Qatar : ಕೈಲಿಯನ್ ಎಂಬಪ್ಪೆ ಲೊಟಿನ್ ಒಬ್ಬ ಫ್ರೆಂಚ್ ವೃತ್ತಿಪರ ಫುಟ್‌ಬಾಲ್ (football player Kylian Mbappe) ಆಟಗಾರ.
ಬಹಳ ಚತುರ ಹಾಗೂ ಅತೀ ಹೆಚ್ಚು ಸಂಭಾವನೆ ಪಡೆಯುವ ಪುಟ್ಬಾಲ್ ಆಟಗಾರರಲ್ಲಿ ಒಬ್ಬರಾದ ಇವರು ಡಿಸೆಂಬರ್-20 -1998 ರಲ್ಲಿ ಪ್ಯಾರಿಸ್‌ನ 19 ನೇ ಅರೋಂಡಿಸ್ಮೆಂಟ್‌ನಲ್ಲಿ ಜನಿಸಿದರು ಇದು ಪ್ಯಾರಿಸ್‌ನ ಮಧ್ಯಭಾಗದಿಂದ ಸುಮಾರು 10.9 km ದೂರದಲ್ಲಿರುವ ಬಾಂಡಿಯಲ್ಲಿದೆ.

ಕೈಲಿಯನ್ ಅವರ ತಂದೆ ವಿಲ್ಫ್ರೈಡ್ (football player Kylian Mbappe) ಮೂಲತಃ ಕ್ಯಾಮರೂನ್‌ನವರು ಇವರು ಸ್ವತಃ ಎಂಬಪ್ಪೆ ಅವರಿಗೆ ಫುಟ್‌ಬಾಲ್ ತರಬೇತುದಾರರು ಆಗಿದ್ದರು ಹಾಗೂ ಇವರ ತಾಯಿ ಫೈಜಾ ಲಾಮರಿ.
ಇವರ ಇಬ್ಬರು ಕಿರಿಯ ಸಹೋದರರಾದ ಈಥಾನ್ ಮತ್ತು ಜಿರೆಸ್ ಕೆಂಬೊ ಎಕೊಕೊ ವೃತ್ತಿಪರ ಫುಟ್‌ಬಾಲ್ ಆಟಗಾರರಾಗಿದ್ದಾರೆ. ಕೈಲಿಯನ್ ರವರ ಪ್ರಾಥಮಿಕ ಶಿಕ್ಷಣ ಬಾಂಡಿಯಲ್ಲಿರುವ ಖಾಸಗಿ ಕ್ಯಾಥೋಲಿಕ್ ಶಾಲೆಯಲ್ಲಿ ಮುಗಿಸಿದರು,
ಜೊತೆಗೆ ಶೈಕ್ಷಣಿಕವಾಗಿ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದರು ಕೂಡ ಅಶಿಸ್ತಿನ ವಿದ್ಯಾರ್ಥಿ ಎಂದು ಶಾಲಾ ದಿನಗಳಲ್ಲಿ ಪರಿಗಣಿಸಲ್ಪಟ್ಟಿದ್ದರು.
ಇದನ್ನೂ ನೋಡಿ : https://fb.watch/hsbdQcuBe0/ COVER STORY | ಪ್ಲಾಸ್ಟಿಕ್ ಬ್ಯಾನ್ ಅನ್ನೋ Joke ! Plastic ban has become joke in Karnataka.
ವರ್ಷಗಳು ಕಳೆಯುತ್ತಿದ್ದಂತೆ ಅವರಿಗೆ ಫುಟ್ಬಾಲ್ ನ ಮೇಲೆ ಆಸಕ್ತಿ ಹೆಚ್ಚಾಯಿತು. ಜಿನೆಡಿನ್ ಜಿಡಾನೆ, ರೊನಾಲ್ಡೊ ನಜಾರಿಯೊ ಮತ್ತು ಕ್ರಿಸ್ಟಿಯಾನೊ ರೊನಾಲ್ಡೊ ಇವರೆಲ್ಲ ಎಂಬಪ್ಪೆ ಅವರಿಗೆ ಫುಟ್ಬಾಲ್ ನ ಆರಾಧ್ಯ ದೈವಗಳಾಗಿದ್ದರು.
