ಶೃಂಗಸಭೆ ಆಯೋಜನೆ ಎನ್ನುವುದು ಎಲ್ಲ ರಾಷ್ಟ್ರಕ್ಕೂ ಅತ್ಯಂತ ಪ್ರತಿಷ್ಠಿತ ವಿಚಾರವಾಗಿದ್ದು, ತನ್ನ (G20 summit 2023 in Delhi) ನೆಲದ ಸಾಂಸ್ಕೃತಿಕ ಸೊಬಗನ್ನು ತಿಳಿಸುವುದಲ್ಲದೆ ಹೆಚ್ಚಿನ ಆದ್ಯತೆ ಕಲ್ಪಿಸುವುದು
ಅತಿಮುಖ್ಯವಾಗಿದೆ. ಸೆಪ್ಟೆಂಬರ್ (September) 9 ರಿಂದ 10 ರವರೆಗೂ ದಿಲ್ಲಿಯಲ್ಲಿ ಆರಂಭವಾಗುತ್ತಿರುವ ಜಿ20 (G20) ಶೃಂಗಸಭೆಯು ಭಾರತಕ್ಕೆ ಅತ್ಯಂತ ವಿಶೇಷವಾಗಿದ್ದು, ಈ
ಸಭೆಯಲ್ಲಿ ಹತ್ತಾರು ಸಾಂಸ್ಕೃತಿಕ ಸೊಬಗುಗಳನ್ನು (G20 summit 2023 in Delhi) ಮೈಗೂಡಿಸಿಕೊಳ್ಳಲಿದೆ.

ಹಾಗೆಯೇ ಜಿ20 ಶೃಂಗಸಭೆಯಲ್ಲೂ ಎಲ್ಲ ಸದಸ್ಯ ರಾಷ್ಟ್ರಗಳ ಒಬ್ಬೊಬ್ಬ ಶೆರ್ಪಾಗಳು (Sherpa) ತಮ್ಮ ದೇಶಗಳನ್ನು ಪ್ರತಿನಿಧಿಸುತ್ತಿದ್ದು, ಶೆರ್ಪಾಗಳು ತಮ್ಮ ರಾಷ್ಟ್ರದ ನಾಯಕರಿಗೆ ಜಿ20 ಶೃಂಗದಲ್ಲಿ
ಕೈಹಿಡಿಯಲಿದ್ದು, ಶೆರ್ಪಾಗಳು ದೇಶೀಯ ಮತ್ತು ವಿದೇಶಿ ಅತಿಥಿಗಳ ನಡುವಿನ ಸಮನ್ವಯದಿಂದ ಹಿಡಿದು ಎಲ್ಲ ರಾಷ್ಟ್ರಸದಸ್ಯರುಗಳಿಗೆ ತಮ್ಮ ದೇಶದ ನೀತಿ- ನಿರ್ಧಾರಗಳ ಬಗ್ಗೆ ಅರಿವು ಮೂಡಿಸುತ್ತಾರೆ.
ಈ ಶೃಂಗದಲ್ಲಿ ಶೆರ್ಪಾ ಶ್ರೇಣಿಯೂ ರಾಯಭಾರಿಯ ಸ್ಥಾನಕ್ಕೆ ಸಮನಾಗಿರುತ್ತದೆ.
ಪ್ರಸ್ತುತ ಭಾರತದಲ್ಲಿ ನಡೆದ ಜಿ20 ಸರಣಿ ಸಭೆಗಳಲ್ಲಿ 4 ಶೆರ್ಪಾ ಮಟ್ಟದ ಸಭೆಗಳನ್ನು ನಡೆಸಲಾಗಿದ್ದು, ಕುಮಾರಕೋಮ್ (Kumarkom), ಉದಯಪುರ, ನುಹ್, ಹಂಪಿಯಲ್ಲಿ ಈ ಸಭೆಗಳು ಮುಗಿದಿದ್ದವು.
