• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಆರೋಗ್ಯ

ನಕಲಿ ORS ಉತ್ಪನ್ನಗಳ ಮಾರಾಟಕ್ಕೆ ಬ್ರೇಕ್: FSSAI ಕಠಿಣ ಎಚ್ಚರಿಕೆ

Shwetha Mohan by Shwetha Mohan
in ಆರೋಗ್ಯ, ದೇಶ-ವಿದೇಶ, ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
ನಕಲಿ ORS ಉತ್ಪನ್ನಗಳ ಮಾರಾಟಕ್ಕೆ ಬ್ರೇಕ್: FSSAI ಕಠಿಣ ಎಚ್ಚರಿಕೆ
0
SHARES
36
VIEWS
Share on FacebookShare on Twitter
  • ಗ್ರಾಹಕರ ಸುರಕ್ಷತೆಗಾಗಿ ನಕಲಿ ORS ಮಾರಾಟ ನಿಷೇಧಿಸಿದ FSSAI
  • WHO ಸೂತ್ರ ಪಾಲಿಸದ ORS ಬ್ರಾಂಡ್‌ಗಳಿಗೆ ಭಾರತದಲ್ಲಿ ಹೊಸ ನಿಯಮಗಳು ಜಾರಿ
  • ಒಆರ್‌ಎಸ್ ಬಗ್ಗೆ ತಪ್ಪು ಲೇಬಲಿಂಗ್: FSSAI ಕಠಿಣ ಎಚ್ಚರಿಕೆ

New delhi: ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಮತ್ತೊಮ್ಮೆ ಸ್ಪಷ್ಟ ಎಚ್ಚರಿಕೆ ನೀಡಿದೆ ವಿಶ್ವ ಆರೋಗ್ಯ ಸಂಸ್ಥೆ (WHO) ಶಿಫಾರಸು ಮಾಡಿದ ಸೂತ್ರವನ್ನು ಪಾಲಿಸದ ಯಾವುದೇ ಉತ್ಪನ್ನವನ್ನು ‘ಒಆರ್‌ಎಸ್’ (Oral Rehydration Salts) ಎಂದು ಮಾರಾಟ ಮಾಡುವುದು ಸಂಪೂರ್ಣ ನಿಷೇಧ ಎಂದಿದೆ. (FSSAI warns fake ORS products)

ಅಕ್ಟೋಬರ್ 14 ರಂದು ಹೊರಡಿಸಲಾದ ಅಧಿಕೃತ ನಿರ್ದೇಶನದಲ್ಲಿ, ಈ ವಿಷಯದ ಕುರಿತಾಗಿ ಆಹಾರ ತಯಾರಿಕಾ ಕಂಪನಿಗಳಿಗೆ ಮತ್ತು ಮಾರಾಟಗಾರರಿಗೆ ಸ್ಪಷ್ಟ ಮಾರ್ಗಸೂಚಿ ನೀಡಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ  ಶಿಫಾರಸು ಮಾಡಿದ ಸೂತ್ರವನ್ನು ಪಾಲಿಸದ  ಒಆರ್‌ಎಸ್ಎಂದು ಮಾರಾಟ ಮಾಡುವುದು ನಿಷೇಧ

ಎಫ್‌ಎಸ್ಎಸ್ಎಐ ಹೇಳಿಕೆಯ ಪ್ರಕಾರ, ಹಲವಾರು ಬ್ರಾಂಡ್‌ಗಳು (Brand) ಒಆರ್‌ಎಸ್ ಹೆಸರಿನಲ್ಲಿ ತಪ್ಪುಮಾರ್ಗದ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದವು.

ಇವುಗಳಲ್ಲಿ ಅನೇಕವು WHO ನಿಂದ ಶಿಫಾರಸು ಮಾಡಲ್ಪಟ್ಟ ನಿಖರವಾದ ಸಕ್ಕರೆ, ಉಪ್ಪು ಮತ್ತು ನೀರಿನ ಪ್ರಮಾಣದ ಸೂತ್ರವನ್ನು ಪಾಲಿಸುತ್ತಿಲ್ಲ.

