• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Lifestyle

ಪ್ರಿಜ್ ನಲ್ಲಿ ಇಟ್ಟ ಆಹಾರವನ್ನು ಎಷ್ಟು ಸಮಯದೊಳಗೆ ಸೇವಿಸಿದರೆ, ಉತ್ತಮ

Sharadhi by Sharadhi
in Lifestyle
ಪ್ರಿಜ್ ನಲ್ಲಿ ಇಟ್ಟ ಆಹಾರವನ್ನು ಎಷ್ಟು ಸಮಯದೊಳಗೆ ಸೇವಿಸಿದರೆ, ಉತ್ತಮ
0
SHARES
0
VIEWS
Share on FacebookShare on Twitter

ಉಳಿದ ಆಹಾರವನ್ನು ರೆಫ್ರಿಜರೇಟರ್ ನಲ್ಲಿ ಸಂಗ್ರಹಿಸುವ ಉದ್ದೇಶವೆಂದರೆ ಆಹಾರ ವ್ಯರ್ಥವಾಗುವುದನ್ನು ತಡೆಯುವುದು ಅಥವಾ ಸಮಯವನ್ನು ಉಳಿಸುವುದು. ಆಹಾರವು ಹಾಳಾಗುವುದನ್ನು ಫ್ರಿಜ್ ತಡೆಯಬಹುದು, ಆದರೆ ಇದು ನಿಮ್ಮ ಆರೋಗ್ಯವನ್ನು ಹಾಳಾಗದಂತೆ ಕಾಪಾಡಬಹುದೇ? ಈ ಪ್ರಶ್ನೆಗೆ ಉತ್ತರವನ್ನು ಪಡೆಯಲು, ಈ ಲೇಖನ ಓದಿ. ಏಕೆಂದರೆ ಆಹಾರ, ಹಣ್ಣುಗಳು ಮತ್ತು ತರಕಾರಿಗಳನ್ನು ಫ್ರಿಜ್ ನಲ್ಲಿ ಎಷ್ಟು ಸಮಯದವರೆಗೆ ಇಡುವುದು ಆರೋಗ್ಯಕ್ಕೆ ಸುರಕ್ಷಿತ ಎಂಬುದನ್ನು ಹೇಳಿದ್ದೇವೆ.

ಆರೋಗ್ಯ ಚೆನ್ನಾಗಿರಬೇಕಾದರೆ ಫ್ರಿಜ್ ನಲ್ಲಿ ಇಟ್ಟ ಆಹಾರವನ್ನು ಎಷ್ಟು ಸಮಯದೊಳಗೆ ತಿನ್ನಬೇಕು ಎಂಬುದನ್ನು ಈ ಕೆಳಗೆ ನೀಡಲಾಗಿದೆ:
ಅನ್ನ:
ರೆಫ್ರಿಜರೇಟರ್ ನಲ್ಲಿ ಬೇಯಿಸಿದ ಅನ್ನಯನ್ನು ಇಟ್ಟರೆ ಅದನ್ನು 2 ದಿನಗಳಲ್ಲಿ ತಿನ್ನಬೇಕು. ಅದನ್ನು ಸೇವಿಸುವ ಮೊದಲು ಅನ್ನವನ್ನು ಸ್ವಲ್ಪ ಸಮಯದವರೆಗೆ ಕೋಣೆಯ ಉಷ್ಣಾಂಶದಲ್ಲಿ ಇಡಿ. ಅಷ್ಟೇ ಅಲ್ಲ, ಅನ್ನವನ್ನು ಸರಿಯಾಗಿ ಬಿಸಿ ಮಾಡಿದ ಮೇಲೆ ಮಾತ್ರ ತಿನ್ನಿರಿ. ಎರಡು ದಿನಗಳ ನಂತರ ಆ ಅನ್ನ ತಿನ್ನಲು ಹೋಗಬೇಡಿ.