ಇವುಗಳ ಒಟ್ಟಾರೆ ಆಶಯವನ್ನು ಸೆ.9 ರಿಂದ 10ರಂದು ನಡೆಯಲಿರುವ ಸಭೆಯಲ್ಲಿ ಎಲ್ಲ ರಾಷ್ಟ್ರಗಳ ಮುಂದಿಡಲಾಗುತ್ತಿದ್ದು, ಒಟ್ಟಿನಲ್ಲಿ ಜಿ20 ಅಂತಿಮ ಸಭೆ ಹಲವು ವೈಶಿಷ್ಟ್ಯಗಳಿಂದ ಕೂಡಿರಲಿದೆ.
ಅನುಭವ ಮಂಟಪ ಪ್ರೇರಿತ ಭಾರತ ಮಂಟಪ
ದಿಲ್ಲಿಯ (Delhi) ಪ್ರಗತಿ ಮೈದಾನದಲ್ಲಿ ನಿರ್ಮಿಸಲಾದ ಇಂಟರ್‌ನ್ಯಾಷನಲ್ ಎಕ್ಸಿಬಿಷನ್ ಕಮ್ ಕನ್ವೆನ್ಷನ್ ಸೆಂಟರ್‌ನಲ್ಲಿ (International Exhibition Cum Convention Centre) ಜಿ20
ಸಮಾವೇಶ ಜರುಗಲಿದ್ದು, ಇಲ್ಲಿ ನಿರ್ಮಿಸಲಾಗಿರುವ ‘ಭಾರತ ಮಂಟಪ’ ಎಲ್ಲರ ಆಕರ್ಷಣೆಯು ಬಸವಣ್ಣನವರ ‘ಅನುಭವ ಮಂಟಪ’ದಿಂದ ಪ್ರೇರಿತವಾದ ಭಾರತ ಮಂಟಪವು ದೇಶದ ಅತಿ ದೊಡ್ಡ
ಸಮಾವೇಶ ಕೇಂದ್ರವಾಗಲಿದೆ.
‘ಭಾರತ ಮಂಟಪ’ ಇದನ್ನು ವಾಸ್ತುಶಿಲ್ಪಿ ಸಂಜಯ್ ಸಿಂಗ್ (Sanjay Singh) ಅವರು ‘ಭಾರತದ ಕಿಟಕಿ’ಯಂತೆ ವಿನ್ಯಾಸಗೊಳಿಸಿದ್ದಾರೆ. ಅಲ್ಲದೆ ಇದಕ್ಕೆ ತಗುಲಿರುವ ವೆಚ್ಚ ಬರೋಬ್ಬರಿ 750 ಕೋಟಿ
ರೂ. ಮಂಟಪದ ಪ್ರತಿ ಮಹಡಿಯಲ್ಲಿ ಮತ್ತು ಪ್ರತಿ ಕೊಠಡಿಯಲ್ಲಿ ಹಾಗೂ ಪ್ರತಿ ಸ್ಥಳದಲ್ಲಿ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯದ ಛಾಪು ಮೂಡಿಸಲಾಗಿದೆ. ಹಾಗೂ ಈ ಸಂಪೂರ್ಣ ಸಮಾವೇಶ
ಕೇಂದ್ರವನ್ನು 123 ಎಕರೆಗಳಲ್ಲಿ ಏರ್ಪಡಿಸಿದ್ದು ಇದು 26 ಫುಟ್ಬಾಲ್ (Football) ಆಟದ ಮೈದಾನದಷ್ಟು ದೊಡ್ಡದಾಗಿದೆ.

ಮಂಟಪದಲ್ಲಿ 7 ಹೊಸ ಪ್ರದರ್ಶನದ ಸಭಾಂಗಣ ನಿರ್ಮಿಸಲಾಗಿದ್ದು, 3ನೇ ಮಹಡಿಯಲ್ಲಿ ದೊಡ್ಡ ಸಭಾಂಗಣವಿದ್ದು ಇದರಲ್ಲಿ7 ಸಾವಿರ ಜನರು ಒಟ್ಟಿಗೆ ಕುಳಿತುಕೊಳ್ಳಬಹುದಾಗಿದೆ. ಇನ್ನು ಆಸ್ಪ್ರೇಲಿಯಾದ
ಸಿಡ್ನಿ (Sidney) ಒಪೇರಾ ಹೌಸ್‌ಗಿಂತ ದೊಡ್ಡದಾಗಿದೆ ಎಂದು ಹೇಳಲಾಗುತ್ತಿದೆ. ಕರ್ತವ್ಯ ಪಥ, ರಾಷ್ಟ್ರಪತಿ ಭವನ ಮತ್ತು ಇಂಡಿಯಾ ಗೇಟ್ (India Gate) ಇಲ್ಲಿಂದಲೇ ಗೋಚರಿಸಲಿದ್ದು,
ಈ ಕಟ್ಟಡವನ್ನು ಶಂಖದ ಆಕಾರದಲ್ಲಿ ವಿನ್ಯಾಸಗೊಳಿಸಲಾಗಿದೆ.
