New Delhi : ಕೇಂದ್ರ ಸರ್ಕಾರದ ಪ್ರಕಾರ, ಏಪ್ರಿಲ್ 2021 ಮತ್ತು ಮಾರ್ಚ್ 2022 ರ ನಡುವೆ 88,844 ಔಷಧಿಗಳನ್ನು (founded poor quality medicines) ಪರೀಕ್ಷಿಸಲಾಗಿದ್ದು, ಇದರಲ್ಲಿ ಒಟ್ಟು 2,500
ಗುಣಮಟ್ಟವಿಲ್ಲದ ಅಂದರೆ ಕಳಪೆ ಗುಣಮಟ್ಟದ ಮತ್ತು 379 ವಿಷಕಾರಿ ಔಷಧ ಎಂದು ಕಂಡುಬಂದಿದೆ. ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್ (Bharathy Praveen Pawar)
ಮಂಗಳವಾರ ರಾಜ್ಯಸಭೆಯಲ್ಲಿ (founded poor quality medicines) ಪ್ರಶ್ನೆಗಳಿಗೆ ಲಿಖಿತ ಉತ್ತರ ನೀಡಿದರು.

ಏಪ್ರಿಲ್ 2021 ಮತ್ತು ಮಾರ್ಚ್ 2022 ರ ನಡುವೆ, ಕಲಬೆರಕೆ ಔಷಧಗಳ ತಯಾರಿಕೆಗೆ ಸಂಬಂಧಿಸಿದ ಮತ್ತು ಅವುಗಳ ಮಾರಾಟ ಮತ್ತು ನಕಲಿ ಔಷಧಗಳ ಸಂಬಂಧ ಒಟ್ಟು 592 ಸಂಸ್ಥೆಗಳು ಮತ್ತು
ಅವುಗಳ ಸಂಬಂಧಿತ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಇದೇ ಅವಧಿಯಲ್ಲಿ ಒಟ್ಟು 84,874 ಔಷಧಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ 2,652 ಔಷಧಗಳನ್ನು ಗುಣಮಟ್ಟವಲ್ಲ ಎಂದು ಘೋಷಿಸಲಾಗಿದೆ.
ಒಟ್ಟು 263 ಔಷಧಗಳು ವಿಷಕಾರಿ ಅಥವಾ ನಕಲಿ ಎಂದು ಕಂಡುಬಂದಿದೆ ಎಂದು ಅವರು ಹೇಳಿದರು.
ಪ್ಯಾರಸಿಟಮಾಲ್ ಡಿಸ್ಪರ್ಸಿಬಲ್ ನಂತಹ 14 ರೀತಿಯ ಎಫ್ಡಿಸಿ ಔಷಧಿಗಳನ್ನು ಕೇಂದ್ರ ಸರ್ಕಾರವು ಸ್ಪಷ್ಟವಾಗಿ ನಿಷೇಧಿಸಿದೆ
ಸಾರ್ವಜನಿಕ ಆರೋಗ್ಯಕ್ಕೆ ಅಪಾಯ ತಂದೊಡ್ಡುವ ಪ್ಯಾರಸಿಟಮಾಲ್ (Paracetamol) ಸೇರಿದಂತೆ 14 ಸ್ಥಿರ ಡೋಸ್ ಸಂಯೋಜನೆಯ (Fixed Dose Combination) (ಎಫ್ ಡಿಸಿ) ಔಷಧಗಳಿಗೆ
ಕೇಂದ್ರ ಸರ್ಕಾರ ಇತ್ತೀಚೆಗೆ ನಿರ್ಬಂಧ ವಿಧಿಸಿದೆ. ಕೇಂದ್ರ ಆರೋಗ್ಯ ಸಚಿವಾಲಯ ಈ ಔಷಧಿಗಳು ಯಾವುದೇ “‘ಚಿಕಿತ್ಸಕ ಸಮರ್ಥನೆ'” ಇಲ್ಲ ಮತ್ತು ಅವು ಜನರ ಆರೋಗ್ಯಕ್ಕೆ ಅಪಾಯಕಾರಿಯಾಗಲ್ಲವು ಎಂದು ಹೇಳಿದೆ.