ಚಪಾತಿ ಅಥವಾ ರೋಟಿ:
ಹೆಚ್ಚು ದಿನಗಳ ಕಾಲ ಇಟ್ಟ ರೊಟ್ಟಿ ಹೊಟ್ಟೆ ನೋವನ್ನು ಉಂಟುಮಾಡುತ್ತದೆ. ನೀವು ಗೋಧಿ ರೋಟಿಯನ್ನು ಫ್ರಿಜ್ ನಲ್ಲಿ ಇಟ್ಟುಕೊಂಡಿದ್ದರೆ, ರೊಟ್ಟಿ ತಯಾರಿಸಿದ 12 ರಿಂದ 14 ಗಂಟೆಗಳಲ್ಲಿ ಇದನ್ನು ಸೇವಿಸುವುದು ಉತ್ತಮ. ಇದನ್ನು ಮತ್ತಷ್ಟು ದಿನಗಳ ಕಾಲ ಇಟ್ಟರೆ ರೊಟ್ಟಿಯ ಪೌಷ್ಠಿಕಾಂಶದ ಮೌಲ್ಯವನ್ನು ಕಳೆದುಕೊಳ್ಳುವುದರ ಜೊತೆಗೆ, ಇದು ನಿಮಗೆ ಹೊಟ್ಟೆ ನೋವನ್ನು ಸಹ ಉಂಟುಮಾಡುತ್ತದೆ.

ಬೇಳೆಕಾಳು:
ಆಹಾರ ತಯಾರಿಸುವಾಗ ಬೇಳೆ ಕಾಳು ಉಳಿದಿದ್ದರೆ ಮತ್ತು ಅದು ಹಾಳಾಗದಂತೆ ತಡೆಯಲು ಅದನ್ನು ಫ್ರಿಜ್ ನಲ್ಲಿ ಇಟ್ಟುಕೊಂಡಿದ್ದರೆ, ಅದನ್ನು 2 ದಿನಗಳಲ್ಲಿ ಸೇವಿಸಿ. 2 ದಿನಗಳ ನಂತರ, ಫ್ರಿಜ್ ನಲ್ಲಿ ಇಟ್ಟ ಬೇಳೆ ಸೇವಿಸಿದ ನಂತರ, ಅದು ಹೊಟ್ಟೆಯಲ್ಲಿ ಗ್ಯಾಸ್ ರೂಪಿಸಲು ಪ್ರಾರಂಭಿಸುತ್ತದೆ. ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುವುದು.

ಕತ್ತರಿಸಿದ ಹಣ್ಣುಗಳು:
ಅನೇಕ ಬಾರಿ ಕತ್ತರಿಸಿದ ಹಣ್ಣುಗಳನ್ನು ಫ್ರಿಜ್ ನಲ್ಲಿ ಇಡುವುದುಂಟು. ಆದರೆ ಪ್ರತಿ ಹಣ್ಣುಗಳನ್ನು ತಿನ್ನಲು ಒಂದು ನಿರ್ದಿಷ್ಟ ಸಮಯವಿದೆ. ಅದರ ನಂತರ ಈ ಹಣ್ಣು ಹಾಳಾಗುವುದು. ಪಪ್ಪಾಯಿ ಆರು ಗಂಟೆಗಳಿಗಿಂತ ಹೆಚ್ಚು ಕಾಲ ಉಳಿಯುವುದಿಲ್ಲ. ನೀವು ಕತ್ತರಿಸಿದ ಪಪ್ಪಾಯಿಯನ್ನು ಫ್ರಿಜ್ ನಲ್ಲಿ ಸಂಗ್ರಹಿಸಿದ್ದರೆ, ಅದನ್ನು ಆರು ಗಂಟೆಗಳಲ್ಲಿ ಬಳಸಬೇಕು. ತದನಂತರ ಅದು ಕಲುಷಿತವಾಗಲು ಪ್ರಾರಂಭವಾಗುವುದು. ನೀವು ಅದನ್ನು 12 ಗಂಟೆಗಳ ನಂತರ ಸೇವಿಸಿದರೆ, ನಿಮ್ಮ ದೇಹಕ್ಕೆ ನಿಧಾನವಾದ ವಿಷದಂತೆ ಕಾರ್ಯನಿರ್ವಹಿಸುತ್ತದೆ.

