ತ್ಯಾಜ್ಯ ವಿಲೇವಾರಿ ಒಂದು ದೊಡ್ಡ ಮಾಫಿಯಾ ಆಗಿದೆ
ಶಾಸಕರೇ ನನಗೆ ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ (Garbage disposal is a big mafia)
ಕ್ಷೇತ್ರದ ಅಭಿವೃದ್ದಿಗೆ 800 ಕೋಟಿ ನೀಡುವಂತೆ ಒತ್ತಾಯ
Bangalore :ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕಸದ ಬಿಕ್ಕಟ್ಟಿಗೆ ಶಾಸಕರೇ ನನಗೆ ‘ಬ್ಲ್ಯಾಕ್ಮೇಲ್’ (‘Blackmail’) ಮಾಡುತ್ತಿದ್ದಾರೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ಎಂಎಲ್ಸಿ ನಾಗರಾಜ್ ಯಾದವ್ ಅವರು ಕಸ ತೆರವುಗೊಳಿಸದ ಕಾರಣ ನಗರದ ನಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ದೂರು ನೀಡಿದಾಗ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ ಈ ವಿಚಾರವಾಗಿ ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ.ಕಸ ವಿಲೇವಾರಿ (Garbage disposal) ಮಾಡುವುದು ಒಂದು ದೊಡ್ಡ ಮಾಫಿಯಾ ಆಗಿದೆ.
ಕಸ ತೆರವುಗೊಳಿಸಲು ಟೆಂಡರ್ಗಳನ್ನು ಆಹ್ವಾನಿಸಿದಾಗ, “ಗುತ್ತಿಗೆದಾರರು ಒಂದು ಕಾರ್ಟೆಲ್ ಅನ್ನು ರಚಿಸಿದರು ಮತ್ತು ಟೆಂಡರ್ ಬಿಡ್ ಬೆಲೆಗಿಂತ 85 ಪ್ರತಿಶತದಷ್ಟು ಹೆಚ್ಚಿನ ಬೆಲೆಗೆ ಬಿಡ್ ಮಾಡಿದರು” ಈಗ ಎಲ್ಲರೂ ಒಟ್ಟಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.ನ್ಯಾಯಾಲಯ (Court) ಕೂಡ ಈ ವಿಚಾರವಾಗಿ ಏನು ಮಾಡಬೇಕು ಎಂದು ತೀರ್ಪು ನೀಡಿಲ್ಲ,ಅದ್ದರಿಂದ ಬಿಬಿಎಂಪಿ ಯಾವುದೇ ಕೆಲಸ ಮಾಡಲು ಅವಕಾಶ ನೀಡುತ್ತಿಲ್ಲ.

ನಾವು ಬೆಂಗಳೂರು ನಾಲ್ಕು ದಿಕ್ಕಿನಲ್ಲಿ 50 ಕಿ.ಮೀ ದೂರದ ಹೊರಗೆ ಕಸ ವಿಲೇವಾರಿ ಪ್ರಯತ್ನ ಮಾಡಿತ್ತಿದ್ದೇವೆ.ಆದರೆ, ಬೆಂಗಳೂರು ಶಾಸಕರು ಕಸ ವಿಲೇವಾರಿಗೆ ಅಡ್ಡಿಪಡಿಸುವ ಮೂಲಕ ಸರ್ಕಾರವನ್ನು ‘ಬ್ಲ್ಯಾಕ್ಮೇಲ್’ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನಾನು ನಿಮಗೆ ಸತ್ಯ ಹೇಳುತ್ತಿದ್ದು ಇದರಲ್ಲಿ ಎಲ್ಲಾ ಪಕ್ಷದವರು ಕೂಡ ಶಾಮೀಲಾಗಿದ್ದಾರೆ. ಅಭಿವೃದ್ಧಿಗಾಗಿ ಅವರ ಕ್ಷೇತ್ರಗಳಿಗೆ 800 ಕೋಟಿ ರೂ.ಗಳನ್ನು ನೀಡಬೇಕು ಎಂದು ಕೇಳುತ್ತಿದ್ದಾರೆ. ನಾನು ಅವರ ಹೆಸರು ಹೇಳಲು ಬಯಸುವುದಿಲ್ಲ. ಕಳೆದ ಮೂರು ದಿನಗಳಿಂದಕಸದ ವಿಲೇವಾರಿ ವಾಹನವನ್ನು ಮಹದೇವಪುರ ಬಳಿ ನಿಲ್ಲಿಸಲಾಗಿದ್ದು, ಇದು ಒಂದು ದೊಡ್ಡ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ.