ನಿಷೇಧಕ್ಕೆ ತಜ್ಞರ ಸಮಿತಿ ಶಿಫಾರಸು
ಸರ್ಕಾರಕ್ಕೆ ತಜ್ಞರ ಸಮಿತಿ ಈ ಸಂಬಂಧ ನೀಡಿರುವ ಶಿಫಾರಸುಗಳನ್ನು ಅನುಸರಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಸಿಡಿಎಸ್ ಸಿಒನಿಂದ (CDSCO) ಮುಂಚಿತವಾಗಿ ಒಪ್ಪಿಗೆಯನ್ನು ಪಡೆಯದೆ ದೊಡ್ಡ ಸಂಖ್ಯೆಯ
ಎಫ್ ಡಿಸಿಗಳ ( FDCs) ಉತ್ಪಾದನೆಗೆ ಕೆಲವು ರಾಜ್ಯ ಪರವಾನಗಿ ಪ್ರಾಧಿಕಾರಿಗಳು ಪರವಾನಗಿ ನೀಡಿವೆ ಎಂಬ ವಿಚಾರವನ್ನು ಪ್ರಸ್ತಾಪಿಸಿತ್ತು. ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಎಫ್ ಡಿಸಿ ಔಷಧಗಳು ಈ ರೀತಿ
ಎಫ್ ಡಿಸಿಗಳ ಉತ್ಪಾದನೆಗೆ ಪರವಾನಗಿ ನೀಡಿರುವ ಕಾರಣ ದೊರೆಯುತ್ತಿವೆ. ಈ ಔಷಧಗಳ ಸುರಕ್ಷತೆಯನ್ನು ಹಾಗೂ ಸಾಮರ್ಥ್ಯವನ್ನು ಯಾರೂ ಪರೀಕ್ಷಿಸದ ಕಾರಣ ರೋಗಿಗಳನ್ನು ಇವು ಅಪಾಯಕ್ಕೆ ತಳ್ಳುವ
ಸಾಧ್ಯತೆಯಿದೆ ಹೇಳಲಾಗಿದೆ ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯದ ಸಂಸತ್ ಸ್ಥಾಯಿ ಸಮಿತಿ ಸಿಡಿಎಸ್ ಸಿಒ (Central Drugs standard control organisation)
ಕಾರ್ಯನಿರ್ವಹಣೆ ಬಗ್ಗೆ ತನ್ನ 59ನೇ ವರದಿಯಲ್ಲಿ ಉಲ್ಲೇಖಿಸಿದೆ.
ಇದನ್ನೂ ಓದಿ : ಸಾಲ ಮರುಪಾವತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕಠಿಣ ಕ್ರಮ ಬೇಡ, ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್ಗಳಿಗೆ ಸೂಚನೆ : ನಿರ್ಮಲ ಸೀತಾರಾಮನ್
ನಿಷೇಧಿತ ಔಷಧಗಳ ಪಟ್ಟಿಯಲ್ಲಿ ಕ್ಲೋರ್ಫೆನಿರಮೈನ್ ಮಲೇಟ್(Chlorpheniramine Maleate) + ಕೊಡೈನ್ ಸಿರಪ್, ಕೆಮ್ಮು ಮತ್ತು ಜ್ವರದಂತಹ ಸಾಮಾನ್ಯ ಸೋಂಕುಗಳ ಚಿಕಿತ್ಸೆಗೆ ಬಳಸುವ
ನಿಮೆಸುಲೈಡ್ + ಪ್ಯಾರಸಿಟಮಾಲ್ ಡಿಸ್ಪರ್ಸಿಬಲ್ ಮಾತ್ರೆಗಳು, ಮತ್ತು ಫೋಲ್ಕೊಡೈನ್ + ಪ್ರೊಮೆಥಾಜಿನ್ (ಡ್ರೈ ಕಫ್ ಗೆ ಬಳಸುತ್ತಾರೆ )ಕೂಡ ಸೇರಿವೆ.

ಅಷ್ಟೇ ಅಲ್ಲದೆ ಅಮೋಕ್ಸಿಸಿಲಿನ್(ಆಂಟಿ ಬಯೋಟಿಕ್ ) + ಬ್ರೋಮ್ಹೆಕ್ಸಿನ್(Bromhexine) ಮತ್ತು ಬ್ರೋಮ್ಹೆಕ್ಸಿನ್ (ಕಫ್ ವನ್ನು ಕಮ್ಮಿ ಮಾಡಲು ಉಪಯೋಗಿಸುತ್ತಾರೆ ) ಮತ್ತು ಡೆಕ್ಸ್ಟ್ರೊಮೆಥೋರ್ಫಾನ್,
ಅಮೋನಿಯಮ್, ಪ್ಯಾರಾಸೆಟಾ + ಪ್ಯಾರಾಸೆಟಾ, ಕ್ಲೋರೈಡ್ ಫೆನೈಲ್ಫ್ರಿನ್ + ಕ್ಲೋರ್ಫೆನಿರಮೈನ್, ಗ್ವೈಫೆನೆಸಿನ್ ಮತ್ತು ಸಾಲ್ಬುಟಮಾಲ್ ಹಾಗೂ ಬ್ರೋಮ್ಹೆಕ್ಸಿನ್ ಮುಂತಾದ ಔಷಧ ಸಂಯೋಜನೆಗಳು ಸೇರಿವೆ.
ಎರಡು ಅಥವಾ ಅದಕ್ಕಿಂತ ಹೆಚ್ಚಿನ ಔಷಧಗಳ ನಿರ್ದಿಷ್ಟ ಡೋಸೇಜ್ ಸಂಯೋಜನೆಯನ್ನು ಸ್ಥಿರ ಡೋಸ್ ಸಂಯೋಜನೆ ಅಥವಾ ಎಫ್ ಡಿಸಿ ಎಂದು ಕರೆಯುತ್ತಾರೆ. ಇನ್ನು ಮೊದಲ ಬಾರಿಗೆ
ಈ ಡ್ರಗ್ಸ್ ಗಳನ್ನು ಸಂಯೋಜನೆಗೊಳಿಸಿದರೆ ಅದನ್ನು ಹೊಸ ಡ್ರಗ್ ಎಂದೇ ಪರಿಗಣಿಸಲಾಗುತ್ತದೆ.
ರಶ್ಮಿತಾ ಅನೀಶ್