ಮಂಗಳೂರು ಆ 18 : ಕೊರೊನಾ ಹಿನ್ನಲೆಯಲ್ಲಿ ಮಂಗಳೂರು – ದುಬೈ ನಡುವಿನ ಹಾರಟ ಕಳೆದ ಒಂದು ವರ್ಷಗಳಿಂದ ಸ್ಥಗಿತಗೊಂಡಿತ್ತು. ಈ ಹಿನ್ನಲೆಯಲ್ಲಿ ಸಾಕಷ್ಟು ಮಂದಿಗೆ ತೊಂದರೆ ಕೂಡ ಉಂಟಾಗಿತ್ತು. ಇದೀಗ ವಿಮಾನ ಹಾರಟ ಪುನರಾರಂಭ ಗೊಂಡಿದ್ದು ಸಾರ್ವಜನಿಕರಲ್ಲಿ ಸಂತಸಮೂಡಿದೆ.
ಕೊರೊನಾ ಲಾಕ್ ಡೌನ್ ಬಳಿಕ ಕೊನೆಗೂ ಮಂಗಳೂರಿನಿಂದ ನೇರವಾಗಿ ದುಬೈಗೆ ವಿಮಾನ ಹಾರಟ ಆರಂಭಗೊಂಡಿದೆ. ಏರ್ ಇಂಡಿಯಾ ಎಕ್ಸ್ ಪ್ರೆಸ್ ತನ್ನ ಸಂಚಾರವನ್ನು ಆ 20ರಿಂದ ಕಾರ್ಯಾರಂಭ ಮಾಡಲಿದ್ದು ಈ ವಿಮಾನ ಮಂಗಳೂರಿನಿಂದ ಹೊರಟು ತಿರುವಂತಪುರಂ ಮುಖೇನ ವಿಮಾನವು ದುಬೈಗೆ ತೆರಳಲಿದೆ. ಇಗಾಗಲೇ ಟಿಕಟ್ ಬುಕ್ಕಿಂಗ್ ಆರಂಭಗೊಂಡಿರುವುದಾಗಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ತನ್ನ ಅಧೀಕೃತ ಟ್ಟಿಟ್ಟರ್ ನಲ್ಲಿ ಪ್ರಕಟಗೊಳಿಸಿದೆ.
ಕೊರೊನಾ ಹಿನ್ನಲೆಯಲ್ಲಿ ಯುಎಇ ಭಾರತೀಯರಿಗೆ ವಿಮಾನ ನಿಲ್ದಾಣದಿಂದ ಹೊರಡುವುದಕ್ಕಿಂತ 7 ಗಂಟೆಯ ಮುಂಚಿನ ರ್ಯಾಪಿಡ್ ಆರ್ ಟಿ ಪಿ ಸಿ ಆರ್ ವರದಿಯನ್ನು ಕಡ್ಡಾಯಗೊಳಿಸಿತ್ತು. ಮಂಗಳೂರು ವಿಮಾನ ನಿಲ್ದಾಣದಲ್ಲಿ ಯಾರ್ಪಿಡ್ ಆರ್ ಟಿ ಸಿ ಪಿ ಆರ್ ಈ ಸೌಲಭ್ಯಗಳು ಇಲ್ಲದ ಕಾರಣ ವಿಮಾನ ಹಾರಟ ಸ್ಥಗಿತಗೊಂಡಿತ್ತು.ಇದೀಗ ವಿಮಾನ ನಿಲ್ದಾಣದಲ್ಲಿ ಆರ್ ಟಿ ಸಿ ಪಿ ಆರ್ ಈ ಸೌಲಭ್ಯಗಳನ್ನು ಒದಗಿಸಲಾಗಿದೆ.