ಇವರ ವೃತ್ತಿಪರ ಜೀವನ ಇಲ್ಲಿಂದ ಪ್ರಾರಂಭವಾಗುತ್ತದೆ, 2ನೇ ಡಿಸೆಂಬರ್ 2015 ರಂದು ಕೈಲಿಯನ್ ತನ್ನ 16 ನೇ ವಯಸ್ಸಿನಲ್ಲಿ ಎಸ್.ಎಮ್ ಕೇನ್ ವಿರುದ್ಧದ ಲಿಗ್-1 ಪಂದ್ಯದಲ್ಲಿ ಮೊನಾಕೊ (Monaco) B ತಂಡಕ್ಕಾಗಿ ಆಡುವ ಮೂಲಕ ತನ್ನ ಹಿರಿಯ ಚೊಚ್ಚಲ ಪಂದ್ಯ ಗೆದ್ದು, ಮೊನಾಕೊದ ಕಿರಿಯ ತಂಡದ ಆಟಗಾರರಾದರು.
ಇದನ್ನೂ ಓದಿ : https://vijayatimes.com/karavali-kambala/
ನಂತರ ಫೆಬ್ರವರಿ 20, 2016 ರಲ್ಲಿ ತಮ್ಮ ಮೊದಲ ಗೋಲು ಗಳಿಸಿದಾಗ ಮೊನಾಕೊದ ಅತ್ಯಂತ ಕಿರಿಯ ಗೋಲ್‌ಸ್ಕೋರರ್ ಎಂಬ ದಾಖಲೆ ಬರೆದು, ಮೊನಾಕೊದಿಂದ ಇನ್ನೂ ಮೂರು ವರ್ಷಗಳ ಕಾಲ ಸಹಿ ಮಾಡಿದರು.
ಡಿಸೆಂಬರ್ 14, 2016 ರಂದು, ಅವರು ‘ಕೂಪೆ ಡೆ ಲಾ ಲಿಗ್ಯೂನಲ್ಲಿ ಸ್ಟೇಡ್ ರೆನೈಸ್’ ವಿರುದ್ಧದ ಪಂದ್ಯದಲ್ಲಿ ಮೊನಾಕೊವನ್ನು ಗೆಲ್ಲಿಸಿದರು, ನಂತರ 11 ಫೆಬ್ರವರಿ 2017 ರಂದು ಮತ್ತೊಮ್ಮೆ ತಮ್ಮ ತಂಡಕ್ಕೆ ಸಹಾಯ ಮಾಡುವ ಮೂಲಕ ಲಿಗ್ 1 ರಲ್ಲಿ ಹ್ಯಾಟ್ರಿಕ್ ಬಾರಿಸಿದರು.
ಫುಟ್ಬಾಲ್ ಕ್ಲಬ್ ಡಿ ಮೆಟ್ಜ್ ವಿರುದ್ಧ ಕೂಡ ಜಯ ಸಾಧಿಸಿದರು. 2005 ರಲ್ಲಿ ಜೆರೆಮಿ ಮೆನೆಜ್ ನಂತರ ಲಿಗ್ 1 ನಲ್ಲಿ ಹ್ಯಾಟ್ರಿಕ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಜೊತೆಗೆ ಇವರು ಲಿಗ್-1 ಕ್ಲಬ್ ಪ್ಯಾರಿಸ್ ಸೇಂಟ್-ಜರ್ಮೈನ್ ಮತ್ತು ಫ್ರಾನ್ಸ್ ರಾಷ್ಟ್ರೀಯ ತಂಡಕ್ಕೆ ಫಾರ್ವರ್ಡ್ ಆಗಿ ಆಡುತ್ತಿದ್ದಾರೆ.

ಕೈಲಿಯನ್ ಎಂಬಪ್ಪೆ ಪ್ರಶಸ್ತಿಗಳು ಮತ್ತು ಸಾಧನೆಗಳು
- 2016-17 ರಲ್ಲಿ ಕೈಲಿಯನ್ ಎಂಬಪ್ಪೆ ಅವರಿಗೆ ಲಿಗ್ 1 ವರ್ಷದ ಯುವ ಆಟಗಾರ ಪ್ರಶಸ್ತಿಯನ್ನು ನ್ಯಾಷನಲ್ ಯೂನಿಯನ್ ಆಫ್ ಪ್ರೊಫೆಷನಲ್ ಫುಟ್ಬಾಲ್ ಆಟಗಾರರು (UNFP) ನೀಡಿ ಗೌರವಿಸಲಾಯಿತು.