ಅಷ್ಟೇ ಅಲ್ಲದೆ 116 ದೇಶಗಳ ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಚಿಹ್ನೆ ‘ಸೂರ್ಯ ದ್ವಾರ’. ಭಾರತೀಯ ಬಾಹ್ಯಾಕಾಶ ವಿಜ್ಞಾನದ ಕಥೆಯನ್ನು ಹೇಳುವ ‘ಪ್ರಗತಿ ಚಕ್ರ’ವನ್ನು ಚಿತ್ರಿಸಲಾಗಿದೆ.
ಭಾರತ ಮಂಟಪವನ್ನು ಜಿ-20 ಶೃಂಗಸಭೆ ಬಳಿಕ ಸಾರ್ವಜನಿಕರಿಗೆ ನೋಡಲು ಅವಕಾಶ ನೀಡುವ ಸಾಧ್ಯತೆ ಇದೆ.
ವಿಶ್ವ ನಾಯಕರ ತಟ್ಟೆಯಲ್ಲಿ ಭಾರತದ ಸ್ಟ್ರೀಟ್ ಫುಡ್, ರಾಗಿ ಐಟಂ!
ಶೃಂಗಸಭೆಗಾಗಿ ಜಗತ್ತಿನಾದ್ಯಂತ 10 ಸಾವಿರಕ್ಕೂ ಹೆಚ್ಚು ಜನ ದಿಲ್ಲಿಗೆ ಆಗಮಿಸುತ್ತಿದ್ದು ಅಲ್ಲಿಗೆ ಬಂದವರಿಗೆ ರಾಗಿಯ ಬಗೆಬಗೆಯ ಸಿರಿಧಾನ್ಯಗಳ ತಿನಿಸುಗಳು ಮತ್ತು ಪಾನಿಪುರಿಯಂಥ
ಸ್ಟ್ರೀಟ್‌ಫುಡ್ (Streetfood) ವಿಶ್ವದ ದಿಗ್ಗಜರಿಗೆ ಉಣಬಡಿಸಲಿದೆ. ಬಗೆಬಗೆಯ ರಾಗಿ ದೋಸೆ, ರಾಗಿ ಲಾಡು, ಸಿರಿಧಾನ್ಯ ಥಾಲಿ, ಪಲಾವ್ (Palav), ಇಡ್ಲಿ ಅಲ್ಲದೆ ರಾಜಸ್ಥಾನದ ದಾಲ್ ಬಾಟಿ ಚುರ್ಮಾ,
ಬಂಗಾಳದ ರಸಗುಲ್ಲ, ಕರ್ನಾಟಕದ (Karnataka) ಮಸಾಲ ದೋಸೆ, ಬಿಹಾರದ ಲಿಟ್ಟಿ ಚೋಖಾ ಸೇರಿ ಹಲವು ತಿನಿಸುಗಳನ್ನು ಸಿದ್ಧಪಡಿಸಲಾಗುತ್ತದೆ.
ಲೆಫ್ಟ್ ಸೈಡ್ ಡ್ರೈವ್ ಕಾರುಗಳಿಗೆ ಬೇಡಿಕೆ!
ಸಾಮಾನ್ಯವಾಗಿ ಭಾರತದಲ್ಲಿ ಬಳಕೆಯಾಗುವುದ ರೈಟ್‌ಸೈಡ್ ಡ್ರೈವ್ ಕಾರುಗಳು (Right-side Drive Car) ಆದರೆ, ಅಮೆರಿಕ ಸೇರಿದಂತೆ ಸಾಕಷ್ಟು ರಾಷ್ಟ್ರಗಳಲ್ಲಿ ಸ್ಟೀರಿಂಗ್ ಎಡಭಾಗದಲ್ಲಿರುತ್ತದೆ.
