Visit Channel

ಮತ್ತೊಂದು ದಾಖಲೆ ಬರೆದ ಕ್ರಿಸ್ಟಿಯಾನೋ ರೊನಾಲ್ಡೋ!

football

ಫುಟ್ ಬಾಲ್ ನ(Football) ದಂತಕತೆ ಕ್ರಿಸ್ಟಿಯಾನೋ ರೊನಾಲ್ಡೋ(Cristiano Ronaldo) ಮತ್ತೊಂದು ದಾಖಲೆಯನ್ನು(Record) ಬರೆದಿದ್ದಾರೆ. ಮಾರ್ಚ್ 12 ರಂದು ನಡೆದ ಮ್ಯಾಂಚೆಸ್ಟರ್ ಯುನೈಟೆಡ್(Manchester United ) ಮತ್ತು ಟೊಟೆನ್ಹ್ಯಾಮ್ (Tottenhem) ನಡುವಿನ ಪಂದ್ಯದಲ್ಲಿ ಅವರು ಹ್ಯಾಟ್ರಿಕ್ ಗೋಲ್ ಬಾರಿಸಿದ್ದಾರೆ. ಈ ಗೋಲ್ ಅವರ 59 ನೇ ಹ್ಯಾಟ್ರಿಕ್ ಗೋಲ್ ಆಗಿದೆ. ಇದು ಮಾತ್ರವಲ್ಲದೆ, ವಿಶ್ವದಲ್ಲೇ ಅತಿ ಹೆಚ್ಚು 807 ಗೋಲ್ ಬಾರಿಸಿದ ಕ್ರೀಡಾಪಟು ಇವರಾಗಿದ್ದಾರೆ.

cristino

ಇಂದು ಕೆಂಪು ಟಿ- ಶರ್ಟ್ನ ಮೇಲೆ ಏಳಂಕಿ ಸಂಖ್ಯೆಯಿದೆ ಎಂದರೆ, ಅದರ ಹಿಂದಿನ ರೋಚಕ ಕಥೆ ಇದೆಯಲ್ಲ ಅದು ಬಹಳ ಕಷ್ಟಕರ ಮತ್ತು ಬಹಳ ದುಃಖಕರವಾಗಿದೆ. ರೊನಾಲ್ಡ್ ಅವರ ಜನನ ಅತ್ಯಂತ ಕಡುಬಡತನದ ಮನೆತನದಲ್ಲಿ. ರೊನಾಲ್ಡೋ ಅವರ ತಾಯಿ ಅಡುಗೆ ಮಾಡಿ ಜೀವನ ನಡೆಸುತ್ತಿದ್ದರು ಮತ್ತು ಅವರ ತಂದೆ ಕುಡುಕರಾಗಿದ್ದರು.
3 ಮಕ್ಕಳಿದ್ದ ರೊನಾಲ್ಡೋ ಅವರ ತಾಯಿಗೆ, ರೊನಾಲ್ಡೋ ನಾಲ್ಕನೆಯ ಮಗುವಾಗಿ ಹೊರಲಾರದಷ್ಟು ಭಾರವಾಗಿದ್ದರು. ಗರ್ಭಪಾತ ಮಾಡಿಸಲು ಮುಂದಾದ ತಾಯಿಗೆ, ಡಾಕ್ಟರ್ ನಿರಾಕರಿಸಿದರು.
ಆದರೆ ಸುಮ್ಮನಾಗದ ತಾಯಿ ಮನೆ ಮದ್ದನ್ನು ಪ್ರಯೋಗಿಸಿದರು ಸಹ,
ಫುಟ್ ಬಾಲ್ ನ ದಂತಕತೆಯಾಗಬೇಕಿದ್ದ ರೊನಾಲ್ಡೋ ಗಟ್ಟಿ ಜೀವದಂತೆ ಬದುಕಿದರು.

football

ರೊನಾಲ್ಡೋ ಅವರ ಬದುಕಿನ ಅಪರೂಪದ ಗುಣಗಳನ್ನು ನಾವು ತಿಳಿಯೋಣ ಬನ್ನಿ. ಪ್ರತಿಬಾರಿ ರಕ್ತದಾನವನ್ನೂ ಮಾಡುತ್ತಾರೆ. ಅವರ ದೇಹದ ಮೇಲೆ ಒಂದು ಸಣ್ಣ ಹಚ್ಚೆಯನ್ನು ಅವರು ಹಾಕಿಸಿಕೊಂಡಿಲ್ಲ.
ತಮ್ಮ ಜೀವಿತಾವಧಿಯಲ್ಲಿ ಎಂದಿಗೂ ಧೂಮಪಾನ ಮತ್ತು ಮದ್ಯಪಾನ ಮಾಡುವುದಿಲ್ಲ ಎಂದು ಪ್ರಮಾಣ ಮಾಡಿದ್ದಾರೆ. ರೊನಾಲ್ಡೊ ಅವರಿಗೆ ನೀವು ತಿಳಿಯದ ಎರಡು ಅಡ್ಡ ಹೆಸರುಗಳಿವೆ. ಕ್ರೈ ಬೇಬಿ ಮತ್ತು ಲಿಟಲ್ ಬೀ.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.