ಕತ್ತರಿಸಿದ ನಂತರ ಸೇಬುಗಳನ್ನು ದೀರ್ಘಕಾಲದವರೆಗೆ ಇಟ್ಟುಕೊಂಡರೆ, ಆಕ್ಸಿಡೀಕರಣವು ಅದರಲ್ಲಿ ನಡೆಯಲು ಪ್ರಾರಂಭಿಸುತ್ತದೆ. ಈ ಕಾರಣದಿಂದಾಗಿ ಅದರ ಮೇಲಿನ ಪದರವು ಕಪ್ಪು ಬಣ್ಣಕ್ಕೆ ತಿರುಗುವುದು. ಆದರೆ, ಇದರಿಂದ ಯಾವುದೇ ಗಮನಾರ್ಹ ಅನಾನುಕೂಲತೆ ಇಲ್ಲ. ಆದರೆ ಸೇಬನ್ನು ಕತ್ತರಿಸಿದ 4 ಗಂಟೆಗಳಲ್ಲಿ ತಿನ್ನುವುದು ಉತ್ತಮ. ನೀವು ಯಾವುದೇ ಹಣ್ಣುಗಳನ್ನು ಕತ್ತರಿಸಿ ಪ್ರಿಜ್ ನಲ್ಲಿ ಇಟ್ಟಿದ್ದರೆ, ಅದನ್ನು 6 ರಿಂದ 8 ಗಂಟೆಗಳ ನಂತರ ತಿನ್ನಬಾರದು.

ದೀರ್ಘಕಾಲದವರೆಗೆ ಫ್ರಿಜ್ನಲ್ಲಿ ಆಹಾರವನ್ನು ತಾಜಾವಾಗಿರಿಸುವುದು ಹೇಗೆ?:
ಆಗಾಗ್ಗೆ ಜನರು ಬೇಯಿಸಿದ ಆಹಾರವನ್ನು ಹಸಿ ತರಕಾರಿಗಳೊಂದಿಗೆ ಫ್ರಿಜ್ನ ಒಂದೇ ಕಪಾಟಿನಲ್ಲಿ ಇಡುತ್ತಾರೆ. ಇದನ್ನು ಮಾಡುವುದರಿಂದ, ಫ್ರಿಜ್ ನಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯಲು ಪ್ರಾರಂಭಿಸುತ್ತವೆ ಮತ್ತು ಆಹಾರವು ಬೇಗನೆ ಹಾಳಾಗುತ್ತದೆ. ಹಸಿ ಮತ್ತು ಬೇಯಿಸಿದ ಆಹಾರವನ್ನು ಬೇರೆ ಬೇರೆ ಕಪಾಟಿನಲ್ಲಿ ಇಡುವುದರ ಮೂಲಕ, ಹಸಿ ಆಹಾರದ ಬ್ಯಾಕ್ಟೀರಿಯಾವು ಬೇಯಿಸಿದ ಆಹಾರವನ್ನು ಕಲುಷಿತಗೊಳಿಸುವುದಿಲ್ಲ. ನೀವು ಬೇಯಿಸಿದ ಆಹಾರವನ್ನು ಸ್ಟೀಲ್ ಬಾಕ್ಸ್ ಇಟ್ಟುಕೊಂಡರೆ ಉತ್ತಮ.

ಪ್ರಿಜ್ ನಲ್ಲಿ ಇಟ್ಟ ಹಣ್ಣು-ತರಕಾರಿಗಳನ್ನು ಎಷ್ಟು ದಿನಗಳ ಒಳಗೆ ಸೇವಿಸಬೇಕು?:
ಹಣ್ಣುಗಳು ಮತ್ತು ತರಕಾರಿಗಳನ್ನು ಫ್ರಿಜ್ ನಲ್ಲಿ ಇಡಲು ನಿಗದಿತ ಸಮಯವೂ ಇದೆ. ಈ ಅವಧಿ ಮುಗಿಯುವ ಮೊದಲೇ ಅದನ್ನು ಸೇವಿಸಬೇಕು. ಆಗ ಮಾತ್ರ ದೇಹವು ಅದರಲ್ಲಿರುವ ಪೋಷಕಾಂಶಗಳನ್ನು ಪಡೆಯಬಹುದು. ಮೈಫಿಯರ್ಲೆಸ್ ಕಿಚನ್ ಪ್ರಕಾರ, ಫ್ರಿಜ್ನಲ್ಲಿ ಇಟ್ಟ ಹಣ್ಣುಗಳು ಮತ್ತು ತರಕಾರಿಗಳನ್ನು ಇಷ್ಟು ದಿನಗಳಲ್ಲಿ ಸೇವಿಸಬೇಕು.

ಸೇಬು :4 – 6 ವಾರಗಳು
ಚೆರ್ರಿ : 7 ದಿನಗಳು
ಕಪ್ಪು ದ್ರಾಕ್ಷಿ ರಾಸ್ಪ್ಬೆರಿ, ಸ್ಟ್ರಾಬೆರಿ: 3-6 ವಾರ
ಸಿಟ್ರಸ್ ಹಣ್ಣು : 1 – 3 ವಾರ
ದ್ರಾಕ್ಷಿ – 7 ದಿನಗಳು
ಕಲ್ಲಂಗಡಿ – ಕತ್ತರಿಸದೇ ಇರುವುದು 2 ವಾರಗಳು, ಹೋಳಾದ : 2 -4 ದಿನಗಳು
ಅನನಾಸ್ :5-7 ದಿನಗಳು
ಬಿನ್ಸ್ : 3-5 ದಿನಗಳು
ಕಾರ್ನ್: 1-2 ದಿನಗಳು

Related News

ನಿಮಗೆ ಅಂಗೈ ಬೆವರೋ ಸಮಸ್ಯೆ ಇದೆಯಾ? ಇದು ಗಂಭೀರ ಆರೋಗ್ಯ ಸಮಸ್ಯೆಯ ಲಕ್ಷಣನಾ?
Lifestyle

ನಿಮಗೆ ಅಂಗೈ ಬೆವರೋ ಸಮಸ್ಯೆ ಇದೆಯಾ? ಇದು ಗಂಭೀರ ಆರೋಗ್ಯ ಸಮಸ್ಯೆಯ ಲಕ್ಷಣನಾ?

March 18, 2023
ನಿಮ್ಮ ಇಮ್ಯುನಿಟಿ ಬೂಸ್ಟ್‌ ಆಗ್ಬೇಕಾ? ಹಾಗಾದ್ರೆ ಈ ಹಣ್ಣು ತಿನ್ನಿ ಚಮತ್ಕಾರ ನೋಡಿ
Lifestyle

ನಿಮ್ಮ ಇಮ್ಯುನಿಟಿ ಬೂಸ್ಟ್‌ ಆಗ್ಬೇಕಾ? ಹಾಗಾದ್ರೆ ಈ ಹಣ್ಣು ತಿನ್ನಿ ಚಮತ್ಕಾರ ನೋಡಿ

March 17, 2023
ಮೊಸರು ತಿನ್ನುವುದರಿಂದ ಏನೆಲ್ಲಾ ಪ್ರಯೋಜನಗಳು ದೊರೆಯಲಿದೆ ಗೊತ್ತಾ? ಇಲ್ಲಿದೆ ಮಾಹಿತಿ
Lifestyle

ಮೊಸರು ತಿನ್ನುವುದರಿಂದ ಏನೆಲ್ಲಾ ಪ್ರಯೋಜನಗಳು ದೊರೆಯಲಿದೆ ಗೊತ್ತಾ? ಇಲ್ಲಿದೆ ಮಾಹಿತಿ

March 14, 2023
ಆರೋಗ್ಯ ಸಲಹೆಗಳು
Lifestyle

ಆರೋಗ್ಯ ಸಲಹೆಗಳು

March 14, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.