- ವಾಹನಗಳು ಸಂಚರಿಸುತ್ತಿದ್ದಾಗಲೇ ದಿಢೀರ್ ಎಂದು (Gambhira Bridge Collapse News) ಕುಸಿದ ಸೇತುವೆ
- ಮುಕ್ಕಾಲು ಕಿಮೀಗಿಂತಲೂ ಹೆಚ್ಚು ಉದ್ದದ ಸೇತುವೆ ಕುಸಿತ
- ಸಮರೋಪಾದಿಯಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆ
Vadodara: ಗುಜರಾತ್‌ನ ವಡೋದರಾ ಜಿಲ್ಲೆಯಲ್ಲಿ ವಡೋದರಾ ಹಾಗೂ ಆನಂದ್ (Anand) ಸಂಪರ್ಕಿಸುವ ಗಂಭೀರ ಸೇತುವೆ ಕುಸಿದ ಪರಿಣಾಮ 9 ಮಂದಿ ಸಾವನ್ನಪ್ಪಿದ್ದು, ಹಲವರು ನಾಪತ್ತೆಯಾಗಿದ್ದಾರೆ ಎಂದು ಆರೋಗ್ಯ ಸಚಿವ ಋಷಿಕೇಶ ಪಟೇಲ್ ತಿಳಿಸಿದ್ದಾರೆ.

ಈ ಸೇತುವೆಯು 1985ರಲ್ಲಿ ನಿರ್ಮಾಣಗೊಂಡಿತ್ತು. ಇದರ ನಿರ್ವಹಣೆಯೂ ಆಯಾ ಕಾಲಕ್ಕೆ ನಡೆದಿದೆ. ದುರಂತಕ್ಕೆ ಕಾರಣವೇನು ಎಂಬುದನ್ನು ಪತ್ತೆ ಮಾಡಲು ತನಿಖೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.
ಬೆಳಗ್ಗೆ 7:30ರ ಸುಮಾರಿಗೆ ‘ಗಂಭೀರಾ ಸೇತುವೆ’ಯ ಸ್ಲ್ಯಾಬ್ಬ್ ಕುಸಿದಿದೆ. ಪರಿಣಾಮ ಈ ಬ್ರಿಡ್ಜ್ ಮೇಲೆ ಸಂಚರಿಸುತ್ತಿದ್ದ ಎರಡು ಟ್ರಕ್, ವ್ಯಾನ್‌ಗಳು ಸೇರಿದಂತೆ ಐದರಿಂದ ಆರು ವಾಹನಗಳು ಮಹಿಸಾಗರ್ ನದಿಗೆ (Mahisagar River) ಬಿದ್ದಿವೆ.
ಘಟನೆಯಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದಾರೆ. ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಆದರೆ ಸ್ಥಳೀಯರು ಹೇಳುವುದೇ ಬೇರೆ ಗಂಭೀರಾ ಸೇತುವೆ ಬಹಳ ಹಿಂದಿನಿಂದಲೂ (Gambhira Bridge Collapse News) ಅಪಾಯಕಾರಿ ಶಿಥಿಲಾವಸ್ಥೆಯಲ್ಲಿತ್ತು.
ಸ್ಥಳೀಯರು ಅದರ ಶಿಥಿಲಾವಸ್ಥೆಯ ಬಗ್ಗೆ ಪದೇ ಪದೇ ಎಚ್ಚರಿಕೆ ನೀಡಿ ತುರ್ತು ದುರಸ್ತಿ ಅಥವಾ ಹೊಸ ಸೇತುವೆ ನಿರ್ಮಾಣಕ್ಕೆ ಮನವಿ ಮಾಡುತ್ತಿದ್ದರು, ಆದರೆ ಅವರ ಎಚ್ಚರಿಕೆಗಳನ್ನು ನಿರ್ಲಕ್ಷಿಸಲಾಗಿತ್ತು.
ಇಂದು ಸೇತುವೆ ಕುಸಿದಿದ್ದರಿಂದ ಆನಂದ್, ವಡೋದರಾ, ಭರೂಚ್ ಮತ್ತು ಅಂಕಲೇಶ್ವರವನ್ನು ಸೌರಾಷ್ಟ್ರಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆಗಳು ಕಡಿದುಹಾಕಿದೆ, ಇದು ಪ್ರಾದೇಶಿಕ ಸಾರಿಗೆ ಮತ್ತು ವಾಣಿಜ್ಯ ಸಾರಿಗೆ ಸಂಚಾರವನ್ನು ನಿಷ್ಕ್ರಿಯಗೊಳಿಸಿದೆ.
ಸೇತುವೆಯ ಮೇಲಿನ ಸಂಚಾರದ ಪ್ರಮಾಣವನ್ನು ಪರಿಗಣಿಸಿ, ಸಿಎಂ ಮೂರು ತಿಂಗಳ ಹಿಂದೆ 212 ಕೋಟಿ ರೂ.ಗಳ ಹೊಸ ಸೇತುವೆಗೆ ಅನುಮೋದನೆ ನೀಡಿದ್ದರು.
ಹೊಸ ಸೇತುವೆಯ ವಿನ್ಯಾಸ ಮತ್ತು ಟೆಂಡರ್ ಕಾರ್ಯ ಈಗಾಗಲೇ ಪ್ರಾರಂಭವಾಗಿತ್ತು. ಘಟನೆಯ ನಂತರ, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ (Bupendra Patel) ಅವರು ತಕ್ಷಣವೇ ಮುಖ್ಯ
ಎಂಜಿನಿಯರ್, ಸೇತುವೆ ವಿನ್ಯಾಸ ತಂಡ ಮತ್ತು ತಜ್ಞರನ್ನು ಸ್ಥಳಕ್ಕೆ ರವಾನಿಸಿ ವಿವರವಾದ ವರದಿಯನ್ನು ನೀಡುವಂತೆ ಆದೇಶಿಸಿದ್ದಾರೆ.
ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF) ತಂಡವು ರಕ್ಷಣಾ ಸಾಧನಗಳೊಂದಿಗೆ ಘಟನಾ ಸ್ಥಳಕ್ಕೆ ತೆರಳಿದೆ.
ಇದನ್ನು ಓದಿ : ಇಂದಿನಿಂದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ ಎಚ್ಚರಿಕೆ: ಯೆಲ್ಲೋ ಅಲರ್ಟ್ ಘೋಷಣೆ