ಗಂಗೂಬಾಯಿ ಕಾಠಿಯಾವಾಡಿ ಚಿತ್ರಕ್ಕೆ ಕಾನೂನು ತೊಂದರೆ ಎದುರಾಗಿದೆ. ಗಂಗೂಬಾಯಿ ಕುಟುಂಬಸ್ಥರು ಚಿತ್ರತಂಡದ ವಿರುದ್ಧ ಕೋರ್ಟ್ ಮೊರೆ ಹೋಗಿದ್ದು, ಚಿತ್ರದ ರಿಲೀಸ್ಗೆ ತಡೆಯಾಜ್ಞೆ ನೀಡುವಂತೆ ಮನವಿ ಮಾಡಿದ್ದಾರೆ.
ಬಾಲಿವುಡ್ಡ್ನ ಪ್ರಸಿದ್ಧ ನಟಿ ‘ಆಲಿಯಾ ಭಟ್’ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಗಂಗೂಬಾಯಿ ಕಾಠಿಯಾವಾಡಿ’ 2022 ರ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಈ ಚಿತ್ರದ ಹಾಡುಗಳು ಹಾಗೂ ಟ್ರೈಲರ್ ಎಲ್ಲೆಡೆ ಭಾರಿ ಸದ್ದು ಮಾಡ್ತಿವೆ. ಅಲ್ಲದೇ, ಜನರಲ್ಲಿ ಕಾತುರ ಮೂಡಿಸಿವೆ. ಕಾಮಾಟಿಪುರದ ಮುಖ್ಯಸ್ಥೆಯಾಗಿದ್ದ ಗಂಗೂಬಾಯಿ ಹರ್ಜೀವಂದಾಸಾ ಅವರ ಜೀವನಾಧಾರಿತ ಚಿತ್ರ ಇದಾಗಿದ್ದು, ಎಸ್ ಹುಸೆನ್ ಜೈದಿ ಬರೆದಿರುವ ಪುಸ್ತಕ ‘ಮೋಫಿಯಾ ಕ್ವೀನ್ ಆಫ್ ಮುಂಬೈ‘ನ್ನು ಆಧರಿಸಿ ಚಿತ್ರವನ್ನು ಮಾಡಲಾಗಿದೆ. ಚಿತ್ರದ ನಾಯಕಿಯನ್ನ ವೇಶ್ಯಾಗೃಹಕ್ಕೆ ಮಾರುವ ಮತ್ತು ಮುಂಬೈನ ರೆಡ್ ಲೈಟ್ ಏರಿಯಾದಲ್ಲಿ ಪ್ರಮುಖ ವ್ಯಕ್ತಿಯಾಗಿ ಮೆರೆಯುವ ಟ್ರೈಲರ್ ಅನ್ನು ಬಿಡುಗಡೆ ಮಾಡಲಾಗಿತ್ತು.
ಇದೀಗ ಚಿತ್ರವು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ರಾರಾಜಿಸಲು ಸಜ್ಜಾಗುತ್ತಿರುವಂತೆ ಮತ್ತೊಂದೆಡೆ, ಗಂಗೂಬಾಯಿ ಕುಟುಂಬಸ್ಥರು ಕೋರ್ಟ್ ಮೊರೆ ಹೋಗಿ ಚಿತ್ರದ ತಡೆಗೆ ನೋಟಿಸ್ ಕಳುಹಿಸಿದ್ದಾರೆ. ಗಂಗೂಬಾಯಿ ಕುಟುಂಬಸ್ಥರು ಚಾರಿತ್ರ್ಯ ಹರಣದ ಆರೋಪ ಮಾಡಿದ್ದು, ಸಂಜಯ್ ಲೀಲಾ ಬನ್ಸಾಲಿ ಹಾಗೂ ಲೇಖಕ ಉಸೇನ್ ಜೈದಿ ಹೆಸರನ್ನ ನೀಡಿದ್ದಾರೆ. ನೋಟಿಸ್ನಲ್ಲಿ ನಾಯಕಿ ಆಲಿಯಾ ಭಟ್ ಹೆಸರೂ ಇದೆ. ಚಿತ್ರತಂಡ ಫೆಬ್ರವರಿ 25 ರಂದು ಬಿಡುಗಡೆಯಾಗಲಿದೆ ಎಂದು ಘೋಷಿಸಿದ್ದ ಈ ಚಿತ್ರಕ್ಕೆ ಕಾನೂನು ತೊಡಕು ಉಂಟಾಗಿದೆ.
ಗಂಗೂಬಾಯಿಗೆ ನಾಲ್ವರು ದತ್ತು ಪುತ್ರರಿದ್ದು, ಇತ್ತೀಚೆಗೆ ಆಜ್ ತಕ್ ಜೊತೆ ಮಾತನಾಡಿದ್ದ ದತ್ತುಪುತ್ರ ಬಾಬೂರಾವ್ – ಚಿತ್ರದಲ್ಲಿ ತಾಯಿಯನ್ನು ಲೈಂಗಿಕ ಕಾರ್ಯಕರ್ತೆಯಾಗಿ ತೋರಿಸಲಾಗಿದೆ. ಜನರು ಈ ಬಗ್ಗೆ ಕೆಟ್ಟದಾಗಿ ಮಾತನಾಡುತಿದ್ದಾರೆ ಅದು ತಮಗೆ ಇಷ್ಟವಿಲ್ಲ ಎಂದು ಹೇಳಿದ್ದರು. ನ್ಯಾಯಾಲಯದಲ್ಲಿ ಗಂಗೂಬಾಯಿ ಕುಟುಂಬಸ್ಥರ ಪರ ವಕೀಲರು- ಯಾರೂ ತಮ್ಮ ತಾಯಿಯನ್ನು ವೇಶ್ಯೆಯಂತೆ ಬಿಂಬಿಸಲು ಇಚ್ಚಿಸುವುದಿಲ್ಲ ಅಂದ್ರು.ಪುಸ್ತಕದ ಕಥೆಯನ್ನ ಆಧರಿಸಿದ್ದರು, ಗಂಗೂಬಾಯಿ ವೇಶ್ಯೆಯಾಗಲು ಬಯಸಲಿಲ್ಲ ಅವರು ಸಾಮೋಜಿಕ ಕಾರ್ಯಕರ್ತೆ, ಲೈಂಗಿಕ ಕಾರ್ಯಕರ್ತೆಯರ ಪರ ಹೋರಾಡಿದವರು ಅಂತ ಹೇಳಿದ್ರು, ಇಷ್ಟಾದ್ರೂ ಕೂಡ ಈ ಪ್ರಕರಣ ಕುರಿತು ಚಿತ್ರ ತಂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
- Sinchana