ಬೆಂಗಳೂರು, ಮಾ. 02: ಮುಂದಿನ ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಬಲವರ್ಧನೆಗೆ ಬಿಜೆಪಿ ಮುಂದಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಶಿಸ್ತು ಸಮಿತಿಗೆ ನೂತನ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಿಸಲಾಗಿದೆ.
ರಾಜ್ಯ ಶಿಸ್ತು ಸಮಿತಿಗೆ ಓರ್ವ ಅಧ್ಯಕ್ಷರು ಸೇರಿದಂತೆ ನಾಲ್ಕು ಮಂದಿ ಸದಸ್ಯರನ್ನು ನೇಮಕ ಮಾಡಲಾಗಿದೆ. ಹುಬ್ಬಳ್ಳಿ ಮೂಲದ ಲಿಂಗರಾಜ ಪಾಟೀಲ್ ಅವರಿಗೆ ಶಿಸ್ತು ರಾಜ್ಯ ಶಿಸ್ತು ಸಮಿತಿಯ ಅಧ್ಯಕ್ಷ ಸ್ಥಾನದ ಹೊಣೆಗಾರಿಕೆ ನೀಡಲಾಗಿದೆ.
ಉಳಿದಂತೆ ತಿಪಟೂರು ಶಾಸಕ ಬಿ.ಸಿ.ನಾಗೇಶ್, ಬಾಗಲಕೋಟೆಯ ಪಿ.ಎಚ್. ಪೂಜಾರ, ಕೊಡಗಿನ ರೀನಾ ಪ್ರಕಾಶ್ ಹಾಗೂ ಬೆಂಗಳೂರಿನ ಇ. ಅಶ್ವಥ್ ನಾರಾಯಣ ಅವರುಗಳನ್ನು ಶಿಸ್ತು ಸಮಿತಿ ಸದಸ್ಯರಾಗಿ ನೇಮಿಸಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆದೇಶಿಸಿದ್ದಾರೆ.