download app

FOLLOW US ON >

Wednesday, June 29, 2022
Breaking News
ಬಿಜೆಪಿ ಅಂದ್ರೆ ಬಿಸ್ನೆಸ್ ಕ್ಲಾಸಿನ ಕಾಮಧೇನು : ಹೆಚ್.ಡಿಕೆಚಾಮುಂಡೇಶ್ವರಿ ಅಮ್ಮನವರ ಆಷಾಢ ಶುಕ್ರವಾರದ ದರ್ಶನಕ್ಕೆ ಉಚಿತ ಸರ್ಕಾರಿ ಬಸ್ ಸೇವೆಮಂಡ್ಯ ಜನರಿಗಾಗಿ ಮಾತ್ರ ನಾನು ರಾಜಕೀಯಕ್ಕೆ ಬಂದಿದ್ದೇನೆ ; ಸುಮಲತಾಕನ್ಹಯ್ಯಾ ಹತ್ಯೆ ; ಹಿಂಸೆ ಪರಿಹಾರ ಅಲ್ಲ, ಉತ್ತರವೂ ಅಲ್ಲ : ಸಿದ್ದರಾಮಯ್ಯನೂಪುರ್ ಶರ್ಮಾ ಹೇಳಿಕೆಗೆ ಬೆಂಬಲ ನೀಡಿದ ವ್ಯಕ್ತಿಯ ಶಿರಚ್ಛೇದ‘ಅಗ್ನಿವೀರ’ ಹುದ್ದೆಗೆ ನಿರೀಕ್ಷೆಗೂ ಮೀರಿ ಬಂದ ಅರ್ಜಿಗಳು40% ಕಮಿಷನ್ ಆರೋಪ : ಗುತ್ತಿಗೆದಾರರ ಸಂಘದಿಂದ ವರದಿ ಕೇಳಿದ ಗೃಹ ಸಚಿವಾಲಯಏಷ್ಯಾ ಖಂಡದಲ್ಲೇ ಮೊಟ್ಟ ಮೊದಲ ವಿದ್ಯುತ್ ದಾರಿದೀಪ ಅಳವಡಿಸಲ್ಪಟ್ಟ ನಗರ ‘ನಮ್ಮ ಬೆಂಗಳೂರು’‘ಸಿದ್ದರಾಮೋತ್ಸವ’ಕ್ಕೆ ರಾಹುಲ್ ಗಾಂಧಿಯನ್ನು ಆಹ್ವಾನಿಸಲು ಸಿದ್ದರಾಮಯ್ಯ ನಿರ್ಧಾರಜುಬೇರ್‍ಗೆ ಬೆಂಬಲ : ಎತ್ತ ಸಾಗುತ್ತಿದೆ ರಾಹುಲ್ ಗಾಂಧಿ ಆಲೋಚನೆ
English English Kannada Kannada

ಗಜಾನನ & ಗ್ಯಾಂಗ್ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ಶ್ರೀ ಮಹದೇವ್!

ಶ್ರೀಮಹದೇವ್(Sri Mahadev) ನಾಯಕರಾಗಿ ನಟಿಸಿರುವ ಗಜಾನನ & ಗ್ಯಾಂಗ್(Gajanana & Gang) ಸಿನಿಮಾ ಇಂದು ರಾಜ್ಯಾದ್ಯಂತ ಬರೋಬ್ಬರಿ 300ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ತೆರೆ ಕಂಡಿದೆ.
GG

ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಹೆಂಗೆಳೆಯರ ಮನಸ್ಸು ಗೆದ್ದಿದ್ದ ಶ್ರೀಮಹದೇವ್(Sri Mahadev) ನಾಯಕರಾಗಿ ನಟಿಸಿರುವ ಗಜಾನನ & ಗ್ಯಾಂಗ್(Gajanana & Gang) ಸಿನಿಮಾ ಇಂದು ರಾಜ್ಯಾದ್ಯಂತ ಬರೋಬ್ಬರಿ 300ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ತೆರೆ ಕಂಡಿದೆ.

