ತಿರುವನಂತರಪುರ, ಜು. 15: ಕೇರಳದಲ್ಲಿ ಮತ್ತೆ ಝೀಕಾ ವೈರಸ್ ಸೋಂಕು ಐವರಲ್ಲಿ ದೃಢಪಟ್ಟಿದೆ. ಇವರಲ್ಲಿ ನಾಲ್ವರು ಮಹಿಳೆಯರು. ಈ ಮೂಲಕ ರಾಜ್ಯದಲ್ಲಿ ಝೀಕಾ ಸೋಂಕಿತರ ಒಟ್ಟಾರೆ ಸಂಖ್ಯೆ 28ಕ್ಕೆ ಏರಿಕೆಯಾದಂತಾಗಿದೆ.
ಹೊಸ ಪ್ರಕರಣಗಳಲ್ಲಿ ಇಬ್ಬರು ಇಲ್ಲಿನ ಅನಾಯರಾ ಮೂಲದವರಾಗಿದ್ದು, ಮೂರು ಕಿ.ಮೀ ವ್ಯಾಪ್ತಿಯಲ್ಲಿಯೇ ರೋಗದ ಕ್ಲಸ್ಟರ್ ಅನ್ನು ಗುರುತಿಸಲಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಗುರುವಾರ ತಿಳಿಸಿದ್ದಾರೆ.
ಇತರ ಸ್ಥಳಗಳಿಗೆ ಸೋಂಕು ಹರಡುವುದನ್ನು ತಡೆಯಲು ಈ ಪ್ರದೇಶದಲ್ಲಿ ಸೊಳ್ಳೆಗಳನ್ನು ನಾಶಪಡಿಸಲು ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ.