Bengaluru : 100 ದಿನ ಪೂರೈಸಿತು ಅಪ್ಪು ಕನಸಿನ ʻಗಂಧದಗುಡಿ’(Gandhada Gudi). ಪುನೀತ್ ರಾಜ್‌ಕುಮಾರ್ ನಿಧನದ ನಂತರ ಬಿಡುಗಡೆಯಾದ ಈ ಡಾಕ್ಯುಮೆಂಟರಿ ಚಿತ್ರ ಅಬಿಮಾನಿಗಳ(Gandhadagudi completed 100 days) ಅಭಿಮಾನದಿಂದಾಗಿ ನೂರು ದಿನ ಪೂರೈಸಿದೆ.
ಈ ಭಾವನಾತ್ಮಕ ಕ್ಷಣವನ್ನು ‘ನಿಜವಾದ ನಾಯಕನ ಗಂಧದಗುಡಿ ಪಯಣ ಎಂದು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್(Power Star Punith Rajkumar) ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್(Ashwini Punith Rajkumar) ಅವರು ತಮ್ಮ ಫೇಸ್‌ಬುಕ್ ಮುಖಪುಟದಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.
ಕನ್ನಡಿಗರ ನೆಚ್ಚಿನ, ಅಚ್ಚುಮೆಚ್ಚಿನ ಪರಮಾತ್ಮ, ಅಪ್ಪು ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಇಂದಿಗೂ ನಮ್ಮೊಂದಿಗೆ ಎಲ್ಲಾ ಕೆಲಸ ಕಾರ್ಯಗಳಲ್ಲಿ ಜೊತೆಯಾಗಿದ್ದಾರೆ ಎಂದು ಅಭಿಮಾನಿಗಳು ನಂಬಿ ಬದುಕುತ್ತಿದ್ದಾರೆ.
ಪುನೀತ್ ರಾಜ್‌ಕುಮಾರ್ ಅವರ ಮೇಲಿರುವ ಅಭಿಮಾನ, ಪ್ರೀತಿ ಕನ್ನಡಿಗರಲ್ಲಿ ಕಿಂಚಿತ್ತು ಕಡಿಮೆಯಾಗಿಲ್ಲ ಎಂಬುದಕ್ಕೆ ಕರುನಾಡಲ್ಲಿ ನಡೆಯುತ್ತಿರುವ ಅನೇಕ ಕೆಲಸಗಳು, ಸಾಮಾಜಿಕ ಕಾರ್ಯಕ್ರಮಗಳೇ ಸಾಕ್ಷಿಯಾಗಿವೆ.
ಪವರ್ ಸ್ಟಾರ್(Power Star) ಅವರ ಆರಂಭದ ಸಿನಿಮಾದಿಂದ ಅವರ ಕೊನೆಯ ಸಿನಿಮಾ ಗಂಧದಗುಡಿ ಚಿತ್ರವನ್ನು ಅಭಿಮಾನಿಗಳು,
ಕನ್ನಡಿಗರು ಹಬ್ಬದ ರೀತಿಯಲ್ಲಿ ಸಂಭ್ರಮಿಸಿ, ಸಿಹಿ ಹಂಚಿರುವ ಸಂದರ್ಭವನ್ನು ಒಂದು ಬಾರಿ ಅಲ್ಲ, ಅನೇಕ ಬಾರಿ ನೋಡಿದ್ದೇವೆ.
ಸದ್ಯ ಅದೇ ರೀತಿಯಲ್ಲಿ ಅಪ್ಪು ಅವರ ಕನಸಿನ ಚಿತ್ರ, ಕಡೆಯ ಡಾಕ್ಯೂಮೆಂಟರಿ ಸಿನಿಮಾ(Documentary Movie) ಗಂಧದ ಗುಡಿ ಇದೀಗ ಶತದಿನೋತ್ಸವವನ್ನು ಪೂರೈಸಿದೆ ಎಂದು ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಗಳು ಅಭಿಮಾನದಿಂದ ನುಡಿದಿದ್ದಾರೆ.
ಪವರ್ ಸ್ಟಾರ್ ಅವರ ಗಂಧದ ಗುಡಿ ಚಿತ್ರ ಎಲ್ಲಾ ಚಿತ್ರದಂತೆ ಮನರಂಜನೆಯ ಅಂಶವನ್ನು ಒಳಗೊಂಡಿದ್ದಕ್ಕಿಂತ ಹೆಚ್ಚಾಗಿ ಆಗಾಧ(Gandhadagudi completed 100 days) ಜೀವರಾಶಿ, ಅರಣ್ಯ ಸಂಪತ್ತು,
ಪ್ರಕೃತಿ ವಿಸ್ಮಯಗಳ ಬಗ್ಗೆ ಚಿತ್ರಿಸಿದ ಡಾಕ್ಯೂಮೆಂಟರಿ ಚಿತ್ರವಾಗಿತ್ತು. ಈ ಚಿತ್ರದಲ್ಲಿ ಅಭಿಮಾನಿಗಳ ನೆಚ್ಚಿನ ಆಕ್ಷನ್, ಡ್ಯಾನ್ಸರ್ ಪವರ್‌ಸ್ಟಾರ್ ಆಗದೆ,
ನಿಜ ಜೀವನದಲ್ಲಿ ಇದ್ದ ಪ್ರೀತಿಯ ಅಪ್ಪು ಆಗಿಯೇ, ಪ್ರಾಣಿ ಪ್ರೇಮಿ, ಪ್ರಕೃತಿ ಕಾಳಜಿ ಇರುವ ಮಗುವಿನಂತೆ ಕಾಣಿಸಿಕೊಂಡರು.
ಈ ಕಾರಣವೇ ಅವರ ಅಭಿಮಾನಿಗಳು ಹಾಗೂ ಕನ್ನಡಿಗರ ಮನವನ್ನು ಹೆಚ್ಚು ಭಾವುಕರನ್ನಾಗಿ ಮಾಡಿಸಿತು, ಈ ಸಿನಿಮಾವನ್ನು ಅವರಿಗಾಗಿ ಪದೇ ಪದೇ ನೋಡುವಂತೆ ಮಾಡಿತು.
ಅಭಿಮಾನಿಗಳ ಪ್ರೀತಿಯ ಪವರ್‌ಸ್ಟಾರ್ ಅವರ ಕೊನೆಯ ಸಿನಿಮಾ ಗಂಧದ ಗುಡಿ ಇದೀಗ ಬಿಡುಗಡೆಯಾಗಿ 100 ದಿನಗಳನ್ನು ಪೂರೈಸಿದೆ. ಈ ಸುದ್ದಿ ಕೇಳಿದ ಅಭಿಮಾನಿಗಳು ಭಾರಿ ಸಂತಸ ವ್ಯಕ್ತಪಡಿಸಿದ್ದು,
ಸಾಮಾಜಿಕ ಜಾಲತಾಣದಲ್ಲಿ(Social Media) ಗಂಧದ ಗುಡಿ ಹಾಗೂ ಪುನೀತ್ ರಾಜ್‌ಕುಮಾರ್ ಅವರಿಗೆ ಜೈಕಾರ ಹಾಕುತ್ತಿರುವ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ.
ಅಪ್ಪು ಅವರ ಕನಸಿನ ಗಂಧದ ಗುಡಿ ಚಿತ್ರ ೧೦೦ ದಿನ ಪೂರೈಸಿದ ಹಿನ್ನಲೆ ವಿಶೇಷ ವೀಡಿಯೊ ಮುಖೇನ ಅಶ್ವಿನಿ ಪುನೀತ್ ರಾಜ್‌ಕುಮಾರ್
ಅವರು ಪಿಆರ್‌ಕೆ ಸ್ಟುಡಿಯೋ(PRK Studio) ಪುಟದಲ್ಲಿ Gandada Gudi 100 Days : ನಿಜವಾದ ನಾಯಕನ ಗಂಧದಗುಡಿ ಪಯಣ ಎಂಬ ಶೀರ್ಷಿಕೆಯನ್ನು ಕೊಟ್ಟು ಬಿಡುಗಡೆಗೊಳಿಸಿದ್ದಾರೆ.
ಈ ಚಿತ್ರದಲ್ಲಿ ಅಪ್ಪು ಅವರ ಪ್ರಕೃತಿ ಕಾಳಜಿಯನ್ನು ಕೊಂಡಾಡಿದ ಅಭಿಮಾನಿಗಳು, ಪುನೀತ್ ರಾಜ್‌ಕುಮಾರ್ ಅವರು ಈ ಚಿತ್ರವನ್ನು ತಮ್ಮ ಕನಸಿನ ಚಿತ್ರ ಎಂದು ನಿರ್ಧರಿಸಿ,
ಅದಕ್ಕೆ ಎಂದು ಪಟ್ಟ ಶ್ರಮವನ್ನು ಎಂದಿಗೂ ಅಭಿಮಾನಿಗಳು, ಕನ್ನಡಿಗರು ಸ್ಮರಿಸುತ್ತಾರೆ.
ಅಪ್ಪು ಅವರ ಕನಸಿನ ಚಿತ್ರ ಗಂಧದ ಗುಡಿಯನ್ನು ಶತದಿನೋತ್ಸವ ಕಾಣುವಂತೆ ಮಾಡಿದ ಕನ್ನಡಿಗರಿಗೆ ಅಶ್ವಿನಿ ಪುನೀರ್ ರಾಜ್‌ಕುಮಾರ್ ಅವರು ಧನ್ಯವಾದ ತಿಳಿಸಿದ್ದಾರೆ.
ಪಿಆರ್‌ಕೆ ಸ್ಟುಡಿಯೋ ಮುಖಪುಟದಲ್ಲಿ, 100 ದಿನಗಳನ್ನು ಪೂರೈಸಿದ ನಿಜವಾದ ನಾಯಕನ ಗಂಧದಗುಡಿ ಪಯಣ ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಬರೆದು ಟ್ವೀಟ್(Tweet) ಮಾಡಿದ್ದಾರೆ.