Bangalore : ಪಾರ್ಟ್ ಟೈಂ ಕೆಲಸದ ಹೆಸರಿನಲ್ಲಿ ಯುವಕ ಯುವತಿಯರನ್ನ ವಂಚಿಸಿದ ಪ್ರಕರಣದ ಹಿನ್ನೆಲೆಯಲ್ಲಿ ಫ್ರೀಡಂ ಆಪ್ (Freedom App), ಇಂಡಿಯನ್ ಮನಿ ಆಪ್ ಮಾಲೀಕ ಸಿ ಎಸ್ ಸುಧೀರ್ನನ್ನು (CS Sudheer) ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಸುಧೀರ್ ಹಾಗೂ ಆತನ ಸಂಸ್ಥೆ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ (Freedom App CEO Judicial Arrest) ದಾಖಲಾಗಿದ್ದು, ತನಿಖೆ ನಡೆಸಲು ವಿಚಾರಣೆಗೆ ತೆಗೆದುಕೊಂಡಿದ್ದಾರೆ.

ಸುಧೀರ್ ಮತ್ತು ಆತನ ತಂಡ ಹಣಕಾಸು ವಿಷಯದಲ್ಲಿ ಸಲಹೆ ನೀಡುವ ಉದ್ದೇಶ ಇಟ್ಟುಕೊಂಡಿದ್ದು, ಹಲವು ಸಾಧಕರ ಹೆಸರು ಬಳಸಿಕೊಂಡು
ಹಾಗೂ ಅವರಿಂದ ತರಬೇತಿ ಕೊಡಿಸುವ ನೆಪದಲ್ಲಿ ಫ್ರೀಡಂ ಆಪ್ ಹಾಗೂ ಇಂಡಿಯನ್ ಮನಿ ಅನ್ನೋ ಸಂಸ್ಥೆಯನ್ನು ಹುಟ್ಟು ಹಾಕಿ ಲಕ್ಷಾಂತರ ಜನರಿಂದ Subscription ಹಣ ಪಡೆದು ವಂಚಿಸಿದ್ದ.
ಅಲ್ಲದೆ ತಮ್ಮ ಸಂಸ್ಥೆಯಲ್ಲಿ ಕೆಲಸ ಕೊಡುವುದಾಗಿ ಹೇಳಿ ನಿರುದ್ಯೋಗಿ ಯುವಕ ಯುವತಿಯರನ್ನು ನೇಮಕ ಮಾಡಿ ಅವರಿಂದ ಜನರಿಗೆ ವಂಚನೆ ಮಾಡುವ
ಕೆಲಸ ಮಾಡಿಸುತ್ತಿದ್ದುದ್ದಲ್ಲದೆ ಅವರಿಗೂ ಲಕ್ಷಾಂತರ ರೂಪಾಯಿ ಮೋಸ ಮಾಡಿದ್ದಾನೆ.
ನಿರುದ್ಯೋಗಿ ಯುವಕರ ಕೆಲಸದ ಅನಿವಾರ್ಯತೆಯನ್ನು ಬಂಡವಾಳ ಮಾಡಿಕೊಂಡು ವರ್ಕ್ ಫ್ರಂ ಹೋಮ್ (Work from home)
ಕಾನ್ಸೆಪ್ಟ್ ಕೊಟ್ಟು ಅವರಿಗೂ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾನೆ ಎಂದು ಮೋಸ ಹೋದ ಯುವತಿಯರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.
ಇದನ್ನೂ ಓದಿ : https://vijayatimes.com/sweating-profusely-in-summer/
ಈತ ಕಳೆದ ಕೆಲವು ವರ್ಷಗಳಿಂದ ಇಂಥಾ ವಂಚನೆ ಮಾಡೋ ಕಂಪೆನಿಗಳನ್ನು, ಆಪ್ಗಳನ್ನು ಹುಟ್ಟು ಹಾಕಿ ಜನರಿಗೆ ಮೋಸ ಮಾಡುತ್ತಲೇ ಬಂದಿದ್ದಾನೆ.
ಅಷ್ಟೇ ಅಲ್ಲದೆ ಈತ ಒಂದು ಕಂಪೆನಿಯ ಬಗ್ಗೆ ಜನರಿಗೆ ಗೊತ್ತಾದ ತಕ್ಷಣ ಅದನ್ನು ಮುಚ್ಚುತ್ತಿದ್ದ. ಅಲ್ಲದೆ ತನ್ನ ವಿರುದ್ಧ ದೂರು ದಾಖಲಾಗದಂತೆ (Freedom App CEO Judicial Arrest) ಪೊಲೀಸ್ ಅಧಿಕಾರಿಗಳನ್ನೂ ಫಿಕ್ಸ್ ಮಾಡುತ್ತಿದ್ದ.
ಈ ರೀತಿ ಅನೇಕ ಕಂಪೆನಿಗಳನ್ನು ತೆರೆದು ಜನರಿಗೆ ಮೋಸ ಮಾಡುತ್ತಿದ್ದ. ಅಲ್ಲದೆ ಸುದ್ದಿ ಮಾಧ್ಯಮಗಳಲ್ಲಿ ಜಾಹಿರಾತು ನೀಡಿ ಜನರ ದಾರಿ ತಪ್ಪಿಸುತ್ತಿದ್ದ ಅಲ್ಲದೆ,
ತನ್ನ ವಿರುದ್ಧ ಯಾವುದೇ ಸುದ್ದಿ ಮಾಡದಂತೆ ನೋಡಿಕೊಳ್ಳುತ್ತಿದ್ದ.
