• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Vijaya Time

ಅಮೂಲ್, ಮದರ್ ಡೈರಿ, ಕಂಟ್ರಿ ಡಿಲೈಟ್ ಹಾಲು ಲ್ಯಾಬ್ ಪರೀಕ್ಷೆಯಲ್ಲಿ ವಿಫಲ: FSSAI ಮಿತಿಗಿಂತ ಅಧಿಕ ಹಾನಿಕಾರಕ ಬ್ಯಾಕ್ಟೀರಿಯಾ ಪತ್ತೆ

Teju Srinivas by Teju Srinivas
in Vijaya Time
ಅಮೂಲ್, ಮದರ್ ಡೈರಿ, ಕಂಟ್ರಿ ಡಿಲೈಟ್ ಹಾಲು ಲ್ಯಾಬ್ ಪರೀಕ್ಷೆಯಲ್ಲಿ ವಿಫಲ: FSSAI ಮಿತಿಗಿಂತ ಅಧಿಕ ಹಾನಿಕಾರಕ ಬ್ಯಾಕ್ಟೀರಿಯಾ ಪತ್ತೆ
0
SHARES
57
VIEWS
Share on FacebookShare on Twitter
  • ನಾವು ಕುಡಿಯುವ ಹಾಲು ಸುರಕ್ಷಿತವಲ್ಲ: ದೇಶದ ಟಾಪ್ ಹಾಲು (FSSAI milk test report) ಬ್ರ್ಯಾಂಡ್‌ಗಳ ವರದಿಯಲ್ಲಿದೆ ಆತಂಕಕಾರಿ ಅಂಶಗಳು
  • ಅಮೂಲ್,ಮದರ್ ಡೈರಿ, ಕಂಟ್ರಿ ಡಿಲೈಟ್ ಹಾಲು ಎಫ್‌ಎಸ್‌ಎಸ್‌ಎಐ ಪರೀಕ್ಷೆಯಲ್ಲಿ ಫೇಲ್
  • ಟ್ರಸ್ಟ್ಫೈಡ್ ಬ್ಲೈಂಡ್ ಲ್ಯಾಬ್ ಟೆಸ್ಟ್‌ನಲ್ಲಿ ಎಫ್‌ಎಸ್‌ಎಸ್‌ಎಐ ಮಿತಿಗಿಂತ ಹೆಚ್ಚಾದ ಕೋಲಿಫಾರ್ಮ್ ಹಾಗೂ TPC ಮಟ್ಟ ಪತ್ತೆ

ಭಾರತದ ಬಹುತೇಕ ಮನೆಗಳಲ್ಲಿ ದಿನದ ಆರಂಭವೇ ಬಾಗಿಲಿಗೆ ಬರುವ (FSSAI milk test report) ಹಾಲಿನ ಪ್ಯಾಕೆಟ್‌ನಿಂದ ಆರಂಭವಾಗುತ್ತದೆ.

ದೊಡ್ಡ, ಪ್ರಸಿದ್ಧ ಬ್ರ್ಯಾಂಡ್‌ಗಳಾದ ಅಮೂಲ್ (Amul) , ಮದರ್ ಡೈರಿ ಅಥವಾ ಕಂಟ್ರಿ ಡಿಲೈಟ್‌ನ (Country Delight) ಹಾಲು ಎಂದರೆ ಅದು ಸುರಕ್ಷಿತ ಎಂಬ ನಂಬಿಕೆ ಸಾಮಾನ್ಯ.

ಆದರೆ ಇತ್ತೀಚೆಗೆ Trustified ಎಂಬ ಸ್ವತಂತ್ರ ಸಂಸ್ಥೆ ನಡೆಸಿದ ಬ್ಲೈಂಡ್ ಲ್ಯಾಬ್ (Blind Lab) ಪರೀಕ್ಷೆ, ಈ ನಂಬಿಕೆಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಪರೀಕ್ಷಾ ವರದಿಗಳ ಪ್ರಕಾರ, ದೇಶದ ಪ್ರಮುಖ ಹಾಲು ಬ್ರ್ಯಾಂಡ್‌ಗಳ ಕೆಲವು ಉತ್ಪನ್ನಗಳಲ್ಲಿ ಎಫ್‌ಎಸ್‌ಎಸ್‌ಎಐ (FSSAI) ನಿಗದಿಪಡಿಸಿರುವ ಸುರಕ್ಷತಾ ಮಿತಿಗಿಂತ ಹೆಚ್ಚಾದ ಪ್ರಮಾಣದಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳು ಪತ್ತೆಯಾಗಿವೆ.

