ಅನಾದಿಕಾಲದಿಂದಲೂ ಗರಿಕೆ ಹುಲ್ಲಿಗೆ ಅದರದೇ ಆದ ಮಹತ್ವವಿದೆ. ಉತ್ತಮ ಆರೋಗ್ಯದ ಪಾಲನೆಯಲ್ಲಿ ಇದು ಬಳಕೆಯಾಗುತ್ತದೆ. ಒಂದಷ್ಟು ಗರಿಕೆ ಹುಲ್ಲನ್ನು ತೆಗೆದು ಚೆನ್ನಾಗಿ ತೊಳೆದು ಜೀರಿಗೆಯ ಜೊತೆ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿ ರುಚಿಗೆ ಸ್ವಲ್ಪ ಬೆಲ್ಲ ಸೇರಿಸಿ ಖಾಲಿ ಹೊಟ್ಟಗೆ ಕುಡಿದರೆ ರಕ್ತದೊತ್ತಡವನ್ನು ನಿಯಂತ್ರಿಸಬಹುದು ಹಾಗೂ ಸಕ್ಕರೆ ಕಾಯಿಲೆಯನ್ನ ಕೂಡಾ ನಿಯಂತ್ರಣದಲ್ಲಿಡಬಹುದು. ಈ ಹುಲ್ಲಿನಲ್ಲಿ ಅಧಿಕ ಪ್ರಮಾಣದ ಕ್ಯಾಲ್ಸಿಯಂ ಇದೆ . ಇದರಿಂದಾಗಿ ನರಗಳ ದೌರ್ಬಲ್ಯವನ್ನು ನಿವಾರಣೆ ಮಾಡುತ್ತದೆ.
ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ, ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ, ಕೆಂಪುರಕ್ತ ಕಣಗಳನ್ನು ವೃದ್ಧಿಸುತ್ತದೆ, ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಾಯಕವಾಗಿದೆ. ದೇಹದ ಯಾವುದೇ ಭಾಗದಲ್ಲಿ ಗಾಯವಾಗಿದ್ದರೆ ಆ ಗಾಯಕ್ಕೆ ಗರಿಕೆ ಹುಲ್ಲಿನ ರಸವನ್ನು ಹಾಕಿದರೆ ಗಾಯದಲ್ಲಾಗುವ ರಕ್ತಸ್ರಾವವು ನಿಲ್ಲುತ್ತದೆ ಮತ್ತು ಗಾಯ ಗುಣವಾಗುತ್ತದೆ.
ಗೃಹಣದ ದಿನಗಳಲ್ಲಿ ಈ ಹುಲ್ಲಿಗೆ ಪ್ರಮುಖ ಸ್ಥಾನವಿದೆ ಯಾಕೆಂದರೆ ತಿನ್ನುವ ಆಹಾರದ ಜೊತೆ ಈ ಗರಿಕೆ ಹುಲ್ಲನ್ನು ಇಟ್ಟುಬಿಟ್ಟರೆ ಗ್ರಹಣದ ದೋಷಪೂರಿತ ಕಿರಣಗಳಿಂದ ಇದು ಆಹಾರವನ್ನು ರಕ್ಷಿಸುತ್ತದೆ ಯಾವುದೇ ವಿಷಕಾರೀ ಕಿರಣಗಳನ್ನು ವಿರೋಧಿಸುವ ಗುಣ ಈ ಗಿಡದಲ್ಲಿದೆ, ಎಂಬ ನಂಬಿಕೆ ಇದೆ. ಇದರಿಂದ ನಮ್ಮ ಆರೋಗ್ಯದ ರಕ್ಷಣೆಯನ್ನು ಗರಿಕೆ ಹುಲ್ಲು ಮಾಡುತ್ತದೆ. ಹತ್ತಾರು ಔಷದೀಯ ಗುಣಗಳನ್ನು ಇದು ಹೊಂದಿದೆ, ಆಯುರ್ವೇದ ಔಷದಿಗಳಲ್ಲಿ ಇದರ ಬಳಕೆ ಯಥೆಷ್ಟವಾಗಿದೆ. ಕ್ಯಾಲ್ಸಿಯಂ, ರಂಜಕ, ಫೈಬರ್, ಪೊಟಾಷಿಯಂ ಹಾಗೂ ಸಮೃದ್ಧವಾದ ಪ್ರೋಟೀನ್‌ಗಳನ್ನು ಇದು ಹೊಂದಿದೆ.