- ಶೇ.70ರಷ್ಟು ಬೆಂಗಳೂರಿಗರಿಗೆ ಕಾವೇರಿ ನೀರು ಪೂರೈಕೆ (Gangarathi to Cauvery in Sankitanki)
- ಬೆಂಗಳೂರಿನಲ್ಲೇ ಅತಿ ಸ್ವಚ್ಛವಾಗಿರುವ ಕೆರೆ ಸ್ಯಾಂಕಿ ಟ್ಯಾಂಕ್
- ನೀರಿಲ್ಲದಿರುವಾಗ ಇವೆಲ್ಲಾ ಬೇಡವಾಗಿತ್ತು ಎಂದ ಬೆಂಗಳೂರಿಗರು
Bengaluru: ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆಯುವ ಗಂಗಾ ಆರತಿ (Ganga Aarti) ವಿಶ್ವದೆಲ್ಲೆಡೆ ಪರಿಚಿತ. ಆ ಮಾದರಿಯಲ್ಲಿಯೇ ಮಲ್ಲೇಶ್ವರಂನ ಸ್ಯಾಂಕಿ ಟ್ಯಾಂಕ್ (Sankey Tank) ಕೆರೆಯಲ್ಲಿ ಕಾವೇರಿ ಆರತಿ (Kaveri Aarti) ಮಾಡುವ ಕಾರ್ಯಕ್ರಮ ಆಯೋಜಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಮುಂದಾಗಿದೆ.
ಶೇ.70ರಷ್ಟು ಬೆಂಗಳೂರಿಗರಿಗೆ ಕಾವೇರಿ ನೀರು (Cauvery water) ಪೂರೈಕೆ ಮಾಡಲಾಗುತ್ತಿದೆ. ದಿನಕ್ಕೆ 2,225 ಮಿಲಿಯನ್ ಲೀಟರ್ನಷ್ಟು ನೀರು ಬೆಂಗಳೂರಿಗೆ ಸರಬರಾಜು ಆಗುತ್ತಿದೆ. ಇಂತಹ ಬಿರು ಬಿಸಿಲು ಬೇಸಿಗೆಯಲ್ಲು (Sunny summer) ನೀರು ಒದಗಿಸುತ್ತಿರುವ ಜೀವನದಿಗೆ ಗೌರವ ಸಲ್ಲಿಸಲು ಸರ್ಕಾರ (Govt) ಮುಂದಾಗಿದೆ.ಅದಲ್ಲದೆ ಈ ಕಾರ್ಯಕ್ರಮವೂ ಗಿನ್ನಿಸ್ ದಾಖಲೆ (Guinness World Records) ಮಾಡುವ ನಿಟ್ಟಿನಲ್ಲಿ ಜಲಮಂಡಲಿ ಎಲ್ಲ ಸಿದ್ಧತೆ ಮಾಡಿಕೊಳ್ಳಲು ಮುಂದಾಗಿದೆ.
ಕಾವೇರಿ ಆರತಿ ಮಾಡುವ ಬಗ್ಗೆ ಇತ್ತೀಚೆಗೆ ವಾರಣಾಸಿಗೆ ತೆರಳಿ ಸಚಿವ ಚಲುವರಾಯಸ್ವಾಮಿ (Chaluvarayaswamy) ತಂಡ ಅಧ್ಯಯನ ಮಾಡಿದ್ದರು. ಈ ವಿಶೇಷ ಸಂಭ್ರಮಕ್ಕೆ ಉತ್ತರ ಪ್ರದೇಶದಿಂದ ವಿಮಾನದಲ್ಲಿ ಪುರೋಹಿತರನ್ನು ಕರೆತರಲಾಗುತ್ತಿದೆ.

ಕಾವೇರಿ ಆರತಿ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಭಾಗಿಯಾಗುವ ಸಾಧ್ಯತೆ ಇದೆ. ಆರತಿ ಬೆಳಗುವ ದೃಶ್ಯಾವಳಿಗಳನ್ನು LED ಟಿವಿಗಳಲ್ಲಿ ವೀಕ್ಷಿಸುವ ಅವಕಾಶ ಇರಲಿದೆ. ಜೊತೆಗೆ ಕೆರೆಯ ಸುತ್ತಮುತ್ತ ಲೈಟಿಂಗ್ಸ್ ವ್ಯವಸ್ಥೆ (Lighting system), ಲೈವ್ ಆರ್ಕೆಸ್ಟ್ರಾ (Live orchestra) ಇರಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಮಾಹಿತಿ ನೀಡಿದ್ದಾರೆ.
ಆರತಿ ಬೆಳಗುವ ಕಾರ್ಯಕ್ರಮ ಮುಕ್ತಾಯಗೊಂಡ ನಂತರ ಜಲಮಂಡಲಿ ಇಲಾಖೆಯ (Department of Water Resources) ಅಧಿಕಾರಿಗಳು, ಕಾವೇರಿ ಮತ್ತು ಕನ್ನಿಕಾ, ಸುಜ್ಯೋತಿ ನದಿಗಳ ಸಂಗಮದ ಭಾಗಮಂಡಲದಿಂದ (Bhagamandal) ತಂದ ನೀರನ್ನು ಪ್ರಸಾದವಾಗಿ ನೆರೆದವರಿಗೆ ವಿತರಣೆ ಮಾಡಲಾಗುತ್ತದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ಕಾವೇರಿ ನೀರು ಪೋಲು ಮಾಡಿದರೆ ಬೀಳುತ್ತೆ ದಂಡ: ಬಿಡಬ್ಯುಎಸ್ಎಸ್ ಬಿ ಇಂದ ಹೊಸ ನಿಯಮ
ಸ್ಯಾಂಕಿ ಟ್ಯಾಂಕ್ ಕೆರೆ (Sankey Tank Lake) ಬೆಂಗಳೂರಿನಲ್ಲಿ ಅತಿ ಸ್ವಚ್ಛವಾಗಿರುವಂತದ್ದು, ಇಲ್ಲಿ ಜನರು ಸೇರುವುದಕ್ಕೂ ಸೂಕ್ತ ವ್ಯವಸ್ಥೆ ಇರುವ ಕಾರಣ ಇದೆ ಪ್ರದೇಶ ಆಯ್ಕೆ ಮಾಡಿಕೊಂಡೆವು. ಗಾಳಿ ಆಂಜನೇಯ ದೇವಸ್ಥಾನ (Anjaneya Temple), ಸಹ ಲಿಸ್ಟ್ನಲ್ಲಿತ್ತು. ಆದರೆ, ದೇಗುಲದ ಸಮೀಪ ಚರಂಡಿ ಇದ್ದ ಕಾರಣ ಕೈಬಿಡಲಾಯಿತು.
ಆದರೆ, ಸ್ಯಾಂಕಿ ಕೆರೆಯಲ್ಲೇ ಕಾವೇರಿ ಆರತಿ ಮಾಡಲು ಕಾರಣವೆಂದರೆ, ಕಾವೇರಿಯ ಉಪನದಿ ವೃಷಭಾವತಿ, ಅದರ ಉಗಮ ಸ್ಥಾನ ಸ್ಯಾಂಕಿ ಕೆರೆ ಹಿನ್ನೆಲೆ, ಇಲ್ಲೆ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಯಿತು. ಸ್ಯಾಂಕಿ ಕೆರೆ ಸಮೀಪ ಜಲಗಂಗಮ್ಮ ದೇವಸ್ಥಾನವನ್ನು (Jalagangamma Temple) ಇತಿಹಾಸದಲ್ಲಿ ನಿರ್ಮಿಸಲಾಗಿತ್ತು.ಇದು ವೃಷಭಾವತಿ ಉಗಮದ ಸಂಕೇತ.
ಕೆಲವರು ಬಸವನಗುಡಿಯ ನಂದಿ ಪಾದದಿಂದ ನೀರು (Gangarathi to Cauvery in Sankitanki) ಉದ್ಭವಿಸಿತು ಎಂಬ ವಾದವು ಇದೆ ಎಂದು ಜಲಮಂಡಲಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಬೆಂಗಳೂರಿನಲ್ಲಿ ಈಗಾಗಲೇ ನೀರಿನ ಬರ (Water drought) ಆರಂಭವಾಗಿದೆ ಇಂತಹ ಸಮಯದಲ್ಲಿ ಇವೆಲ್ಲಾ ಬೇಕಾ ಎನ್ನುವುದು ಬೆಂಗಳೂರಿಗರ ಪ್ರಶ್ನೆಯಾಗಿದೆ.