FSSAI milk test report

ಈ ಅಧ್ಯಯನದಲ್ಲಿ, ವಿವಿಧ ಹಾಲಿನ ಮಾದರಿಗಳನ್ನು ಮೈಕ್ರೋಬಯಾಲಜಿಕಲ್ ಪರೀಕ್ಷೆಗೆ ಒಳಪಡಿಸಲಾಯಿತು. ಮುಖ್ಯವಾಗಿ ಟೋಟಲ್ ಪ್ಲೇಟ್ ಕೌಂಟ್ (TPC) ಹಾಗೂ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಪರೀಕ್ಷೆ ನಡೆಸಲಾಯಿತು. ಈ ಪರೀಕ್ಷೆಗಳು ಹಾಲು ಎಷ್ಟು ಸ್ವಚ್ಛವಾಗಿಯೂ, ಆರೋಗ್ಯಕ್ಕೆ ಸುರಕ್ಷಿತವಾಗಿಯೂ ಇದೆ ಎಂಬುದನ್ನು ತಿಳಿಸುತ್ತವೆ.

ಕೋಲಿಫಾರ್ಮ್ ಬ್ಯಾಕ್ಟೀರಿಯಾ ಇದ್ದರೆ, ಹಾಲು ಸಂಸ್ಕರಣೆ ಅಥವಾ ಸಂಗ್ರಹಣೆಯ ವೇಳೆ ಸ್ವಚ್ಛತೆಯಲ್ಲಿ (FSSAI milk test report) ಲೋಪವಿದೆ ಎಂಬುದಕ್ಕೆ ಅದು ಸೂಚನೆಯಾಗಿದೆ .Trustified ವರದಿ ಪ್ರಕಾರ, ಪ್ಯಾಕೆಟ್ ಹಾಲು ಮತ್ತು ಟೆಟ್ರಾ ಪ್ಯಾಕ್ ಹಾಲಿನ ನಡುವೆ ಸ್ಪಷ್ಟ ವ್ಯತ್ಯಾಸ ಕಂಡುಬಂದಿದೆ.

ಈ ಪರೀಕ್ಷೆಯಲ್ಲಿ ಪೌಚ್ ಹಾಲುಗಳು ಹೆಚ್ಚು ವಿಫಲವಾಗಿದೆ .ಅಮೂಲ್ ತಾಜಾ ಹಾಗೂ ಅಮೂಲ್ ಗೋಲ್ಡ್ ಹಾಲಿನಲ್ಲಿ, ಎಫ್‌ಎಸ್‌ಎಸ್‌ಎಐ ನಿಗದಿಪಡಿಸಿರುವ ಮಿತಿಗಿಂತ ಅಧಿಕ ಪ್ರಮಾಣದಲ್ಲಿ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಪತ್ತೆಯಾಗಿದೆ.

ಇನ್ನು ಮದರ್ ಡೈರಿ ಕೌ ಮಿಲ್ಕ್‌ ಬಗ್ಗೆ ಹೇಳುವುದಾದರೆ, ಇದು ಕೂಡ ವಿಫಲವಾಯಿತು. ಈ ಹಾಲಿನ ಟೋಟಲ್ ಪ್ಲೇಟ್ ಕೌಂಟ್ ಸುರಕ್ಷತಾ ಮಿತಿಗಿಂತ 8 ಪಟ್ಟು ಹೆಚ್ಚು (30,000 CFU/ml ಮಿತಿಗೆ ವಿರುದ್ಧವಾಗಿ 2,40,000 CFU/ml) ದಾಖಲಾಗಿದೆ.

