- CPCB ಮತ್ತು ಪ್ರಯೋಗಾಲಯದ ಪರಿಶೀಲನೆಯಲ್ಲಿ (FSSAI report reveals lead in vegetables) 72 ಮಾದರಿಗಳಲ್ಲಿ 19 ಮಾದರಿಗಳಲ್ಲಿ ಸೀಸದ ಪ್ರಮಾಣ ಪತ್ತೆ
- ಮೆಣಸಿನಕಾಯಿ, ಕ್ಯಾಪ್ಸಿಕಂ, ಸೌತೆಕಾಯಿ ಸೇರಿದಂತೆ ಹಲವಾರು ತರಕಾರಿಗಳಲ್ಲಿನ ವಿಷಕಾರಿ ಕೀಟನಾಶಕಗಳು ಪತ್ತೆ
- ಕೋಲಾರ, ಚಿಕ್ಕಬಳ್ಳಾಪುರ ಮತ್ತು ನೆಲಮಂಗಲ ಪ್ರದೇಶದ 26 ಮಣ್ಣಿನ ಮಾದರಿಗಳಲ್ಲಿ 23 ಮಾದರಿಗಳು ದೋಷಪೂರಿತ
Bengaluru: ಕರ್ನಾಟಕದಲ್ಲಿ ಬಳಸಲಾಗುವ ತರಕಾರಿಗಳಲ್ಲಿ ಲೋಹ (ಸೀಸ) ಮತ್ತು ಕೀಟನಾಶಕಗಳ ಪ್ರಮಾಣ (FSSAI report reveals lead in vegetables) ಮಿತಿಗಿಂತ ಹೆಚ್ಚು ಇರುವುದಾಗಿ ಇತ್ತೀಚಿನ ವರದಿ ಹೇಳಿದೆ.
ಈ ವರದಿ ರಾಜ್ಯದ ವಿವಿಧ ಭಾಗಗಳಲ್ಲಿ 72 ತರಕಾರಿ ಮಾದರಿಗಳನ್ನು ಪರಿಶೀಲಿಸಿದ ನಂತರ ನೀಡಲಾಗಿದ್ದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಮತ್ತು ಎಫ್‌ಎಸ್‌ಎಸ್‌ಎಐ (FSSAI) ಮಾನ್ಯತೆ ಪಡೆದ ಪ್ರಯೋಗಾಲಯಗಳ ಪರಿಶೀಲನೆ ಪ್ರಕಾರ, 19 ಮಾದರಿಗಳಲ್ಲಿ ಸೀಸದ ಪ್ರಮಾಣ ಮಾನದಂಡಕ್ಕಿಂತ ಹೆಚ್ಚು ಕಂಡುಬಂದಿದ್ದು, ಕೆಲ ತರಕಾರಿಗಳಲ್ಲಿ ಇದು 20 ಪಟ್ಟು ಹೆಚ್ಚು ಲೋಹದ ಅಂಶ ಕಂಡು ಬಂದಿದೆ.

ಹಳೆಯ ವರದಿಗಳೊಂದಿಗೆ ಹೋಲಿಸಿದಾಗ, ಈ ಸಮಸ್ಯೆ ಹೊಸದು (FSSAI report reveals lead in vegetables) ಅಲ್ಲವೆಂದು ತಿಳಿದುಬಂದಿದ್ದು, ಹಲವಾರು ವರ್ಷಗಳಿಂದ ಕರ್ನಾಟಕದ ತರಕಾರಿಗಳಲ್ಲಿ ಭಾರೀ ಲೋಹದ ಅಂಶ ಕಂಡುಬರುತ್ತಲೇ ಇದೆ.
ಇನ್ನು ರಾಜ್ಯದಲ್ಲಿ ಬಳಸಲಾಗುವ ಬದನೆಕಾಯಿ ಮಾದರಿಯಲ್ಲಿಯೇ 1.953 ಮಿ.ಗ್ರಾಂ/ಕೆಜಿ ಸೀಸ ಪತ್ತೆಯಾದ್ದು, ಇದು ನಿಗದಿತ 0.1 ಮಿ.ಗ್ರಾಂ ಮಿತಿಗಿಂತ ಸುಮಾರು 20 ಪಟ್ಟು ಅಧಿಕವಾಗಿದೆ.
