31 ವರ್ಷದ ಮಾನಸಿಕ ವಿಕಲಾಂಗ(Mentally Diasabled) ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ(Gang Rape) ನಡೆಸಿದ ನಾಲ್ವರ ವಿರುದ್ಧ ತಮಿಳುನಾಡು ಪೊಲೀಸರು(Tamilnadu Police) ಪ್ರಕರಣ ದಾಖಲಿಸಿ, ಕೂಡಲೇ ಮೂವರನ್ನು ಬಂಧಿಸಿದ್ದಾರೆ ಮತ್ತು ಒರ್ವ ಆರೋಪಿ ತಲೆಮರೆಸಿಕೊಂಡಿರುವ ಬಗ್ಗೆ ಚುರುಕಾಗಿ ಶೋಧ ನಡೆಸಲಾಗುತ್ತಿದೆ ಎಂದು ಮಾಹಿತಿ ತಿಳಿಸಿದೆ.

ಮೇ 18ರ ಬುಧವಾರ ರಾತ್ರಿ ತಮಿಳುನಾಡಿನ, ಚೆಂಗಲ್‌ಪೇಟ್(Chengalpet) ಜಿಲ್ಲೆಯ ಹಳ್ಳಿಯೊಂದರಲ್ಲಿ ಈ ಅಪರಾಧ ನಡೆದಿದೆ. ಪೋಲೀಸರ ಪ್ರಕಾರ, ಅತ್ಯಾಚಾರಕ್ಕೆ ಒಳಗಾದ ಮಹಿಳೆ ತನ್ನ ಬಾಲ್ಯದಿಂದಲೂ ಬೌದ್ಧಿಕವಾಗಿ ವಿಕಲಾಂಗಳಾಗಿದ್ದಾಳೆ ಎನ್ನಲಾಗಿದೆ. ಆಕೆಯ ಪೋಷಕರು ಕೃಷಿಕರಾಗಿದ್ದು, ಆಕೆಯನ್ನು ಮನೆಯಲ್ಲಿ ಒಬ್ಬಂಟಿಯಾಗಿ ಬಿಟ್ಟು ಹೋಗುತ್ತಿದ್ದರು. ಮಹಿಳೆ ಇದ್ದ ಅದೇ ಗ್ರಾಮದ ನಾಲ್ವರು ಇದನ್ನು ಗಮನಿಸಿಕೊಂಡು ಮನೆಗೆ ನುಗ್ಗಿ ಅತ್ಯಾಚಾರವೆಸಗಿದ್ದಾರೆ.
ಕುಡಿದ ಅಮಲಿನಲ್ಲಿ ಆಕೆಯ ಮನೆಗೆ ನುಗ್ಗಿ ಆಕೆ ಕಿರುಚಾಡದಂತೆ ಬಿಗಿಯಾಗಿ ಬಾಯಿ ಮುಚ್ಚಿದ್ದಾರೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಒರ್ವ ಆರೋಪಿ ಆಕೆಯನ್ನು ಮನೆಯ ಟೆರೇಸ್‌ಗೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾರೆ. ಆದರೆ, ಸಂತ್ರಸ್ತೆಯ ಕೂಗು ಕೇಳಿದ ಸ್ಥಳೀಯ ಮಹಿಳೆಯೊಬ್ಬರು ಆಕೆಯನ್ನು ಹುಡುಕಿಕೊಂಡು ಬಂದಾಗ ಕಣ್ಣಿಗೆ ಬಿದ್ದ ಕಾಮುಕರ ಅಟ್ಟಹಾಸ ಕಂಡು ಜೋರಾಗಿ ಸ್ಥಳೀಯರನ್ನು ಕೂಗಿದ್ದಾರೆ.

ಸ್ಥಳೀಯರನ್ನು ಎಚ್ಚರಿಸಿದ ಕೂಡಲೇ ನಾಲ್ವರು ಆರೋಪಿಗಳು ಮನೆಯಿಂದ ಓಡಿ ಹೋಗಿದ್ದಾರೆ. ಸಂತ್ರಸ್ತೆಯ ನೆರೆಹೊರೆಯವರು ಆಕೆಗೆ ಸಹಾಯ ಮಾಡಲು ಧಾವಿಸಿದಾಗ ಆಕೆ ನರಳಾಡುತ್ತಿದದ್ದನ್ನು ಕಂಡು ಶೀಘ್ರವೇ ಹೆಚ್ಚಿನ ಚಿಕಿತ್ಸೆಗಾಗಿ ಚೆಂಗಲಪೇಟೆಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ಬಗ್ಗೆ ಪೊಲೀಸ್ ಅಧಿಕಾರಿ ಮಾತನಾಡಿ, ಆಕೆಯ ಸ್ಥಿತಿ ಕರುಣಾಜನಕವಾಗಿದೆ.
4 ಆರೋಪಿಗಳಾದ ಡಿ ರಾಮನಾಥನ್, 29 ವರ್ಷ, ಅಜಯ್, 22 ಮತ್ತು ಮದನ್, 20 ಎಂದು ಗುರುತಿಸಲಾಗಿದೆ. ಅವರನ್ನು ಬುಧವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನಾಲ್ಕನೇ ಆರೋಪಿ ಶಶಿಕುಮಾರ್ (23) ಗಾಗಿ ಶೋಧ ಮುಂದುವರಿದಿದೆ ಎಂದು ಹೇಳಿದ್ದಾರೆ.