ಈ ಹಿನ್ನೆಲೆಯಲ್ಲಿ, ಇಂತಹ ಉತ್ಪನ್ನಗಳನ್ನು ಒಆರ್‌ಎಸ್ ಎಂದು ಲೇಬಲ್ ಮಾಡುವುದು ಅಥವಾ ಅದರಂತೆ ಪ್ರಚಾರ ಮಾಡುವುದು ಕಾನೂನುಬಾಹಿರ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ. (FSSAI warns fake ORS products)

ಆಹಾರ ವ್ಯವಹಾರ ಸಂಸ್ಥೆಗಳು ಇನ್ನು ಮುಂದೆ ಒಆರ್‌ಎಸ್ ಶಬ್ದವನ್ನು ಬಳಸುವಂತಿಲ್ಲ, ಅದರ ಬದಲಾಗಿ “ಹೈಡ್ರೇಶನ್ ಡ್ರಿಂಕ್” (Hydration Drink) , “ಎನರ್ಜಿ ಡ್ರಿಂಕ್” (Energy Drink) ಅಥವಾ “ಇಲೆಕ್ಟ್ರೋಲೈಟ್ ಪಾನೀಯ” ಎಂಬ ಪರ್ಯಾಯ ಪದಗಳನ್ನು ಬಳಸಬೇಕೆಂದು ಸೂಚಿಸಲಾಗಿದೆ.

ಅಷ್ಟಕ್ಕೂ ಒಆರ್‌ಎಸ್ ಎಂದರೆ Oral Rehydration Salts ಇದು ಸರಳವಾದ ಅತ್ಯಂತ ಪರಿಣಾಮಕಾರಿ ದ್ರಾವಣ. ಸಕ್ಕರೆ, ಉಪ್ಪು ಮತ್ತು ಶುದ್ಧ ನೀರಿನ ಸರಿಯಾದ ಪ್ರಮಾಣದಿಂದ ತಯಾರಾಗುವ ಈ ಮಿಶ್ರಣವು ಅತಿಸಾರ, ವಾಂತಿ ಅಥವಾ ಶಾಖದಿಂದ ಉಂಟಾಗುವ ನಿರ್ಜಲೀಕರಣ (Dehydration) ಸಮಸ್ಯೆಯಿಂದ ಜೀವ ಉಳಿಸಲು ಸಹಕಾರಿಯಾಗಿದೆ.

ಈ ದ್ರಾವಣದಲ್ಲಿನ ಗ್ಲೂಕೋಸ್ ಅಂಶವು ಅತ್ಯಂತ ಮುಖ್ಯವಾದದ್ದು. ಇದು ದೇಹದಲ್ಲಿ ಸೋಡಿಯಂ ಮತ್ತು ನೀರಿನ ಹೀರಿಕೆ (Absorption) ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ.

ಆದರೆ ಗ್ಲೂಕೋಸ್ ಅಂಶವಿಲ್ಲದ ಯಾವುದೇ ಪಾನೀಯವು ಒಆರ್‌ಎಸ್‌ನಂತೆ ಕೆಲಸ ಮಾಡುವುದಿಲ್ಲ ಎಂಬುದನ್ನು ವೈದ್ಯರು ಸ್ಪಷ್ಟವಾಗಿ ಹೇಳಿದ್ದಾರೆ.

ಇನ್ನು ಈ ಸಮಸ್ಯೆ ಹೊಸದೇನಲ್ಲ. ಇತ್ತೀಚಿನ ಎಚ್ಚರಿಕೆಗಿಂತ ಮೊದಲು, ಎಫ್‌ಎಸ್ಎಸ್ಎಐ ಏಪ್ರಿಲ್ 2022 ರಲ್ಲಿಯೇ ಈ ವಿಷಯದಲ್ಲಿ ಸೂಚನೆ ನೀಡಿತ್ತು.

ಹಲವು ಕಂಪನಿಗಳು ತಮ್ಮ ಪ್ಯಾಕೇಜಿಂಗ್‌ನಲ್ಲಿ “ORS alternative” ಅಥವಾ “ORS substitute” ಎಂಬ ಪದಗಳನ್ನು ಬಳಸುತ್ತಿದ್ದು, ಗ್ರಾಹಕರನ್ನು ತಪ್ಪು ದಾರಿಯಲ್ಲಿ ನಡಿಸುತ್ತಿದ್ದವು.

ಈ ಹಿನ್ನೆಲೆಯಲ್ಲಿ ಎಫ್‌ಎಸ್ಎಸ್ಎಐ (FSSAI) ಈಗ ಮತ್ತಷ್ಟು ಕಠಿಣ ಕ್ರಮ ಕೈಗೊಂಡಿದೆ. ಇಂತಹ ಉತ್ಪನ್ನಗಳ ವಿರುದ್ಧ ಪರಿಶೀಲನೆ, ಲೈಸೆನ್ಸ್ ರದ್ದುಪಡಿಸುವಿಕೆ ಹಾಗೂ ದಂಡಾತ್ಮಕ ಕ್ರಮಗಳು ಕೈಗೊಳ್ಳಲಾಗುತ್ತದೆ.