ಇದಲ್ಲದೆ, ತೊಂಡೆಕಾಯಿ, ಅವರೆಕಾಯಿ, ಸೊಪ್ಪು, ಕೋಸು, ಸೌತೆಕಾಯಿ, ಹೀರೇಕಾಯಿ, ಕ್ಯಾಪ್ಸಿಕಂ (Capsicum) , ಬೀಟ್‌ರೂಟ್ (Beetroot) , ಹಾಗಲಕಾಯಿ, ಶಲಗಂ, ಸ್ಕ್ವಾಶ್ ಮತ್ತು ಮೆಣಸಿನಕಾಯಿ ಸೇರಿದಂತೆ ಹಲವು ತರಕಾರಿಗಳಲ್ಲಿಯೂ ಮಿತಿಗಿಂತ ಹೆಚ್ಚು ಲೋಹ ಕಂಡುಬಂದಿದೆ.
ಸಾರ್ವಜನಿಕರಲ್ಲಿ “ನಿಜವಾಗಿಯೂ ಆರ್ಗ್ಯಾನಿಕ್ ತರಕಾರಿಗಳನ್ನು ತಿನ್ನುತ್ತಿದ್ದೇವೆಯೇ?” ಎಂಬ ಪ್ರಶ್ನೆಯನ್ನು ಹುಟ್ಟುಹಾಕುವಂತೆ, ಆರ್ಗ್ಯಾನಿಕ್ (Organic) ಎಂದು ಮಾರಾಟವಾಗುತ್ತಿರುವ ಕೆಲವು ತರಕಾರಿಗಳಲ್ಲಿಯೂ ಹೆಚ್ಚು ಪ್ರಮಾಣದ ಸೀಸ ಪತ್ತೆಯಾಗಿದೆ.
ಈ ಪ್ರಕರಣವು ಆಹಾರದ ಗುಣಮಟ್ಟ ಮತ್ತು ಸಾರ್ವಜನಿಕ ಆರೋಗ್ಯದ ವಿಚಾರದಲ್ಲಿ ಗಂಭೀರ ಚಿಂತೆ ಮೂಡಿಸಿದೆ.
ವಿಷದ ಅಂಶ ಕೇವಲ ತರಕಾರಿಗಳಲ್ಲಿ ಅಲ್ಲ ಬದಲಾಗಿ ಕರ್ನಾಟಕದ ನೆಲಮಂಗಲ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಪ್ರದೇಶಗಳಿಂದ ಸಂಗ್ರಹಿಸಿದ 26 ಮಣ್ಣಿನ ಮಾದರಿಗಳಲ್ಲಿಯೂ 23 ಮಾದರಿಗಳು ಕಲುಷಿತವಾಗಿದ್ದವು.
ಈ ಮಣ್ಣಿನಲ್ಲಿ ಲೋಹ ಮತ್ತು ನಿಷಿದ್ಧ ಕೀಟನಾಶಕಗಳ ಅಂಶ ಪತ್ತೆಯಾಗಿದ್ದು, ರೈತರಿಗೆ ಕೀಟನಾಶಕ ಬಳಕೆ ಕುರಿತು ಹೆಚ್ಚು ಜಾಗೃತಿ ಅಗತ್ಯವಿದೆ ಎಂಬ ಸೂಚನೆ ನೀಡುತ್ತದೆ.
CPCB ಈ ಕುರಿತು ಪತ್ತೆಹಚ್ಚಿದ ಮಹತ್ವಪೂರ್ಣ ತಥ್ಯಗಳನ್ನು ಮುಂದಿನ ದಿನಗಳಲ್ಲಿ ಸಮಗ್ರ ಅಧ್ಯಯನಕ್ಕೆ ಒಳಪಡಿಸಲು ಸೂಚಿಸಿದೆ.
ಮಣ್ಣಿನ ದುಷ್ಪರಿಣಾಮಗಳು ತರಕಾರಿಗಳಲ್ಲಿನ ಲೋಹದ ಪ್ರಮಾಣ ಹೆಚ್ಚುವಿಕೆಗೆ ನೇರವಾಗಿ ಸಂಬಂಧ ಹೊಂದಿರುವುದಾಗಿ ತಜ್ಞರು ತಿಳಿಸಿದ್ದಾರೆ.