- 2017 ರಲ್ಲಿ, ಅವರು ಹೆಸರಾಂತ ಕ್ರೀಡಾ ಪತ್ರಕರ್ತರಿಂದ “ಗೋಲ್ಡನ್ ಬಾಯ್” ಎಂಬ ಹೆಸರನ್ನು ಪಡೆದರು
- ಯುರೋಪಿಯನ್ ಫುಟ್ಬಾಲ್ ಅಸೋಸಿಯೇಷನ್ಸ್ ಒಕ್ಕೂಟ (UEFA) ಅವರನ್ನು ವಿಶ್ವದ ಎಂಟನೇ ಅತ್ಯುತ್ತಮ ಆಟಗಾರ ಎಂದು ಆಯ್ಕೆ ಮಾಡಿದೆ.
- ಏಪ್ರಿಲ್ 2017 ರಲ್ಲಿ, ಅವರಿಗೆ ‘UNFP ಪ್ಲೇಯರ್ ಆಫ್ ದಿ ಮಂತ್’ ಟ್ರೋಫಿಯನ್ನು ನೀಡಿ ಗೌರವಿಸಲಾಯಿತು.
- 2018 ರಲ್ಲಿ ಮಾರ್ಚ್ ಮತ್ತು ಆಗಸ್ಟ್‌ನಲ್ಲಿ ಅದೇ ಟ್ರೋಫಿಯನ್ನು ಗೆದ್ದರು.
- 2018 ರಲ್ಲಿ ಅವರು ‘ಫೆಡರೇಶನ್ ಇಂಟರ್ನ್ಯಾಷನಲ್ ಡಿ ಫುಟ್ಬಾಲ್ ಅಸೋಸಿಯೇಷನ್ (FIFA) ನಿಂದ ನಾಲ್ಕನೇ ಅತ್ಯುತ್ತಮ ಆಟಗಾರ ಎಂದು ಗುರುತಿಸಲ್ಪಟ್ಟರು.
- 2018 ರಲ್ಲಿ “ಕೋಪಾ ಟ್ರೋಫಿ” ಮತ್ತು “ವರ್ಷದ ಫ್ರೆಂಚ್ ಆಟಗಾರ” ಎಂಬ ಪ್ರಶಸ್ತಿ ಗೆದ್ದರು.
ಕೈಲಿಯನ್ ಎಂಬಪ್ಪೆಗೆ ಸಂದ ಗೌರವಗಳು
- 2016–17 ರಲ್ಲಿ ಮೊನಾಕೊ: ಲಿಗ್ 1 ,
- 2016–17 ರಲ್ಲಿ ಕೂಪೆ ಡೆ ಲಾ ಲಿಗ್ಯೂ ರನ್ನರ್-ಅಪ್,
- 2016 UEFA ಯುರೋಪಿಯನ್ ಅಂಡರ್-19 ಚಾಂಪಿಯನ್‌ಶಿಪ್
- 2017–18 ರಲ್ಲಿ ಪ್ಯಾರಿಸ್ ಸೇಂಟ್-ಜರ್ಮೈನ್, ರನ್ನರ್ ಅಪ್
- 2018–19 ರಲ್ಲಿ ಕೂಪೆ ಡಿ ಫ್ರಾನ್ಸ್ ,
- 2017–18 ರನ್ನರ್ ಅಪ್,
- 2018–19 ಕೂಪೆ ಡೆ ಲಾ ಲಿಗು
- 2019 ಟ್ರೋಫಿ ಡೆಸ್ ಚಾಂಪಿಯನ್ಸ್
- 2018 ರಲ್ಲಿ ಫ್ರಾನ್ಸ್: FIFA ವಿಶ್ವಕಪ್
ಇದನ್ನೂ ನೋಡಿ : https://fb.watch/hrNNhIGXmH/ ಬ್ಯಾಂಕ್ ಲಾಕರ್ ಚಿನ್ನಮಾಯ! Bank locker fraud!