ಮೈಸೂರು, ಮಾ. 23: ಎಚ್.ಡಿ.ಕೋಟೆ ತಾಲ್ಲೂಕಿನ ಕೂರ್ಣೆಗಾಲ ಬಳಿ ಕಂದಕಕ್ಕೆ ಬಿದ್ದಿದ್ದ ಎರಡು ವರ್ಷದ ಗಂಡಾನೆ ಮರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ.
ಇಲ್ಲಿಗೆ ಸಮೀಪದ ತಾಲ್ಲೂಕಿನ ಕೂರ್ಣೆಗಾಲ ಬಳಿ ಕಂದಕಕ್ಕೆ ಬಿದ್ದಿದ್ದ ಎರಡು ವರ್ಷದ ಗಂಡು ಕಾಡಾನೆ ಮರಿಯನ್ನು ರಕ್ಷಣೆ ಮಾಡಲಾಗಿದೆ. ಕಾಡಿನಿಂದ ಊರಿನೊಳಕ್ಕೆ ಆನೆಗಳು ಬಾರದಂತೆ ನಿರ್ಮಿಸಲಾಗಿದ್ದ 9 ಅಡಿ ಆಳದ ಕಂದಕ್ಕೆ ಆನೆ ಮರಿ ಬಿದ್ದದ್ದು ಅದನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ.
ಎರಡು ವರ್ಷದ ಗಂಡು ಆನೆ ಮರಿಯನ್ನು ಅರಣ್ಯ ಇಲಾಖೆಯ ಯಶಸ್ವಿ ಕಾರ್ಯಾಚರಣೆಯಿಂದ ರಕ್ಷಿಸಲಾಗಿದೆ. ಎರಡು ಗಂಟೆ ಕಾರ್ಯಾಚರಣೆ ನಡೆಸಿ, ಜೆಸಿಬಿ ಯಂತ್ರದ ಸಹಾಯದಿಂದ ಆನೆ ಮರಿಯನ್ನು ರಕ್ಷಣೆ ಮಾಡಲಾಗಿದ್ದು ಬಳಿಕ ಸಂತಸದಿಂದ ಆನೆ ಮರು ತನ್ನ ತಾಯಿಯ ಮಡಿಲು ಸೇರಿದೆ.
ಆನೆ ಮರಿ ಕಾಡಿನಿಂದ ನಾಡಿಗೆ ಬಂದು ಕಂದಕಕ್ಕೆ ಬಿದ್ದು ಹೊರಬರಲಾಗದೇ ಒದ್ದಾಡುತ್ತಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಎರಡು ಗಂಟೆ ಕಾರ್ಯಾಚರಣೆ ನಡೆಸಿ ಜೆಸಿಬಿ ಸಹಾಯದಿಂದ ಆನೆ ಮರಿಯನ್ನು ರಕ್ಷಿಸಿದ್ದಾರೆ. ನಂತರ ತಾಯಿ ಆನೆ ಬಳಿ ಬಿಟ್ಟಿದ್ದಾರೆ.