ಬೆಂಗಳೂರು ನಗರ ಮಿತಿಯ ಹೊರಗೆ ಕಸ ವಿಲೇವಾರಿ ಸಮಸ್ಯೆಗೆ ಪರಿಹಾರ ಒದಗಿಸಲು 100 ಎಕರೆ ಭೂಮಿಯನ್ನು ಖರೀದಿಸಲು ನಿರ್ಧರಿಸಲಾಗಿದೆ.ತ್ಯಾಜ್ಯವನ್ನು ವಿದ್ಯುತ್ (Waste to electricity) ಆಗಿ ಪರಿವರ್ತಿಸುವ ಯೋಜನೆಗಳು ಬೆಂಗಳೂರಿನಲ್ಲಿ ಮಾತ್ರವಲ್ಲದೆ ರಾಜ್ಯದ ಇತರ ನಗರಗಳಲ್ಲಿಯೂ ವಿಫಲವಾಗಿವೆ. ಕಸವನ್ನು ಅನಿಲವಾಗಿ ಪರಿವರ್ತಿಸುವುದು ಒಂದೇ ಪರಿಹಾರ ಎಂದು ಹೇಳಿದರು.
ಇದನ್ನೂ ಓದಿ: ಕಸಕ್ಕೂ ಕಟ್ಟಬೇಕು ತೆರಿಗೆ:ಘನತ್ಯಾಜ್ಯ ನಿರ್ವಹಣೆಗಾಗಿ ಹೊಸ ಶುಲ್ಕ ವಿಧಿಸಲು BSWML ಪ್ಲಾನ್
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್ಬಿ) ನೀರಿನ ದರದಲ್ಲಿ ಸಂಭವನೀಯ (Garbage disposal is a big mafia) ಹೆಚ್ಚಳದ ಬಗ್ಗೆ ಶಿವಕುಮಾರ್ ಸುಳಿವು ನೀಡಿದರು.2014 ರಿಂದ,ಅಂದರೆ ಕಳೆದ 11 ವರ್ಷಗಳಿಂದ ನೀರಿನ ಬೆಲೆಯನ್ನು ಹೆಚ್ಚಳ ಮಾಡಿಲ್ಲ,ಈಗ ಪ್ರತಿ ಲೀಟರ್ ಗೆ ಕನಿಷ್ಠ ಒಂದು ರೂಪಾಯಿಯನ್ನು ಹೆಚ್ಚಿಸಲು ನಿರ್ಧರಿಸಿದ್ದೇವೆ.
ಹೆಚ್ಚುತ್ತಿರುವ ವಿದ್ಯುತ್ ಬಿಲ್ಗಳಿಂದ ಬಿಡಬ್ಲ್ಯೂಎಸ್ಎಸ್ಬಿ (BWSSB) ಅನುಭವಿಸಿದ 1,000 ಕೋಟಿ ರೂಪಾಯಿ ನಷ್ಟವನ್ನು ಸರಿದೂಗಿಸಲು ನೀರಿನ ಬಿಲ್ ಅನ್ನು ಹೆಚ್ಚಳ ಮಾಡಿತ್ತಿದ್ದೇವೆ ಎಂದು ಹೇಳಿದರು.. ಇನ್ನು ನಾನು ಕಸ ವಿಲೇವಾರಿ ವಿಚಾರವಾಗಿ ಟೆಂಡರ್ ಕರೆದಿಲ್ಲ.ಆದರೂ ಮಹಾನಾಯಕರೊಬ್ಬರು ಡಿ.ಕೆ. ಶಿವಕುಮಾರ್ ಈ ಯೋಜನೆಯಲ್ಲಿ 15 ಸಾವಿರ ಕೋಟಿ ಲೂಟಿ ಮಾಡಿದ್ದಾರೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.