ಕೊಡಗು, ಮೇ. 28: ಪೊನ್ನಂಪೇಟೆ ತಾಲ್ಲೂಕಿನ ದೇವಮಚ್ಚಿ ಎಂಬಲ್ಲಿ ಕಾರ್ಮಿಕನೊಬ್ಬನನ್ನು ಕಾಡಾನೆ ಕೊಂದು ಹಾಕಿದೆ.
ಮೃತ ಕಾರ್ಮಿಕನನ್ನು ನಾಣು (60) ಎಂದು ಗುರುತಿಸಲಾಗಿದ್ದು ಶುಕ್ರವಾರ ಬೆಳಗ್ಗೆ 6.30ರ ವೇಳೆ ಈ ಘಟನೆ ನಡೆದಿದೆ. ನಾಣು ತನ್ನ ಮನೆಗೆ ಆಹಾರ ಸಾಮಾಗ್ರಿ ಖರೀದಿಸಲು ತಿತಿಮತಿಗೆ ಬರುತ್ತಿರುವ ವೇಳೆ ರಸ್ತೆಯಲ್ಲೇ ಎದುರಾದ ಒಂಟಿ ಸಲಗವೊಂದು ತುಳಿದು ಹಾಕಿದೆ. ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಕಾಡಾನೆ ಮುಂಜಾನೆಯ ವೇಳೆ ಮೈಸೂರು ಮುಖ್ಯ ರಸ್ತೆಯಿಂದ ದೇವಮಚ್ಚಿ ರಸ್ತೆ ಕಡೆಗೆ ತೆರಳಿದೆ ಎಂದು ಸ್ಥಳೀಯರು ತಿಳಿಸಿದರು. ಮುಖ್ಯರಸ್ತೆಯ ಅನತಿ ದೂರದಲ್ಲಿ ಈ ಘಟನೆ ನಡೆದಿದ್ದು ಸುತ್ತಮುತ್ತಲಿನ ಗ್ರಾಮದ ಜನರು ಭಯ ಭೀತರಾಗಿದ್ದಾರೆ.