ಇನ್ನು ಪರಿಶೀಲನೆಯ ವೇಳೆ, 12 ವಿಧದ ಕೀಟನಾಶಕಗಳ ಅವಶೇಷಗಳು ಪತ್ತೆಯಾದವು. ಪ್ರಮುಖವಾಗಿ, ಮೊನೋಕ್ರೋಟೊಫೋಸ್ (Monocrotophos) ಎಂಬ ಭಾರೀ ವಿಷಕಾರಿ ಕೀಟನಾಶಕವೂ ಕಂಡುಬಂದಿದ್ದು, ಇದು ಭಾರತದಲ್ಲಿ 2023ರಲ್ಲಿ ನಿಷೇಧಿತವಾಗಿದೆ.
ಮೆಣಸಿನಕಾಯಿ ಮಾದರಿಗಳಲ್ಲಿಯೂ ನಿಗದಿತ 0.2 ಮಿ.ಗ್ರಾಂ/ಕೆಜಿ ಮಿತಿಗಿಂತ ಎರಡು ಪಟ್ಟು ಹೆಚ್ಚು ಮೊನೋಕ್ರೋಟೊಫೋಸ್ ಕಂಡುಬಂದಿದ್ದು, ಇದರಿಂದ ಆಹಾರ ಸುರಕ್ಷತೆಯಲ್ಲಿ ಗಂಭೀರ ತೊಂದರೆ ಉಂಟಾಗಿದೆ.
ಇತರ ಕೀಟನಾಶಕಗಳು, ಉದಾಹರಣೆಗೆ ಏಸಿಫೇಟ್ (Acephate) , ಇಥಿಯಾನ್, ಫಿಪ್ರೋನಿಲ್, ಪ್ರೊಫೆನೋಫೋಸ್ (Profenofos) ಇತ್ಯಾದಿ, ಯುರೋಪಿಯನ್ ಯೂನಿಯನ್‌ನಲ್ಲಿ ಈಗಾಗಲೇ ನಿಷೇಧವಾಗಿವೆ.
ಆದರೆ, ಈ ಕೀಟನಾಶಕಗಳ ಬಳಕೆ ನಮ್ಮಲ್ಲಿ ಇನ್ನೂ ಬಳಸಲಾಗುತ್ತಿದ್ದು ಸಾರ್ವಜನಿಕರ ಆರೋಗ್ಯದ ಮೇಲೆ ನೇರ ಹಾನಿಯುಂಟಾಗುವ ಸಂಭವವಿದೆ.
ಈ ಹಿನ್ನೆಲೆಯಲ್ಲಿ CPCB ರೈತರಿಗೆ ಕೀಟನಾಶಕ ಬಳಕೆ ಕುರಿತು ಜಾಗೃತಿ ಮೂಡಿಸುವಂತೆ ಸೂಚಿಸಿದೆ. FSSAI ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿ ಪರೀಕ್ಷೆ ನಡೆಸುವುದು ಕಡ್ಡಾಯವಾಗಿದೆ.
ಈ ವರದಿ ಸಾರ್ವಜನಿಕರಲ್ಲಿ ಎಚ್ಚರಿಕೆ ಮೂಡಿಸಲು, ಶೇ.100 ರಷ್ಟು ಆರ್ಗ್ಯಾನಿಕ್ ಉತ್ಪನ್ನಗಳ ಖರೀದಿ ಸಾಧ್ಯತೆ ಮತ್ತು ಆರೋಗ್ಯಪೂರ್ಣ ಆಹಾರ ಸೇವನೆಯ ಕುರಿತು ಗಮನ ಸೆಳೆಯಲಿದೆ. ಮುಂದಿನ ದಿನಗಳಲ್ಲಿ ಸಂಪೂರ್ಣ ಸಮಗ್ರ ಅಧ್ಯಯನ ನಡೆಸಲಾಗುವುದು ಎಂದು ಸೂಚಿಸಲಾಗಿದೆ.
ರಾಜ್ಯದ ಹಸಿರು ನ್ಯಾಯಮಂಡಳಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿ, ಸ್ಥಳ ಪರಿಶೀಲನೆ ನಡೆಸಲು ಸೂಚಿಸಿದ್ದು, ಸಾರ್ವಜನಿಕರು ತರಕಾರಿಗಳ ಸ್ವಚ್ಚತೆ ಮತ್ತು ಗುಣಮಟ್ಟದ ಬಗ್ಗೆ ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗಿದೆ.
ಇದನ್ನು ಓದಿ : https://vijayatimes.com/shooting-videos-banned-in-temple/