New Delhi (ಜುಲೈ 20, 2023): ಭಾರೀ ಕೋಲಾಹಲದ ನಿರೀಕ್ಷೆಯಲ್ಲಿರುವ ಸಂಸತ್ತಿನ ಮುಂಗಾರು ಅಧಿವೇಶನ (From today Monsoon session) ಇಂದಿನಿಂದ ( ಗುರುವಾರ) ಆರಂಭವಾಗಲಿದೆ.
ಅಧಿವೇಶನವು ಜುಲೈ 20 ರಿಂದ ಆಗಸ್ಟ್ 11 ರವರೆಗೆ ನಡೆಯಲಿದೆ. ಒಟ್ಟು 23 ದಿನಗಳು, ನಡೆಯಲಿರುವ ಈ ಅಧಿವೇಶನದಲ್ಲಿ 17 ದಿನಗಳು ಕಲಾಪಕ್ಕೆ ಲಭ್ಯವಿರಲಿದೆ. ಮುಂಬರುವ ವಿವಾದಾತ್ಮಕ ದೆಹಲಿ
(Delhi) ಸುಗ್ರೀವಾಜ್ಞೆ ಸೇರಿ 21 ಮಸೂದೆಗಳು ಮತ್ತು ಈಗಾಗಲೇ ಅನುಮೋದನೆಗೆ ಕಾಯುತ್ತಿರುವ 12 ಮಸೂದೆಗಳು ಸೇರಿದಂತೆ ಮೂವತ್ತೆರಡು ಮಸೂದೆಗಳನ್ನು
ಈ ಅಧಿವೇಶನದಲ್ಲಿ ಚರ್ಚಿಸಲಾಗುವುದು ಎಂದು (From today Monsoon session) ನಿರೀಕ್ಷಿಸಲಾಗಿದೆ.

ಈ ನಡುವೆ ಮಣಿಪುರದಲ್ಲಿ (Manipur) ಹಿಂಸಾಚಾರ ವಿಷಯವು ಬಿರುಗಾಳಿ ಎಬ್ಬಿಸುವ ಸಾಧ್ಯತೆಯಿದೆ, ಈ ವಿಷಯದ ಬಗ್ಗೆ ಚರ್ಚಿಸಲು ಸಿದ್ಧ ಎಂದು ಸರ್ಕಾರ ಸರ್ವಪಕ್ಷ ಸಭೆಯಲ್ಲಿ ಒಪ್ಪಿಕೊಂಡಿದೆ.
ಇದೇ ವೇಳೆ ಟೊಮೇಟೊ(Tomato) ಸೇರಿದಂತೆ ವಿವಿಧ ಅಗತ್ಯ ವಸ್ತುಗಳ ಬೆಲೆಯೂ ಏರಿಕೆ ವಿಷಯ ಕೂಡ ಚರ್ಚೆಗೆ ಕಾರಣವಾಗಲಿದೆ.
ಮಹತ್ವದ ಮಸೂದೆ:
ಮುಂಗಾರು ಅಧಿವೇಶನದಲ್ಲಿ ದೆಹಲಿ ಸುಗ್ರೀವಾಜ್ಞೆಗೆ ಪರ್ಯಾಯವಾಗಿ ಮಸೂದೆ, ಡಿಜಿಟಲ್ (Digital) ವೈಯಕ್ತಿಕ ಮಾಹಿತಿ ರಕ್ಷಣಾ ಮಸೂದೆ, ಬಹುರಾಜ್ಯ ಸಹಕಾರ ಸಂಘಗಳ ಮಸೂದೆ,
ರಾಷ್ಟ್ರೀಯ ದಂತವೈದ್ಯ ಆಯೋಗ ಮಸೂದೆ, ಜೈವಿಕ ವೈವಿಧ್ಯತಾ ಮಸೂದೆ, ರಾಷ್ಟ್ರೀಯ ದಾದಿಯರ ಮಸೂದೆ, ಅರಣ್ಯ ಸಂರಕ್ಷಣಾ ತಿದ್ದುಪಡಿ ಮಸೂದೆ, ಜನ ವಿಶ್ವಾಸ್ ಮಸೂದೆ, ಮಧ್ಯಸ್ಥಿಕೆ ಮಸೂದೆ,
ಸಿನಿಮಟೋಗ್ರಾಫಿ (Cinematography) ತಿದ್ದುಪಡಿ ಮಸೂದೆ ಮೊದಲಾದವುಗಳನ್ನು ಮುಂಡಿಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ.

