ಪ್ಯಾರಿಸ್, ಜ. 15: ಕೋವಿಡ್ -19 ಸೋಂಕು ಹರಡುವುದನ್ನು ನಿಯಂತ್ರಿಸುವುದಕ್ಕಾಗಿ ಶನಿವಾರ ಸಂಜೆ 6 ಗಂಟೆಯಿಂದ 15 ದಿನಗಳ ಕಾಲ ಫ್ರಾನ್ಸ್ ದೇಶದಾದ್ಯಂತ ಕರ್ಫ್ಯೂ ವಿಸ್ತರಿಸಿರುವುದಾಗಿ ಫ್ರಾನ್ಸ್ ಪ್ರಧಾನ ಮಂತ್ರಿ ಜೀನ್ ಕ್ಯಾಸ್ಟೆಕ್ಸ್ ಪ್ರಕಟಿಸಿದ್ದಾರೆ.
ಐರೋಪ್ಯ ಒಕ್ಕೂಟ ಮುಂತಾದ ಬೇರೆ ಬೇರೆ ದೇಶಗಳಿಂದ ಫ್ರಾನ್ಸ್ಗೆ ಬರುವವರಿಗೆ ರೂಪಿಸಿರುವ ಹೊಸದಾದ ನಿಯಮಗಳನ್ನು ಪ್ರಧಾನಿ ಪ್ರಕಟಿಸಿದರು. ಸೋಮವಾರದಿಂದ, ದೇಶದೊಳಗೆ ಆಗಮಿಸುವ ಪ್ರಯಾಣಿಕರು ಕಡ್ಡಾಯವಾಗಿ ಪಿಸಿಆರ್ ಪರೀಕ್ಷೆ ಮಾಡಿಸಿ ನೆಗೆಟಿವ್ ವರದಿ ಹೊಂದಿರಬೇಕು. ನೆಗೆಟಿವ್ ವರದಿ ಇದ್ದರೂ, ಸ್ವಯಂ ಪ್ರೇರಿತವಾಗಿ ಏಳು ದಿನಗಳಕಾಲ ಕ್ವಾರಂಟೈನ್ಗೆ ಒಳಪಡಬೇಕು ಎಂಬ ನಿಯಮಗಳನ್ನು ಹೊಸದಾಗಿ ಸೇರಿಸಲಾಗಿದೆ.