ಆದ್ರೆ ಕಳೆದ ಮೂರು ನಾಲ್ಕು ತಿಂಗಳ ಹಿಂದೆ ಕಂಪನಿಯ ಆಮಿಷಕ್ಕೆ ಒಳಗಾಗಿ ಕೆಲಸ ಮಾಡಿ ವಂಚನೆಗಿಡಾದ್ದ ಯುವಕ ಯುವತಿಯರು ಬನಶಂಕರಿ ಪೊಲೀಸ್ ಠಾಣೆಯಲ್ಲಿ ಏಪ್ರಿಲ್ 04 ರಂದು ದೂರು ಸಲ್ಲಿಸಿದ್ದರು.

ಬಂಧನ ಸಾಧ್ಯತೆ ಇರುವ ಕಾರಣಕ್ಕೆ ಸುಧೀರ್ ಹಾಗೂ ಇತರರು ನ್ಯಾಯಾಲಯದ ಮೊರೆ ಹೋಗಿ ನಿರೀಕ್ಷಣ ಜಾಮೀನು ಪಡೆದಿದ್ದರು.
ಆದರೆ ಇದರ ನಡುವೆ ಅಲ್ಲಿನ ಕೆಲ ಉದ್ಯೋಗಿಗಳು ಪ್ರತ್ಯೇಕ ದೂರು ನೀಡಿದ್ದರು. ಇದರ ಅನ್ವಯ ಹೊಸದಾಗಿ ಐದು ಎಫಐಅರ್ (AFIR) ದಾಖಲಾಗಿವೆ.
ಈ ಪ್ರಕರಣದಲ್ಲಿ ಸುಧೀರ್ ಹಾಗೂ ರಘು ಬಂಧನವಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.
ಪ್ರಕರಣದಲ್ಲಿ 6 ಎಫಐಆರ್ ದಾಖಲಾಗಿದ್ದು, ಕೋಟ್ಯಂತರ ರೂಪಾಯಿ ವಂಚನೆ ಆಗಿರುವ ಅನುಮಾನವಿದೆ. ತನಿಖೆಯ ಹೊಣೆಯನ್ನು ಸಿಸಿಬಿಗೆ (CCB) ವಹಿಸಲು ಚಿಂತನೆ ನಡೆದಿದೆ ಎಂದು ಪೊಲೀಸ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನೂ ಕೃಷಿಯಲ್ಲಿ ಸಾಧನೆ ಮಾಡಿದ ರೈತರು ಹಾಗೂ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಧಿಕಾರಿಗಳ ಹೆಸರು ಬಳಸಿಕೊಂಡು ಕಂಪನಿ ದುರ್ಬಳಿಕೆ ಮಾಡಿಕೊಂಡಿರುವುದು ಕಂಡು ಬಂದಿದ್ದು,
ಇದನ್ನೂ ಓದಿ : https://vijayatimes.com/ipl2023-rcb-vs-dc/
ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ರೀತಿಯಲ್ಲಿ (IPS officer Ravi D. Channannavar) ನೀವೂ ಐಪಿಎಸ್ ಅಧಿಕಾರಿ ಆಗಬಹುದೆಂದು ಹೇಳಿ ತರಬೇತಿ
ನೆಪದಲ್ಲಿ ಹಣ ಪಡೆದು ವಂಚಿಸಿರುವ ಮಾಹಿತಿ ಬಗ್ಗೆ ರವಿ ಚನ್ನನವರ್ ಹತ್ತಿರ ಪಡೆಯಲಾಗುವುದು ಎಂದು ತಿಳಿಸಿದ್ದಾರೆ.
ಕೃಷಿಯಲ್ಲಿ ತಿಂಗಳಿಗೆ ಲಕ್ಷ ಲಕ್ಷ ಗಳಿಸೋದು ಹೇಗೆ? ಕೆಲಸ ಪ್ರಂಭಿಸುವುದು ಹೇಗೆ? ಮನೆಯಲ್ಲೇ ಕುಳಿತು ದುಡಿಯುವುದು ಹೇಗೆ?
ಎಂದು ಚಂದಾದಾರಿಕೆ ಹೆಸರಿನಲ್ಲಿ ಹಣ ಪಡೆದು ಕಂಪನಿ ಯಾವುದೇ ರೀತಿ ನೀಡದೆ ವಂಚಿಸಿರುವ ಬಗ್ಗೆ ಉದ್ಯೋಗಿಗಳು ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಈ ಪ್ರಕರಣ ಕುರಿತು ಉದ್ಯೋಗಿಗಳಷ್ಟೇ ದೂರು ನೀಡಿದ್ದಾರೆ. ಸಾಮಾಜಿಕ ಮಾಧ್ಯಮ (Social media)
ಹಾಗೂ ಇತರೆಡೆ ಜಾಹೀರಾತು ನೀಡಿ ಜನರನ್ನು ಸೆಳೆಯಲು ನಾನಾ ಆಮಿಷವೊಡ್ಡಿ ಜನರಿಂದ ಹಣತುಂಬಿಸಿ ಕೊಳಲಾಗುತ್ತಿದ್ದು, ಯಾರಾದರೂ ಜನರು ದೂರು ನೀಡಿದರೆ ಪ್ರತ್ಯೇಕ ಪ್ರಕರಣ ದಾಖಲಿಕೊಳ್ಳಬಹುದು ಎಂದು ತಿಳಿಸಿದ್ದಾರೆ.