- ಕಸ ತೆರಿಗೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅಪಾರ್ಟ್ಮೆಂಟ್ ಒಕ್ಕೂಟ (Garbage tax sparks outrage)
- ತ್ರಾಜ್ಯ ಸಂಗ್ರಹ ಸೇವೆಗಳ ಬಳಸದವರಲ್ಲಿ ನಿರಾಶೆ
- ಅಂಗಡಿ–ಮುಂಗಟ್ಟುಗಳಲ್ಲಿ ಪ್ರತಿ ಕೆಜಿ ಕಸಕ್ಕೆ 12 ರೂಪಾಯಿ ತೆರಿಗೆ ವಸೂಲಿಗೆ ಪಾಲಿಕೆ ಸಜ್ಜು
Bengaluru: ಕಳೆದ ಕೆಲ ದಿನಗಳಿಂದ ಬೆಂಗಳೂರು ನಿವಾಸಿಗಳಿಗೆ ಶಾಕ್ (Shock) ಮೇಲೆ ಶಾಕ್ ನೀಡುತ್ತಿರುವ ಕರ್ನಾಟಕ ಸರ್ಕಾರದ ವಿರುದ್ಧ ಅಪಾರ್ಟ್ಮೆಂಟ್ (Apartment) ನಿವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramaiah) ನೇತೃತ್ವದ ಸರ್ಕಾರ ಡೀಸೆಲ್, ಹಾಲು, ಮೊಸರು, ವಿದ್ಯುತ್ ದರ ಏರಿಕೆ ಜಾರಿಗೆ ಮಾಡಿರುವುದರ ಜತೆಗೆ ಬೆಂಗಳೂರಿನಲ್ಲಿ ಕಸಕ್ಕೂ ತೆರಿಗೆ (Garbage is also taxed) ವಿಧಿಸಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ಮನೆ, ಅಂಗಡಿ, ಹೋಟೆಲ್ ಕಸಕ್ಕೂ ತೆರಿಗೆ ಪಾವತಿ (Paying tax on garbage) ಮಾಡಬೇಕು ಎಂದು ಆದೇಶ ಹೊರಡಿಸಲಾಗಿದೆ. ಈ ಮೂಲಕ ಬಿಬಿಎಂಪಿ 600 ಕೋಟಿ ರೂಪಾಯಿ ಆದಾಯ ಸಂಗ್ರಹದ ಗುರಿ ಹಾಕಿಕೊಂಡಿದೆ.

ಅಂಗಡಿ–ಮುಂಗಟ್ಟುಗಳಲ್ಲಿ ಪ್ರತಿ ಕೆಜಿ ಕಸಕ್ಕೆ 12 ರೂಪಾಯಿ ತೆರಿಗೆ ವಸೂಲಿಗೆ ಪಾಲಿಕೆ ಸಜ್ಜಾಗಿದೆ. ಪ್ರತಿ ತಿಂಗಳು ಕಸ ಸಂಗ್ರಹ ಹಾಗೂ ವಿಲೇವಾರಿ (Garbage collection and disposal) ವೆಚ್ಚ ಹೆಚ್ಚಾಗುತ್ತಿದ್ದು, ಈ ಕಾರಣದಿಂದ ತೆರಿಗೆ ವಿಧಿಸಲಾಗುತ್ತಿದೆ ಎಂದು ಬಿಬಿಎಂಪಿ (BBMP) ಹೇಳಿದೆ. ಕಟ್ಟಡದ ವಿಸ್ತೀರ್ಣದ ಆಧಾರತದ ಮೇಲೆ ಕಸದ ಶುಲ್ಕ ನಿಗದಿಪಡಿಸಲಾಗುತ್ತದೆ. ಆಸ್ತಿ ತೆರಿಗೆ ಜೊತೆಯೇ ಕಸ ತೆರಿಗೆಯನ್ನೂ ಪಾಲಿಕೆ ಸಂಗ್ರಹ ಮಾಡಲಿದೆ.
ಈಗಾಗಲೇ ಇರುವ ನಿಯಮಗಳ ಪಾಲನೆ ಮಾಡುತ್ತಿದ್ದರೂ ಸಹ ವಸತಿ ಸಮುದಾಯಗಳು (Residential communities) ಮತ್ತು ದೊಡ್ಡ ವಾಣಿಜ್ಯ (Big business) ಸೇರಿದಂತೆ 3,500 ಕ್ಕೂ ಹೆಚ್ಚು ಬೃಹತ್ ತ್ಯಾಜ್ಯ ಉತ್ಪಾದಕರು ಇದರಿಂದ ಹೆಚ್ಚಿಗೆ ತೆರಿಗೆ ಹಣ ಪಾವತಿಸಬೇಕಾಗುತ್ತದೆ.2025- 26 ರ ಆಸ್ತಿ ತೆರಿಗೆಯಲ್ಲಿ 360 ರೂ. ಜೊತೆಗೆ 1200 ಅಥವಾ ಅದಕ್ಕಿಂತ ಹೆಚ್ಚಿನ ಶುಲ್ಕ ನೀಡಬೇಕಿದೆ.
ಬಿಬಿಎಂಪಿ ಆಟೋ, ಟಿಪ್ಪರ್ಗಳು ತಮ್ಮ ಕಸ ಸಂಗ್ರಹಿಸದ ಕಾರಣ ಅಪಾರ್ಟ್ಮೆಂಟ್ ನಿವಾಸಿಗಳಿಗೆ ಹೆಚ್ಚಿನ (Garbage tax sparks outrage) ಶುಲ್ಕ ವಿಧಿಸುವುದು ಅನ್ಯಾಯ ಎಂದು ಅಪಾರ್ಟ್ಮೆಂಟ್ಗಳ ಒಕ್ಕೂಟ ಹೇಳಿದೆ. ಒಂದು ಆಸ್ತಿ ತೆರಿಗೆಯಲ್ಲಿ ವಿನಾಯಿತಿ ಇಲ್ಲವೇ ಹೊಸ ಶುಲ್ಕಗಳಿಂದ ವಿನಾಯಿತಿ ನೀಡಲು ಮನವಿ ಮಾಡಿದೆ.