ವಿಪಕ್ಷ ಪಕ್ಷಗಳು ಮುಗಿಬೀಳಲು ಸಿದ್ದವಾಗಿವೆ
ದೆಹಲಿಯಲ್ಲಿ ಸೇವಾ ಅಧಿಕಾರ ಕಾಪಾಡಲು ಕೇಂದ್ರ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆ, ಮಣಿಪುರ ಹಿಂಸಾಚಾರ, ವಿವಿಧ ರಾಜ್ಯಗಳಲ್ಲಿ ವಿಪಕ್ಷ ನಾಯಕರ ಮೇಲೆ ಕೇಂದ್ರ ತನಿಖಾ ಸಂಸ್ಥೆ ದಾಳಿ,
ಟೊಮೇಟೊ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ವಿವಿಧ ವಿಷಯಗಳ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಪ್ರತಿಪಕ್ಷಗಳು ಸಿದ್ಧತೆ ನಡೆಸಿವೆ. ಮತ್ತೊಂದೆಡೆ,
ಭಾರತೀಯ ಜನತಾ ಪಕ್ಷದ (BJP) ನೇತೃತ್ವದ ಎನ್‌ಡಿಎ (NDA) ಸರ್ಕಾರವು ಪುನರಾಗಮನಕ್ಕೆ ತಯಾರಿ ನಡೆಸುತ್ತಿದೆ. ಆದ್ದರಿಂದ ಮಾನ್ಸೂನ್ ಸಭೆಯು “NDA” ಒಕ್ಕೂಟ ಮತ್ತು ಹೊಸದಾಗಿ
ರಚನೆಯಾದ “I.N.D.I.A” ಒಕ್ಕೂಟದ ನಡುವಿನ ಮೊದಲ ಸದನದ ಕದನಕ್ಕೆ ವೇದಿಕೆಯಾಗುವ ಸಾಧ್ಯತೆಯಿದೆ.
ಕೇಂದ್ರ ಸರ್ಕಾರದಿಂದ 70 ರೂ. ಗೆ ಟೊಮ್ಯಾಟೋ ಮಾರಾಟ : ದರ ಇಳಿಕೆಗೆ ಕಸರತ್ತು
ಸರ್ವಪಕ್ಷ ಸಭೆ:
ಮುಂಬರುವ ಸಭೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಬುಧವಾರ ಸರ್ವಪಕ್ಷಗಳ ಸಭೆಯನ್ನು ಆಯೋಜಿಸಿದೆ. ಮಣಿಪುರ ರಾಜ್ಯದಲ್ಲಿ 100 ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡ
ಇತ್ತೀಚಿನ ಕೋಮು ಹಿಂಸಾಚಾರದ ಬಗ್ಗೆ ಅನೇಕ ವಿರೋಧ ಪಕ್ಷಗಳು ತೀವ್ರ ಕಳವಳ ವ್ಯಕ್ತಪಡಿಸಿದವು ಮತ್ತು ಚರ್ಚೆಯನ್ನು ವಿಸ್ತರಿಸಲು ಒತ್ತಾಯಿಸಿದವು. ಸರಕಾರವೂ ಸ್ಪಂದಿಸಿದ್ದು, ಸಂಸದೀಯ
ವ್ಯವಹಾರಗಳ ಸಚಿವ ಪ್ರಲ್ಲಾದ ಜೋಶಿ(Prahlad Joshi) ಚರ್ಚೆಗೆ ಸಮಯಾವಕಾಶ ನೀಡುವ ಭರವಸೆ ನೀಡಿದ್ದಾರೆ.
ಇಂದು “ಇಂಡಿಯಾ” ಮೈತ್ರಿಕೂಟದ ಮೊದಲ ಸಭೆ
ಮಂಗಳವಾರ ಬೆಂಗಳೂರಿನಲ್ಲಿ(Bengaluru) ನಡೆದ ಸಭೆಯಲ್ಲಿ, 26 ವಿರೋಧ ಪಕ್ಷಗಳು I.N.D.I.A (ಇಂಡಿಯಾ ನ್ಯಾಷನಲ್ ಡೆವಲಪ್‌ಮೆಂಟಲ್ ಇನ್‌ಕ್ಲೂಸಿವ್ ಅಲಯನ್ಸ್) ಎಂಬ ಒಕ್ಕೂಟವನ್ನು
ರಚಿಸಿದವು ಮತ್ತು ಗುರುವಾರ ದೆಹಲಿಯಲ್ಲಿ ತನ್ನ ಮೊದಲ ಸಭೆ ನಡೆಸಲಿವೆ.
ರಶ್ಮಿತಾ ಅನೀಶ್