ಇಂಥ ರಾಷ್ಟ್ರಗಳ ಅತಿಥಿಗಳನ್ನು ಸ್ವಾಗತಿಸುವುದಕ್ಕಾಗಿಯೇ ಲೆಫ್ಟ್ ಸೈಡ್ ಡ್ರೈವ್ ಕಾರುಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಬುಲೆಟ್ ಪ್ರೂಫ್ ಕಾರುಗಳನ್ನು (Bullet Proof Car) ಸಿಆರ್‌ಪಿಎಫ್‌ನ 450
ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದ್ದು. 41 ವಿದೇಶಿ ಅತಿಥಿಗಳಿಗಾಗಿ 60ಕ್ಕೂ ಹೆಚ್ಚು ಎಡಬದಿ ಡ್ರೈವ್ ಕಾರುಗಳನ್ನು ನಿಯೋಜಿಸಲಾಗಿದೆ. ಆಡಿ,ಮರ್ಸಿಡಿಸ್ ಮತ್ತು ಬಿಎಂಡಬ್ಲ್ಯೂನಂಥ (BMW) ಐಷಾರಾಮಿ
ಕಾರುಗಳೂ ಸಹ ಅತಿಥಿ ಸತ್ಕಾರಕ್ಕಾಗಿ ನಿಯೋಜಿಸಲಾಗಿದೆ.
ಬೆಳ್ಳಿ- ಚಿನ್ನಲೇಪಿತ ತಟ್ಟೆಗಳಲ್ಲಿ ಭೋಜನ
ಬೆಳ್ಳಿ ಹಾಗೂ ಚಿನ್ನಲೇಪಿತ ತಟ್ಟೆಗಳನ್ನು ಅತಿಥಿಗಳ ಭೋಜನದ ವೇಳೆ ಬಳಕೆಯಾಗಲಿದ್ದು ಮತ್ತು ಟೇಬಲ್‌ವೇರ್‌ಗಳಿಗೂ ಬೆಳ್ಳಿಯ ಲೇಪನ ಹಾಗೂ ಸ್ವಾಗತ ಪಾನೀಯಗಳನ್ನು ನೀಡಲು ಬಳಕೆಯಾಗುವ
ಗ್ಲಾಸ್‌ಗಳಿಗೂ, ಪ್ಲೇಟ್‌ಗಳಿಗೂ ಚಿನ್ನದ ಲೇಪನವಿರಲಿದೆ. 15000 ಕ್ಕೂ ಹೆಚ್ಚು ಸಿಲ್ವರ್‌ವೇರ್‌ಗಳನ್ನು(Silverware) ಸುಮಾರು 200 ಕುಶಲಕರ್ಮಿಗಳು ವಿನ್ಯಾಸಗೊಳಿಸಿದ್ದಾರೆ. ಕರ್ನಾಟಕ,
ಉತ್ತರ ಪ್ರದೇಶ (Uttara Pradesh),ಪಶ್ಚಿಮ ಬಂಗಾಳ, ಜೈಪುರ (Jaipur), ಮುಂತಾದ ರಾಜ್ಯಗಳ ಕುಶಲಕರ್ಮಿಗಳು ಇದನ್ನು ರೂಪಿಸಿದ್ದಾರೆ. ಇವುಗಳ ತಯಾರಿಕೆಗೆ 50,000 ಖರ್ಚು
ಮಾಡಲಾಗಿದೆ ಎಂದು ತಿಳಿದು ಬಂದಿದೆ .
ಇದನ್ನು ಓದಿ: ಸಿಹಿ ಸುದ್ದಿ: ಶಕ್ತಿಯೋಜನೆ ಇನ್ನಷ್ಟು ಬಲತುಂಬಲು 1000 ಹೊಸ ಬಸ್ ಖರೀದಿಗೆ ಮುಂದಾದ ಸರ್ಕಾರ
- ಮೇಘಾ ಮನೋಹರ ಕಂಪು