ಆಹಾರ ವ್ಯವಹಾರ ನಡೆಸುವ ಪ್ರತಿಯೊಬ್ಬರೂ ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕಿದೆ.

ಎಫ್‌ಎಸ್ಎಸ್ಎಐಯ ಈ ತೀರ್ಮಾನವು ಗ್ರಾಹಕರ ಸುರಕ್ಷತೆ ಮತ್ತು ಆರೋಗ್ಯದ ದೃಷ್ಟಿಯಿಂದ ಅತ್ಯಂತ ಪ್ರಮುಖ ಹೆಜ್ಜೆಯಾಗಿದೆ.

WHO ಮಾನದಂಡಗಳನ್ನು ಪಾಲಿಸದ ಯಾವುದೇ ಉತ್ಪನ್ನವನ್ನು ಒಆರ್‌ಎಸ್ ಎಂದು ಮಾರಾಟ ಮಾಡುವುದು ಕಾನೂನುಬಾಹಿರವಾಗಿದೆ ಹೀಗಾಗಿ, ಗ್ರಾಹಕರು ಖರೀದಿ ಮಾಡುವಾಗ ಪ್ಯಾಕೇಜ್‌ನ್ನು ಓದಿ “WHO Formula ORS” ಎಂದು ಸ್ಪಷ್ಟವಾಗಿ ನಮೂದಿಸಿರುವುದನ್ನು ಖಚಿತಪಡಿಸಿಕೊಂಡು ಕೊಂಡುಕೊಳ್ಳಲು ಸೂಚಿಸಿದೆ.

Tags: FSSAIHealthNewdelhiORSWHO

Related News

ಮೋದಿ ಸರ್ಕಾರದ ವಿರುದ್ಧ ಮಹಾಸಮರಕ್ಕೆ ವೇದಿಕೆ ಸಿದ್ಧ: INDIA ಮೈತ್ರಿಕೂಟ ಸಭೆಯಲ್ಲಿ ಮಹತ್ವದ ಚರ್ಚೆ
ದೇಶ-ವಿದೇಶ

ಮೋದಿ ಸರ್ಕಾರದ ವಿರುದ್ಧ ಮಹಾಸಮರಕ್ಕೆ ವೇದಿಕೆ ಸಿದ್ಧ: INDIA ಮೈತ್ರಿಕೂಟ ಸಭೆಯಲ್ಲಿ ಮಹತ್ವದ ಚರ್ಚೆ

June 8, 2026
ಮ್ಯೂಚುಯಲ್ ಫಂಡ್‌ನಲ್ಲಿ 2 ಹೊಸ ಯೋಜನೆಗಳು ಪ್ರಾರಂಭ : ಕನಿಷ್ಠ ₹500 ರಿಂದಲೂ ಹೂಡಿಕೆ ಸಾಧ್ಯ!
ಪ್ರಮುಖ ಸುದ್ದಿ

ಮ್ಯೂಚುಯಲ್ ಫಂಡ್‌ನಲ್ಲಿ 2 ಹೊಸ ಯೋಜನೆಗಳು ಪ್ರಾರಂಭ : ಕನಿಷ್ಠ ₹500 ರಿಂದಲೂ ಹೂಡಿಕೆ ಸಾಧ್ಯ!

June 8, 2026
ದಕ್ಷಿಣ ಫಿಲಿಪೈನ್ಸ್‌ನಲ್ಲಿ 7.8 ತೀವ್ರತೆಯ ಭೂಕಂಪ; ಕರಾವಳಿ ಪ್ರದೇಶಗಳಲ್ಲಿ ಸುನಾಮಿ ಅಲೆಗಳ ಆತಂಕ
ದೇಶ-ವಿದೇಶ

ದಕ್ಷಿಣ ಫಿಲಿಪೈನ್ಸ್‌ನಲ್ಲಿ 7.8 ತೀವ್ರತೆಯ ಭೂಕಂಪ; ಕರಾವಳಿ ಪ್ರದೇಶಗಳಲ್ಲಿ ಸುನಾಮಿ ಅಲೆಗಳ ಆತಂಕ

June 8, 2026
ನೀಟ್ ಹಗರಣದ ವಿರುದ್ಧ ಜಂತರ್‌ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಹೋರಾಟ: ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯ
ದೇಶ-ವಿದೇಶ

ನೀಟ್ ಹಗರಣದ ವಿರುದ್ಧ ಜಂತರ್‌ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಹೋರಾಟ: ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯ

June 6, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.