America : ಉತ್ತರ ಅಮೇರಿಕಾದ ಮೆಕ್ಸಿಕೊದಲ್ಲಿ ಆಯೋಜಿಸಲಾಗಿದ್ದ ಪುಟ್ಬಾಲ್ ಪಂದ್ಯದಲ್ಲಿ ಎರಡು ತಂಡಗಳ ಅಭಿಮಾನಿಗಳಿಂದ ಮಾರಾಮಾರಿ ದಾಳಿ ನಡೆದಿದ್ದು, 17 ಮಂದಿ ಸಾವನ್ನಪ್ಪಿದ್ದಾರೆ, 60ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಹೌದು, ಮೆಕ್ಸಿಕೊನಲ್ಲಿ ಆಯೋಜಿಸಿದ್ದ ಪುಟ್ಬಾಲ್ ಪಂದ್ಯದ ವೀಕ್ಷಣಗೆ ಸ್ಟೇಡಿಯಂಗೆ ಧಾವಿಸಿದ್ದ ಅಪಾರ ಸಂಖ್ಯೆಯ ಅಭಿಮಾನಿಗಳು ಈ ಹಿಂಸಚಾರಕ್ಕೆ ಒಳಗಾಗಿದ್ದಾರೆ. ಅಟ್ಲಾಸ್ ಮತ್ತು ಕ್ವಾರಂಟೋರೋ ನಡುವೆ ಪಂದ್ಯ ನಡೆಯುತ್ತಿತ್ತು, ಪಂದ್ಯ ನಡೆಯಬೇಕಿದ್ದ ಸಮಯದಲ್ಲಿ ಎರಡು ತಂಡಗಳ ಪ್ರೇಕ್ಷಕರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಆದರೆ ಇದೊಂದು ಮಾತಿನ ಸಮರ ತೀವ್ರ ಮಟ್ಟಕ್ಕೆ ತಲುಪಿದೆ.
ಈ ಪರಿಣಾಮ, ಎರಡು ತಂಡದ ಅಭಿಮಾನಿಗಳು ಹಿಂದೆ ಮುಂದೆ ನೋಡದೆ ತಮ್ಮ ಬಳಿಯಿದ್ದ ವಸ್ತುಗಳು ಸೇರಿದಂತೆ ಸಿಕ್ಕ ಸಿಕ್ಕ ವಸ್ತುಗಳಲ್ಲಿ ಹೊಡೆದಾಡಿಕೊಂಡಿದ್ದಾರೆ. ಯಾರದ್ದೋ ಕೋಪ ಯಾರ ಮೇಲೋ ಎಂಬಂತೆ ಮನಬಂದಂತೆ ಸಿಕ್ಕ ಸಿಕ್ಕವರಿಗೆಲ್ಲಾ ಥಳಿಸಿದ್ದಾರೆ. ಇದೊಂದು ಪ್ರಕರಣ ದೊಡ್ಡ ಸುದ್ದಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಅಭಿಮಾನಿಗಳ ಸಂಘರ್ಷಕ್ಕೆ 17 ಮಂದಿ ಸಾವನ್ನಪ್ಪಿದ್ದಾರೆ ಮತ್ತು 60ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗಳಿಂದ ಆಸ್ಪತ್ರೆ ಪಾಲಾಗಿದ್ದಾರೆ ಎಂಬುದು ವರದಿ ಹೇಳುತ್ತದೆ.