ಕಂಟ್ರಿ ಡಿಲೈಟ್ ಕೌ ಮಿಲ್ಕ್ ಕೂಡ ತನ್ನ “ಫಾರ್ಮ್-ಟು-ಹೋಮ್” (Farm-to-home) ಎಂಬ ಜಾಹೀರಾತು ಮಾತುಗಳಿಗೆ ವಿರುದ್ಧವಾಗಿ, ಕಾನೂನುಬದ್ಧ ಸುರಕ್ಷತಾ ಮಿತಿಗಿಂತ ದ್ವಿಗುಣ ಬ್ಯಾಕ್ಟೀರಿಯಾ ಮಟ್ಟ ತೋರಿಸಿದೆ.

ಇನ್ನು ಇದೇ ಪರೀಕ್ಷೆಯಲ್ಲಿ ಅಮೂಲ್ ಟೆಟ್ರಾ ಪ್ಯಾಕ್ (UHT ಹಾಲು) ಮಾತ್ರ ಸಂಪೂರ್ಣವಾಗಿ ಉತ್ತೀರ್ಣವಾಗಿದೆ. ಈ ಮಾದರಿಯಲ್ಲಿ ಯಾವುದೇ ಸೂಕ್ಷ್ಮಜೀವಿಗಳು ಪತ್ತೆಯಾಗಿಲ್ಲ.

ತಜ್ಞರ ಪ್ರಕಾರ, UHT (Ultra High Temperature) ಪ್ರಕ್ರಿಯೆ ಹಾಲನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸುತ್ತದೆ. ಇದರಿಂದ ಹಾಲು ಹೆಚ್ಚು ದಿನಗಳ ಕಾಲ ಸುರಕ್ಷಿತವಾಗಿರುತ್ತದೆ.

ಈ ಹಿನ್ನೆಲೆ, ಪ್ಯಾಕೆಟ್ ಹಾಲಿನ ಗುಣಮಟ್ಟವು ಸರಬರಾಜು ಸರಣಿ, ಶೀತ ಸಂಗ್ರಹಣೆಯ ಕೊರತೆ ಹಾಗೂ ಸಂಸ್ಕರಣಾ ಕ್ರಮಗಳ ಮೇಲೆ ಅವಲಂಬಿತವಾಗಿರುವುದು ಸ್ಪಷ್ಟವಾಗಿದೆ.

ಹಾಲನ್ನು ಕುದಿಸಿದರೆ ಸಮಸ್ಯೆ ಪರಿಹಾರವಾಗುತ್ತದೆಯೇ ಎಂಬ ಪ್ರಶ್ನೆ ಸಹಜ. ತಜ್ಞರು ಹೇಳುವಂತೆ, ಕುದಿಸುವುದರಿಂದ ಬ್ಯಾಕ್ಟೀರಿಯಾದ ಪ್ರಮಾಣ ಕಡಿಮೆಯಾಗಬಹುದು, ಆದರೆ ಬ್ಯಾಕ್ಟೀರಿಯಾ ಈಗಾಗಲೇ ಉತ್ಪಾದಿಸಿರುವ ವಿಷಾಂಶಗಳನ್ನು ಸಂಪೂರ್ಣವಾಗಿ ನಾಶ ಮಾಡಲಾಗುವುದಿಲ್ಲ.

ಆರೋಗ್ಯವಂತ ವಯಸ್ಕರಿಗೆ ಅಪಾಯ ಕಡಿಮೆಯಿರಬಹುದು, ಆದರೆ ಮಕ್ಕಳು, ಶಿಶುಗಳು, ಗರ್ಭಿಣಿಯರು ಹಾಗೂ ಹಿರಿಯ ನಾಗರಿಕರಿಗೆ ಇದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗಾಗಿ, ಮಕ್ಕಳಿರುವ ಮನೆಗಳಲ್ಲಿ ಟೆಟ್ರಾ ಪ್ಯಾಕ್ ಹಾಲಿಗೆ ಆದ್ಯತೆ ನೀಡುವುದು ಒಳಿತು.

