ನಾಲ್ವರು ಕ್ರೀಡಾ ಪಟುಗಳು ಖೇಲ್ ರತ್ನ ಪ್ರಶಸ್ತಿಗೆ (Khel Ratna Award) ಭಾಜನರಾಗಿದ್ದಾರೆ. ಒಲಂಪಿಕ್ ಪದಕ ವಿಜೇತೆ (Olympic medalist) ಮಹಿಳಾ ಶೂಟರ್ ಮನು ಭಾಕರ್ (Manu Bhakar) ಮತ್ತು ವಿಶ್ವ ಚೆಸ್ ಚಾಂಪಿಯನ್ (World Chess Champion) ಡಿ ಗುಕೇಶ್ (D Gukesh) ಸೇರಿದಂತೆ ನಾಲ್ವರು ಕ್ರೀಡಾಪಟುಗಳಿಗೆ (Athletes) ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ (Major Dhyan Chand Khel Ratna Award) ಲಭಿಸಿದೆ.ಇನ್ನು ನಾಲ್ವರು ಕ್ರೀಡಾಪಟುಗಳಿಗೆ ಖೇಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ಕ್ರೀಡಾ ಸಚಿವಾಲಯ (Ministry of Sports) ತಿಳಿಸಿದೆ.

ಒಲಂಪಿಕ್ಸ್ (Olympics) ಡಬಲ್ ಪದಕ ವಿಜೇತೆ ಮನು ಭಾಕರ್ ,ವಿಶ್ವ ಚೆಸ್ ಚಾಂಪಿಯನ್ (World Chess Champion) ಡಿ ಗುಕೇಶ್ ,ಭಾರತದ ಪುರುಷರ ಹಾಕಿ ತಂಡದ ನಾಯಕ (Captain of the men’s hockey team) ಹರ್ಮನ್ಪ್ರೀತ್ ಸಿಂಗ್ (Harmanpreet Singh) ಮತ್ತು ಪ್ಯಾರಾಲಿಂಪಿಯನ್ ಪ್ರವೀಣ್ ಕುಮಾರ್ (Paralympian Praveen Kumar) ಕೂಡ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.2024 ಟೋಕಿಯೋ ಒಲಂಪಿಕ್ಸ್ ನಲ್ಲಿ (Tokyo Olympics) ಭಾರತಕ್ಕಾಗಿ ಎರಡು ಕಂಚಿನ ಪದಕವನ್ನು ಮಹಿಳಾ ಶೂಟರ್ (Female shooter) ಮನು ಭಾಕರ್ ಗೆದ್ದುಕೊಟ್ಟಿದ್ದರು.ಇನ್ನು 18 ವರ್ಷದ ಗುಕೇಶ್ ಅವರು ಕೂಡ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಜನವರಿ 17 ರಂದು ನವದೆಹಲಿಯ (New Delhi) ರಾಷ್ಟ್ರಪತಿ ಭವನದಲ್ಲಿ (Rashtrapati Bhavan) ನಡೆಯುವ ಸಮಾರಂಭದಲ್ಲಿ ಈ ನಾಲ್ವರು ಕ್ರೀಡಾಪಟುಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಅವರು ಖೇಲ್ ರತ್ನ ಪ್ರಶಸ್ತಿಯನ್ನು ನೀಡಲಿದ್ದಾರೆ.