Bengaluru: ಬೆಂಗಳೂರಿನಲ್ಲಿ (Bengaluru) ಸೋಮವಾರ ಮಾತನಾಡಿದ ಗೃಹ ಸಚಿವ ಡಾ.ಜಿ ಪರಮೇಶ್ವರ್ (Dr. G Parameshwar) ಅವರು, ಚಿಕ್ಕ ಪುಟ್ಟ ಘಟನೆಗಳನ್ನು ಹೊರತುಪಡಿಸಿ ಹೊಸ ವರ್ಷಾಚರಣೆ ಶಾಂತಿಯುತವಾಗಿ ನಡೆದಿದೆ ಎಂದು ಹೇಳಿದರು. ನಿನ್ನೆ( ಭಾನುವಾರ) ರಾತ್ರಿ ನಡೆದ ಹೊಸ ವರ್ಷದ ಸಂಭ್ರಮಾಚರಣೆ ಶಾಂತಿಯುತವಾಗಿ ನಡೆದಿದೆ.
ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂದುಕೊಂಡಿದ್ದೆವು ಅದರಂತೆ ನಮ್ಮ ಪೊಲೀಸರು ನಡೆದುಕೊಂಡಿದ್ದಾರೆ. ಹೊಸ ವರ್ಷಾಚರಣೆಯ #NewYearCelebration ಸಂದರ್ಭದಲ್ಲಿ ಇಡೀ ರಾಜ್ಯದ ಜನ ಸಹಕರಿಸಿದ್ದಾರೆ. ಅವರಿಗೂ ಧನ್ಯವಾದ. ಸಣ್ಣ ಪುಟ್ಟ ಪ್ರಕರಣಗಳು ಬಿಟ್ಟರೆ ಶಾಂತಿಯುತವಾಗಿ ಹೊಸ ವರ್ಷ ಪ್ರಾರಂಭವಾಗಿದೆ ಎಂದರು.
ಸಿಬಿಐ (CBI) ಅವರು ಅವರ ಕೆಲಸ ಮಾಡ್ತಾ ಇದ್ದಾರೆ. ನಾವು ನಮ್ಮ ಕೆಲಸ ಮಾಡ್ತೀವಿ. ಅವರಿಗೆ ಯಾಕೆ ನೋಟಿಸ್ ಕೊಟ್ಟಿದ್ದಾರೆ ಗೊತ್ತಿಲ್ಲ ಎಂದು ಡಿಸಿಎಂ ಅವರಿಗೆ ಸಿಬಿಐ ನೋಟಿಸ್ ವಿಚಾರವಾಗಿ ಮಾತನಾಡಿದರು. ದೆಹಲಿಗೆ ಸಿದ್ದರಾಮಯ್ಯ @Siddaramaih ಹಾಗೂ ಡಿಕೆ ಶಿವಕುಮಾರ್ ಹೋಗುವ ವಿಚಾರ ದೆಹಲಿಯಲ್ಲಿ ಹೈ ಕಮಾಂಡ್ ಸಿಎಂ, ಡಿಸಿಎಂ ನ ಕರೆದಿದ್ದಾರೆ. ಅವರು ದೆಹಲಿಗೆ (Delhi) ಹೋಗ್ತಾ ಇದ್ದಾರೆ.
ಲೋಕಸಭಾ ಚುನಾವಣೆ ತಯಾರಿ ಕುರಿತು ವಿಚಾರ ಮಾಡಲು ಹೋಗುತ್ತಿದ್ದಾರೆ. ನಾವು ನಮ್ಮ ಅಭಿಪ್ರಾಯ ಇವರಿಗೆ ಹೇಳಿದ್ದೇವೆ. ಹಾಗಾಗಿ ನಮ್ಮನ್ನು ಕರೆಯುವ ಅವಶ್ಯಕತೆ ಇಲ್ಲ ಎಂದರು. ಪ್ರತಾಪ್ ಸಿಂಹ #PratapSimha ಅವರು ತಮ್ಮನ ಬಂಧನ ವಿಚಾರವಾಗಿ ಇದೇ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿ, ಇದರಲ್ಲಿ ಯಾವುದೂ ರಾಜಕೀಯ ಇರಬಾರದು. ಮರ ಕಡೆದಿದ್ದಾರೆ ಹಾಗಾಗಿ ಕ್ರಮ ಆಗಿದೆ.
ಸಿಎಂ ಸೂಚನೆಯಂತೆ ಬಂಧನ ಮಾಡಿಸಿದ್ದಾರೆ ಅನ್ನೋದು ಸರಿಯಲ್ಲ. ಯಾರೇ ಆದರೂ ಕಾನೂನು ಕ್ರಮ ಆಗಲಿದೆ. ಪ್ರತಾಪ್ ಸಿಂಹ ತಮ್ಮ ಆದರೂ ಸರಿ ಬೇರೆ ಆದರೂ ಸರಿ. ಈ ನೆಲದ ಕಾನೂನಿಗೆ ಬೆಲೆ ಕೊಡಬೇಕಾಗುತ್ತದೆ. ಇಲ್ಲಿ ಒತ್ತಡ ಹಾಕುವುದು ಏನಿದೆ? ಎಂದು ಪ್ರಶ್ನಿಸಿದರು.
ಭವ್ಯಶ್ರೀ ಆರ್ ಜೆ