ವೆಚ್ಚ ಸಮಸ್ಯೆಯಿದ್ದರೆ, ಪೌಚ್ ಹಾಲನ್ನು ಚೆನ್ನಾಗಿ ಕುದಿಸಿ, ತಕ್ಷಣವೇ ಬಳಸುವುದು ಅತ್ಯಗತ್ಯ. ಗಮನಾರ್ಹ ಅಂಶವೆಂದರೆ, ಭಾರತದಲ್ಲಿ ವಾಣಿಜ್ಯವಾಗಿ ಮಾರಾಟವಾಗುವ ಪಾಸ್ಚುರೈಸ್ಡ್ ಹಾಲಿನಲ್ಲಿಯೂ ಕೇವಲ 58–60% ಮಾತ್ರ ಸುರಕ್ಷತಾ ಮಾನದಂಡಗಳನ್ನು ಪೂರೈಸುತ್ತದೆ ಎಂಬುದು ಈ ವರದಿ ಸೂಚಿಸುವ ಆತಂಕಕಾರಿ ಸತ್ಯವಾಗಿದೆ.

ಇದನ್ನು ಓದಿ : https://vijayatimes.com/tamannaah-ambassador-of-mysore-sandal-soap/

Related News

ನವೆಂಬರ್ 1ರಿಂದ ಮೊಬೈಲ್ ಬಳಕೆದಾರರಿಗೆ ಹೊಸ ಸೌಲಭ್ಯ: ಅಪರಿಚಿತ ಕರೆ ಮಾಡಿದವರ ಹೆಸರೂ ಇನ್ಮುಂದೆ ಡಿಸ್‌ಪ್ಲೇ
Vijaya Time

ನವೆಂಬರ್ 1ರಿಂದ ಮೊಬೈಲ್ ಬಳಕೆದಾರರಿಗೆ ಹೊಸ ಸೌಲಭ್ಯ: ಅಪರಿಚಿತ ಕರೆ ಮಾಡಿದವರ ಹೆಸರೂ ಇನ್ಮುಂದೆ ಡಿಸ್‌ಪ್ಲೇ

October 30, 2026
ಇಸ್ರೋದಲ್ಲಿ 61 ಹುದ್ದೆಗಳ ನೇಮಕಾತಿ: 10ನೇ ತರಗತಿ, ಐಟಿಐ ಪಾಸಾದವರಿಗೆ ಅವಕಾಶ
Vijaya Time

ಇಸ್ರೋದಲ್ಲಿ 61 ಹುದ್ದೆಗಳ ನೇಮಕಾತಿ: 10ನೇ ತರಗತಿ, ಐಟಿಐ ಪಾಸಾದವರಿಗೆ ಅವಕಾಶ

October 29, 2026
ಸಫಾರಿಯಲ್ಲಿ ಮೊಬೈಲ್ ಫೋನ್ ಬಳಕೆಗೆ ಬ್ರೇಕ್:ಬಂಡೀಪುರ, ಕೆ.ಗುಡಿ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಹೊಸ ನಿಯಮ
Vijaya Time

ಸಫಾರಿಯಲ್ಲಿ ಮೊಬೈಲ್ ಫೋನ್ ಬಳಕೆಗೆ ಬ್ರೇಕ್:ಬಂಡೀಪುರ, ಕೆ.ಗುಡಿ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಹೊಸ ನಿಯಮ

October 10, 2026
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅಮಾನತಿಗೆ ಸುಪ್ರೀಂ ಕೋರ್ಟ್ ನಕಾರ: ಕೇಂದ್ರ, ಚುನಾವಣಾ ಆಯೋಗಕ್ಕೆ ನೋಟಿಸ್
Vijaya Time

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅಮಾನತಿಗೆ ಸುಪ್ರೀಂ ಕೋರ್ಟ್ ನಕಾರ: ಕೇಂದ್ರ, ಚುನಾವಣಾ ಆಯೋಗಕ್ಕೆ ನೋಟಿಸ್

October 5, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.