ್ಯವನ್ನು ದಾಂಪತ್ಯದಲ್ಲಿ ಸೃಷ್ಠಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

Related News

ಡೆಡ್ಲಿ ಕೆಮಿಕಲ್‌ನಿಂದ ಹಣ್ಣಾಗಿರುವ ಮಾವಿನ ಹಣ್ಣನ್ನು ಪತ್ತೆ ಹಚ್ಚುವುದು ಹೇಗೆ? ನಿಮಗಾಗಿ ಇಲ್ಲಿದೆ ಈ ಟಿಪ್ಸ್!
ಆರೋಗ್ಯ

ಡೆಡ್ಲಿ ಕೆಮಿಕಲ್‌ನಿಂದ ಹಣ್ಣಾಗಿರುವ ಮಾವಿನ ಹಣ್ಣನ್ನು ಪತ್ತೆ ಹಚ್ಚುವುದು ಹೇಗೆ? ನಿಮಗಾಗಿ ಇಲ್ಲಿದೆ ಈ ಟಿಪ್ಸ್!

May 26, 2023
ಹೆಲ್ತಿಡ್ರಿಂಕ್ಸ್ ಹಾರಿಬಲ್ ಸೀಕ್ರೇಟ್! ಅಧ್ಯಯನದಿಂದ ಬಯಲಾಯ್ತು ಹೆಲ್ತಿ ಡ್ರಿಂಕ್ಸ್ ಭಯಾನಕ ಸತ್ಯ!
ಆರೋಗ್ಯ

ಹೆಲ್ತಿಡ್ರಿಂಕ್ಸ್ ಹಾರಿಬಲ್ ಸೀಕ್ರೇಟ್! ಅಧ್ಯಯನದಿಂದ ಬಯಲಾಯ್ತು ಹೆಲ್ತಿ ಡ್ರಿಂಕ್ಸ್ ಭಯಾನಕ ಸತ್ಯ!

May 2, 2023
ಗುಚ್ಚಿ ಮಶ್ರೂಮ್ ತಿಂದವನೇ ಬಲ್ಲ ಇದರ ರುಚಿ: ಇದರ ಬೆಲೆ ಚಿನ್ನವನ್ನೇ ಮೀರಿಸುತ್ತೆ ಗೊತ್ತಾ?
Lifestyle

ಗುಚ್ಚಿ ಮಶ್ರೂಮ್ ತಿಂದವನೇ ಬಲ್ಲ ಇದರ ರುಚಿ: ಇದರ ಬೆಲೆ ಚಿನ್ನವನ್ನೇ ಮೀರಿಸುತ್ತೆ ಗೊತ್ತಾ?

April 27, 2023
2022ರಲ್ಲಿ ಅತಿ ಹೆಚ್ಚು ವಿವಾಹಗಳನ್ನು ಆಯೋಜಿಸಿದ ನಗರ ಯಾವುದು ಗೊತ್ತಾ ?
ಲೈಫ್ ಸ್ಟೈಲ್

2022ರಲ್ಲಿ ಅತಿ ಹೆಚ್ಚು ವಿವಾಹಗಳನ್ನು ಆಯೋಜಿಸಿದ ನಗರ ಯಾವುದು ಗೊತ್ತಾ ?

January 20, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.