ಸಕ್ಕರೆ ಖಾಯಿಲೆ(Diabities) ಅಥವಾ ಡಯಾಬಿಟಿಸ್ ಈಗ ಸಾಮಾನ್ಯ ರೋಗವಾಗಿದೆ. ಆದರೆ ಈ ರೋಗದ ಬಗ್ಗೆ ಮುಂಜಾಗ್ರತೆ ವಹಿಸುವುದು ಕೂಡಾ ಅಷ್ಟೇ ಮುಖ್ಯವಾಗಿದೆ. ಸಕ್ಕರೆ ಕಾಯಿಲೆಯನ್ನು ನಿಯಂತ್ರಣ ಮಾಡದಿದ್ದರೆ, ದೇಹದ ಪ್ರಮುಖ ಅಂಗಗಳನ್ನು ಅದು ಹಾನಿಗೊಳಿಸುತ್ತದೆ. ಸಕ್ಕರೆ ಖಾಯಿಲೆ ನಿಯಂತ್ರಿಸಲು ಮುಖ್ಯವಾಗಿ ಆಹಾರದಲ್ಲಿ ಏನನ್ನು ಸೇವಿಸಬೇಕು ಮತ್ತು ಏನನ್ನು ಸೇವಿಸಬಾರದು ಎಂಬ ಮಾಹಿತಿ ಇರಬೇಕು. ತಜ್ಞರ ಪ್ರಕಾರ, ಸಕ್ಕರೆ ಕಾಯಿಲೆ ಇರುವವರು ಈ 5 ವಿಧದ ಹಣ್ಣುಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಅಂತಹ ಹಣ್ಣುಗಳ ವಿವರ ಇಲ್ಲಿದೆ ನೋಡಿ.

• ಕಿತ್ತಳೆ(Orange) : ಇದು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ. ಕಿತ್ತಳೆಯಲ್ಲಿ ವಿಟಮಿನ್ ಸಿ, ಫ್ಲೇವನಾಯ್ಡ್ ಉತ್ಕರ್ಷಣ ನಿರೋಧಕಗಳು ಮತ್ತು ಫೈಬರ್(Fiber) ಸಮೃದ್ಧವಾಗಿದೆ. ಇದು ದೇಹದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ.
• ಹಸಿರು ಸೇಬು(Green Apple) : ಹಸಿರು ಸೇಬನ್ನು ಮಧುಮೇಹ ರೋಗಿಗಳಿಗೆ ಸೂಪರ್ ಫುಡ್ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಸಕ್ಕರೆಯ ಪ್ರಮಾಣ ಕೆಂಪು ಸೇಬಿಗಿಂತ ಕಡಿಮೆ ಇರುತ್ತದೆ. ಈ ಹಣ್ಣಿನಲ್ಲಿ ಫೈಬರ್, ನಿಯಾಸಿನ್, ಸತು, ಕಬ್ಬಿಣ ಸಮೃದ್ಧವಾಗಿವೆ. ಇವು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
• ಬ್ಲ್ಯಾಕ್ ಪ್ಲಮ್(Black Plum) : ಇದು ವಿಟಮಿನ್ ಬಿ, ವಿಟಮಿನ್ ಎ ಮತ್ತು ವಿಟಮಿನ್ ಸಿ’ಯಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಇದು ರಕ್ತದ ಸಕ್ಕರೆಯ ಪ್ರಮಾಣ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
• ಪಿಯರ್ ಹಣ್ಣು(Pear Fruit) : ಇದರಲ್ಲಿ ವಿಟಮಿನ್ ಬಿ1, ವಿಟಮಿನ್ ಬಿ2, ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ, ವಿಟಮಿನ್ ಬಿ9, ಮತ್ತು ವಿಟಮಿನ್ ಬಿ3 ಸಮೃದ್ಧವಾಗಿದೆ. ಇವು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸಲು ಅನುಮತಿಸುವುದಿಲ್ಲ.

• ಪೇರಳೆ ಹಣ್ಣು(Guava Fruit) : ಪೇರಳೆಯಲ್ಲಿ ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಇದು ಆಂಟಿ-ಆಕ್ಸಿಡೆಂಟ್ಗಳು ಮತ್ತು ಕ್ಯಾರೊಟಿನಾಯ್ಡ್ಗಳನ್ನು ಹೊಂದಿರುತ್ತದೆ. ಜೊತೆಗೆ ಪೇರಳೆಯಲ್ಲಿ ಸೋಡಿಯಂ ಕಡಿಮೆ ಮತ್ತು ಪೊಟ್ಯಾಸಿಯಮ್ ಅಧಿಕವಾಗಿರುತ್ತದೆ. ಮಧುಮೇಹಿಗಳಿಗೆ ಇದು ಮುಖ್ಯವಾಗಿದೆ.