ಬಳ್ಳಾರಿ ನ 11: ಇಲ್ಲಿನ ಸಬ್ ರಿಜಿಸ್ಟ್ರಾರ್ ಒಬ್ಬ ತನ್ನ ವೇಷ ಮರೆಸಿಕೊಂಡು ಎರಡು ಮದುವೆಯಾಗಿ ವಂಚಿಸಿದ್ದು ಪೊಲೀಸ್ ದೂರು ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದಾನೆ.
ಬಳ್ಳಾರಿಯಲ್ಲಿ ಸಬ್ ರಿಜಿಸ್ಟ್ರಾರ್ ಆಗಿರುವ ಉಮೇಶ್ ಎರಡು ಮದುವೆಯಾಗಿ ಮೋಸದಾಟ ನಡೆಸಿದ್ದಾನೆ. ಮೊದಲ ಮದುವೆಯನ್ನು ಮುಚ್ಚಿಟ್ಟು ಬೆಂಗಳೂರಿನ ನಜ್ಮೀರ್ ಖಾನ್ ಎಂಬ ಮಹಿಳೆಯನ್ನು ಎರಡನೇ ಮದುವೆಯಾಗಿದ್ದ. ಇದೀಗ ಹಳೆ ವಿಚಾರ ತಿಳಿದ ನಜ್ಮೀರ್ ಪೊಲೀಸ್ ದೂರು ನೀಡಿದ್ದಾಳೆ.
ದೆಹಲಿ ಮೂಲದ ನಜೀನ್ ಬೆಂಗಳೂರಲ್ಲಿ ಉಮೇಶನಿಗೆ ಪರಿಚಯವಾಗಿದ್ದಳು. ನಜ್ಮೀರ್ ಗಾಗಿ ಉಮೇಶ್, ತನ್ನ ಹೆಸರನ್ನು ರೆಹಾನ್ ಅಹಮ್ಮದ್ ಎಂದು ಹೆಸರು ಬದಲಾಯಿಸಿಕೊಂಡಿದ್ದ. ಸದ್ಯ ಉಮೇಶ್ ವಿರುದ್ಧ ನಜ್ಮೀರ್ ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ದು, ಬಳ್ಳಾರಿ ಪೊಲೀಸರಿಗೆ ದೂರು ನೀಡಿದ್ದಾಳೆ.
ಅವರು ಈಗ ಎಲ್ಲಿದ್ದಾರೆ ಅಂತಾ ಗೊತ್ತಿಲ್ಲ. ನಿನ್ನ ರಿಜಿಸ್ಟ್ರಾರ್ ಕಚೇರಿಯಲ್ಲಿ ಹೋಗಿ ನೋಡಿದ್ರೂ ಅವರು ಸಿಗಲಿಲ್ಲ. ಸದ್ಯನಾನು ಬಳ್ಳಾರಿ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಎಂದು ನಜ್ಮೀರ್ ಹೇಳಿದ್ದಾರೆ.
ಉಮೇಶನ ಮೊಬೈಲಲ್ಲಿದ್ದ ಮೊದಲ ಪತ್ನಿ ಹಾಗೂ ಅವಳ ಮಕ್ಕಳ ಫೋಟೋಗಳನ್ನು ನೋಡಿದಾಗ ನಜ್ಮೀರ್ ಗೆ ಅನುಮಾನ ಬಂದಿದ್ದು, ಬಳ್ಳಾರಿಗೆ ಬಂದು ವಿಚಾರಿಸಿದಾಗ ಉಮೇಶನ ರಂಗಿನಾಟ ಗೊತ್ತಾಗಿದೆ. ಇನ್ನು ಉಮೇಶ್ ಕೂಡ ನಜ್ಮೀರ್ ವಿರುದ್ಧ ತನಗೆ ಬ್ಲ್ಯಾಕ್‌ಮೇಲ್ ಮಾಡ್ತಿರೋದಾಗಿ ಆರೋಪಿಸಿ ದೂರು ನೀಡಿದ್ದಾರೆ.
ಉಮೇಶ್ ವಿರುದ್ಧ ನಜ್ಮೀರ್ ದೂರು ದಾಖಲಿಸುತ್ತಿದ್ದಂತೆ ಆತ ಬಳ್ಳಾರಿಯಿಂದ ಎಸ್ಟೇಪ್ ಆಗಿದ್ದಾನೆ. ನಜ್ಮೀರ್ ಉಮೇಶನ ವಿರುದ್ಧ ದೂರು ನೀಡಿದ್ರೆ, ಉಮೇಶ, ನಜೀನ್ ವಿರುದ್ಧವೇ ಪ್ರತಿ ದೂರು ನೀಡಿದ್ದಾನೆ. ಪ್ರಕರಣ ಸದ್ಯ ಗೊಂದಲದಲ್ಲದ್ದು, ಪೊಲೀಸರ ತನಿಖೆಯಿಂದಲೇ ಸತ್ಯ ಹೊರಬರಬೇಕಿದೆ.