Visit Channel

ಆಗಸ್ಟ್ 12ಕ್ಕೆ ಪ್ರೇಕ್ಷಕರ ಎದುರು ಹಾರಾಡಲು ಸಜ್ಜಾದ, ಗೋಲ್ಡನ್ ಸ್ಟಾರ್ ಅಭಿನಯದ ಗಾಳಿಪಟ- 2

Gaalipata 2

ಗೋಲ್ಡನ್ ಸ್ಟಾರ್(Golden Star) ಗಣೇಶ್(Ganesh) ಅಭಿನಯದ ಬಹುನಿರೀಕ್ಷಿತ ಸಿನಿಮಾ “ಗಾಳಿಪಟ 2”(Gaalipata 2) ಬಿಡುಗಡೆಯಾಗಲು ಸಜ್ಜಾಗಿದ್ದು, ಈಗಾಗಲೇ ಕೌಂಟ್‌ಡೌನ್‌ ಶುರುವಾಗಿದೆ. ಇತ್ತೀಚಿಗಷ್ಟೇ ಹ್ಯಾಟ್ರಿಕ್‌ ಹೀರೋ ಡಾ. ಶಿವರಾಜ್‌ ಕುಮಾರ್‌(Dr. Shivarajkumar), ರಿಯಲ್‌ ಸ್ಟಾರ್‌ ಉಪೇಂದ್ರ(Upendra) ಮತ್ತು ನಟ ರಮೇಶ್ ಅರವಿಂದ್(Ramesh Aravind) ಅವರು ‘ಗಾಳಿಪಟ 2’ ಸಿನಿಮಾದ ಟ್ರೇಲರ್(Trailer) ರಿಲೀಸ್ ಮಾಡಿದರು. ಟ್ರೇಲರ್ ರಿಲೀಸ್ ಆಗಿ ಕೆಲ ಸಮಯದಲ್ಲೇ ಮಿಲಿಯನ್‌ ಗಟ್ಟಲೆ ವೀಕ್ಷಣೆ ಪಡೆದುಕೊಂಡಿತ್ತು.

Gaalipata 2

ಟ್ರೇಲರ್ ನೋಡಿದ ಗಣೇಶ್ ಅಭಿಮಾನಿಗಳು, ಬೆಳ್ಳಿತೆರೆಯ ಮೇಲೆ ಯಾವಾಗ ಸಿನಿಮಾ ನೋಡುತ್ತೇವೋ ಎಂಬ ನಿರೀಕ್ಷೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಆಗಸ್ಟ್ 12ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ತಿಳಿಸಿದೆ.
ಯೋಗರಾಜ್ ಭಟ್(Yograj Bhat) ನಿರ್ದೇಶನದ ‘ಗಾಳಿಪಟ 2’ ಸಿನಿಮಾ ಬಗ್ಗೆ ಸಿನಿಪ್ರೇಕ್ಷಕರು ಸೇರಿದಂತೆ ಅಭಿಮಾನಿಗಳಲ್ಲಿ ಬಹಳಷ್ಟು ನಿರೀಕ್ಷೆಯಿದೆ. ‘ಗೋಲ್ಡನ್ ಸ್ಟಾರ್’ ಗಣೇಶ್, ದಿಗಂತ್ ಮಂಚಾಲೆ, ಪವನ್ ಕುಮಾರ್ ಸೇರಿದಂತೆ ಮುಂತಾದ ಕಲಾವಿದರು ಜುಲೈ 31 ರಂದು ಬೆಂಗಳೂರಿನಲ್ಲಿ ನಡೆದ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್ ಕಾರ್ಯಕ್ರಮಕ್ಕೆ ಹಾಜರಾಗಿದ್ದರು.

ಈ ಕಾರ್ಯಕ್ರಮಕ್ಕೆ ಅನೇಕ ಗಣ್ಯರು ಹಾಜರಿದ್ದರು, ಜೊತೆಗೆ ಸಿನಿಮಾ ಬಗ್ಗೆ ಚಿತ್ರತಂಡದವರು ಅನೇಕ ಇಂಟರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡರು. ಈಗಾಗಲೇ ಈ ಚಿತ್ರದ ನಾಲ್ಕು ಹಾಡುಗಳು ಯೂಟ್ಯೂಬ್‌ನಲ್ಲಿ ಬಿಡುಗಡೆಗೊಂಡು, ಅಪಾರ ಜನಪ್ರಿಯತೆ ಪಡೆದಿವೆ. ಚಿತ್ರದ ಟ್ರೇಲರ್ ಕೂಡ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಗಳ ಸುರಿಮಳೆ ಹರಿದುಬಂದಿದೆ. ಈ ಹಿಂದೆ ಚಿತ್ರತಂಡ ಚಿತ್ರವನ್ನು ಜೂನ್ ತಿಂಗಳಿನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿತ್ತು.

Cinema

ಇದೀಗ, ನಟ ಗಣೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿ, “ಗೆಟ್ ರೆಡಿ ಟು ಫ್ಲೈ ಆನ್ ಆಗಸ್ಟ್ 12. ಮಾರ್ಕ್ ದ ಡೇಟ್” ಎಂದು ಬರೆದುಕೊಂಡಿದ್ದಾರೆ. ಈ ಹಿಂದೆ ಯೋಗರಾಜ್ ಭಟ್‌ ಹಾಗೂ ಗಣೇಶ್‌ ಕಾಂಬಿನೇಶನ್‌ನಲ್ಲಿ ಬಿಡುಗಡೆಯಾಗಿದ್ದ “ಗಾಳಿಪಟ’ ಚಿತ್ರ ಬ್ಲಾಕ್ ಬಸ್ಟರ್ ಹಿಟ್‌ ಆಗಿತ್ತು. ಈಗ ಮತ್ತೆ ಗಾಳಿಪಟ 2 ನಲ್ಲಿ ಇವರಿಬ್ಬರೂ ಜೊತೆಯಾಗಿದ್ದು, ಚಿತ್ರ ಅದ್ಧೂರಿಯಾಗಿ ಮೂಡಿಬಂದಿದೆ ಎನ್ನಲಾಗಿದೆ. ಗಣೇಶ್‌, ದಿಗಂತ್‌ ಹಾಗೂ ಪವನ್‌ ಕುಮಾರ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಸಂಯುಕ್ತಾ, ನಿಶ್ವಿ‌ಕಾ ನಾಯ್ಡು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.

ರಂಗಾಯಣ ರಘು, ಅನಂತ್‌ ನಾಗ್‌ ಕೂಡಾ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ನೀಡಿದ್ದಾರೆ. ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣವಿದೆ. ರಮೇಶ್ ರೆಡ್ಡಿ ಅವರ ಸೂರಜ್ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಚಿತ್ರದ ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕುಗಳನ್ನು ಕ್ರಮವಾಗಿ ಜೀ ಕನ್ನಡ ಮತ್ತು ಜೀ 5ಗೆ ಭಾರಿ ಮೊತ್ತಕ್ಕೆ ಮಾರಾಟ ಮಾಡಲಾಗಿದೆ ಎಂಬುದು ಸದ್ಯ ದೊರೆತಿರುವ ಮಾಹಿತಿ.

  • ಪವಿತ್ರ

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.