Gajanana gang


‘ಗಜಾನನ & ಗ್ಯಾಂಗ್’ ಟೈಟಲ್ ಹೇಳುವಂತೆ ಕಾಲೇಜ್ ಕಥೆಯಾಧಾರಿತ ಸಿನಿಮಾ. ಕಾಮಿಡಿ, ಸೆಂಟಿಮೆಂಟ್ ಕೂಡ ಜೊತೆಗೆ ರೌಡಿಸಂ ಕೂಡ ಈ ಸಿನಿಮಾದಲ್ಲಿದೆ. ಚಿತ್ರದಲ್ಲಿ ಶ್ರೀಮಹದೇವ್ ಡಬಲ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ‘ಗಜ’ ಎಂಬ ಪಾತ್ರದಲ್ಲಿ ಶ್ರೀ ನಟಿಸಿದ್ದರೆ, ಅದಿತಿ ಪ್ರಭುದೇವ(Aditi Prabhudeva) ಮಿಡಲ್ ಕ್ಲಾಸ್ ಕಾಲೇಜು ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ‘ನಮ್ ಗಣಿ ಬಿಕಾಂ ಪಾಸ್‌’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ನಿರ್ದೇಶಕ ಹಾಗೂ ನಟ ಅಭಿಷೇಕ್‌ ‘ಗಜಾನನ ಅಂಡ್ ಗ್ಯಾಂಗ್’ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ನಿರ್ದೇಶನದ ಜತೆಗೆ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಸತತ ಎರಡು ವರ್ಷಗಳ ಪರಿಶ್ರಮದ ಕನಸು ಗಜಾನನ ಗ್ಯಾಂಗ್ ಸಿನಿಮಾ ಟ್ರೈಲರ್ ಮೂಲಕವೇ ಸದ್ದು ಮಾಡಿತ್ತು. ಟ್ರೇಲರ್ ಹಾಗೂ ಸಾಂಗ್ ಮೂಲಕ ಕ್ಯೂರಿಯಾಸಿಟಿ ಹುಟ್ಟಿಸಿರುವ ಗಜಾನನ ಗ್ಯಾಂಗ್ ಸಿನಿಮಾಗಾಗಿ ಚಿತ್ರಪ್ರೇಮಿಗಳು ಕುತೂಹಲದಿಂದ ಕಾಯ್ತಿದ್ದಾರೆ.
ಬೃಂದಾವನ್ ಎಂಟರ್ ಪ್ರೈಸಸ್ ಅಡಿಯಲ್ಲಿ ಯು ಎಸ್ ನಾಗೇಶ್ ಕುಮಾರ್ ‘ಗಜಾನನ & ಗ್ಯಾಂಗ್’ ಸಿನಿಮಾಕ್ಕೆ ಬಂಡವಾಳ ಹೂಡಿದ್ದು, ಪ್ರದ್ಯುತನ್ ಮ್ಯೂಸಿಕ್. ಉದಯ ಲೀಲಾ ಕ್ಯಾಮೆರಾ ವರ್ಕ್, ವಿಜೆಟ್ ಚಂದ್ರ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನವಿದೆ.

Sandalwood

ಉಳಿದಂತೆ ಬಿಗ್ ಬಾಸ್ ಖ್ಯಾತಿಯ ರಘು ಗೌಡ, ಶಮಂತ್ ಬ್ರೊ ಗೌಡ, ಚೇತನ್ ದುರ್ಗ, ನಾಟ್ಯ ರಂಗ, ಅಶ್ವಿನ್ ಹಾಸನ್, ಸ್ವಾತಿ, ‘ಸಲಗ’ ‘ಟಗರು’ ಖ್ಯಾತಿಯ ಸಂಭಾಷಣೆಕಾರ ಮಾಸ್ತಿ ಕೂಡ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿರುವ ಹಾಸ್ಯಮಿಶ್ರಿತ ಸಂಭಾಷಣೆಗಳು ನೋಡುಗರನ್ನು ಹಿಡಿದಿಡುತ್ತವೆ, ಹಾಗೆ ಸೆಂಟಿಮೆಂಟ್ ದೃಶ್ಯಗಳು ಪ್ರೇಕ್ಷಕರ ಮನಕಲುಕುವಲ್ಲಿ ಯಶಸ್ವಿಯಾಗಿವೆ. ಒಟ್ಟಾರೆ ಕುಟುಂಬ ಸಮೇತ ಕುಳಿತು ನೋಡಬಹುದಾದ ಸಿನಿಮಾವಾಗಿದೆ ‘ಗಜಾನನ ಅಂಡ್ ಗ್ಯಾಂಗ್’.

Share News on

Share on facebook
Facebook
Share on google
Google+
Share on twitter
Twitter
Share on linkedin
LinkedIn
Share on whatsapp
WhatsApp
error: Content is protected !!

Submit Your Article