ಬೆಂಗಳೂರು,ಫೆ.17: ಎಲ್ಲರ ಮನೆಗಳಲ್ಲೂ ಅಡಿಗೆ ಸಿಲಿಂಡರ್ ಇದೆ. ಪ್ರತಿ ತಿಂಗಳು ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆಯಾಗುತ್ತದೆ. ಸಾರ್ವಜನಿಕರಿಗೆ ಗ್ಯಾಸ್ ಸಿಲಿಂಡರ್ ನಲ್ಲಿ ಸರ್ಕಾರ ಇಂತಿಷ್ಟು ಅಂತ ಸಬ್ಸಿಡಿ ನೀಡುತ್ತದೆ. ಪ್ರತೀ ರಾಜ್ಯಗಳಲ್ಲಿ ಸಬ್ಸಿಡಿ ಇಂತಿಷ್ಟೇ ಅಂತ ಇದೆ. ವಾರ್ಷಿಕ ಆದಾಯ 10 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿರುವ ಜನರಿಗೆ ಈ ಸಬ್ಸಿಡಿ ಸೌಲಭ್ಯ ಸಿಗುವುದಿಲ್ಲ. ಆದ್ರೆ ಹಲವಾರು ಜನರಿಗೆ ಸಬ್ಸಿಡಿ ಹಣ ತಮ್ಮ ಖಾತೆಗೆ ಬಂದಿದ್ದು ಗೊತ್ತಾಗುವುದಿಲ್ಲ. ನಿಮ್ಮ ಖಾತೆಗೆ ಸಬ್ಸಿಡಿ ಬಂದಿದೆಯಾ ಎಂಬುದನ್ನು ಹೇಗೆ ನೋಡಬಹುದು ಎಂಬುದನ್ನು ನೋಡಿ.
ಮೊದಲು ಇಂಡೇನ್ ಗ್ಯಾಸ್‌ನ ಅಧಿಕೃತ ವೆಬ್‌ಸೈಟ್ https://bit.ly/3rU6Lol ಗೆ ಭೇಟಿ ನೀಡಿ ಅಲ್ಲಿ ಸಿಲಿಂಡರ್ ಚಿತ್ರ ಕಾಣಿಸುತ್ತದೆ ನೋಡಿ . ಅದರ ಮೇಲೆ ಕ್ಲಿಕ್ ಮಾಡಿ, ಅಲ್ಲಿ ಕಂಪ್ಲೆಂಟ್ ಬಾಕ್ಸ್ ಓಪನ್ ಆಗುತ್ತದೆ. ಅದ್ರ ಮೇಲೆ ಸಬ್ಸಿಡಿ ಸ್ಟೇಟಸ್ ಎಂದು ಟೈಪ್ ಮಾಡಿ ಮುಂದುವರಿಕೆ ಅಂದರೆ ಸ್ಕಿಪ್ ಮೇಲೆ ಕ್ಲಿಕ್ ಮಾಡಿ. ಮತ್ತೆ ಸಬ್ಸಿಡಿಗೆ ಸಂಬಂಧಿಸಿದ ಬಟನ್ ಮೇಲೆ ಕ್ಲಿಕ್ ಮಾಡಿ, ನಂತರ ಹೊಸ ಆಯ್ಕೆ ಸಿಗಲಿದೆ. ಅಲ್ಲಿ ಸಬ್ಸಿಡಿ ನಾಟ್ ರಿಸೀವ್ಡ್ ಮೇಲೆ ಕ್ಲಿಕ್ ಮಾಡಬೇಕು. ಇದರ ನಂತರ ಮೊಬೈಲ್ ಸಂಖ್ಯೆಯನ್ನು ಹಾಕಬೇಕು. ನಂತ್ರ ವೆರಿಫೈಗೆ ಕ್ಲಿಕ್ ಮಾಡಿ.
ಆಗ ಸಬ್ಸಿಡಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು ಸಿಗುತ್ತವೆ. ಎಷ್ಟು ಸಬ್ಸಿಡಿ ಸ್ವೀಕರಿಸಿದ್ದೀರಿ? ಎಷ್ಟು ಕಳುಹಿಸಲಾಗುತ್ತಿದೆ? ಎಂಬುದು ತಿಳಿಯುತ್ತದೆ. ಇಂಡೇನ್ ಕಂಪನಿ ಗ್ರಾಹಕರ ಸೇವೆಗಾಗಿ 1800-233-3555 ಸಂಖ್ಯೆಯನ್ನೂ ಕೂಡ ನೀಡಿದೆ. ಇಲ್ಲಿಯೂ ಮೊಬೈಲ್ ಸಂಖ್ಯೆಯನ್ನು ಅಥವಾ ಗ್ರಾಹಕರ ಐಡಿಯನ್ನು ನೀಡಿ ಸಬ್ಸಿಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು.