ಖ್ಯಾತ ನಟ ಗ್ಯಾಸ್ಪರ್ಡ್ ಉಲ್ಲಿಲ್ ಅಪಘಾತದಲ್ಲಿ ನಿಧನ.!

ಶನೆಲ್ ಸುಗಂಧ ದ್ರವ್ಯ ಸೇರಿದಂತೆ ಜಾಹೀರಾತುಗಳು ಮತ್ತು ಚಲನಚಿತ್ರ ಮತ್ತು ದೂರದರ್ಶನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಹೆಸರುವಾಸಿ ಫ್ರೆಂಚ್ ನಟರಾದ ಗ್ಯಾಸ್ಪಾರ್ಡ್ ಉಲಿಯೆಲ್ ಅವರು ಆಲ್ಪ್ಸ್‌ನ ಸ್ಕೀಯಿಂಗ್ ನಲ್ಲಿ ನಡೆದ ಅಪಘಾತದಲ್ಲಿ ನಿಧನ  ಹೊಂದಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

2007ರಲ್ಲಿ ಹ್ಯಾನಿಬಲ್ ರೈಸಿಂಗ್ ನಲ್ಲಿ ಯುವ ಹ್ಯಾನಿಬಲ್ ಲೆಕ್ಟರ್ ಪಾತ್ರ ಮತ್ತು 2014ರ ಜೀವನಚರಿತ್ರೆ “ಸೇಂಟ್ ಲಾರೆಂಟ್” ನಲ್ಲಿ ಫ್ಯಾಶನ್ ಮೊಗಲ್ ವೈವ್ಸ್ ಸೇಂಟ್ ಲಾರೆಂಟ್ ಅಲ್ಲಿ  ಉಲ್ಲಿಲ್ ಅವರು ಅಭಿನಯಿಸಿದ್ದರು.  ಮುಂಬರುವ ಮಾರ್ವೆಲ್ ಸರಣಿಯ “ಮೂನ್ ನೈಟ್” ನಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದರು ಮತ್ತು ಶನೆಲ್ ಪುರುಷರ ಸುಗಂಧ ಬ್ಲೂ ಡಿ ಶನೆಲ್‌ನ ಜಾಹೀರಾತಿನ ಪ್ರಮುಖ ಮುಖವಾಗಿದ್ದರು. ಲಾ ರೋಸಿಯರ್ ರೆಸಾರ್ಟ್‌ನಲ್ಲಿ ಮಂಗಳವಾರ ಮಧ್ಯಾಹ್ನ ಸ್ಕೀಯಿಂಗ್ ಮಾಡುವಾಗ, ಮತ್ತೊಬ್ಬ ಸ್ಕೀಯರ್‌ಗೆ ಡಿಕ್ಕಿ ಹೊಡೆದಿದ್ದಾರೆ.

ತನಿಖೆಯ ಪ್ರಾಥಮಿಕ ಸಂಶೋಧನೆಗಳು ಪ್ರಕಾರ ಘರ್ಷಣೆಯ ನಂತರ ಇಬ್ಬರೂ ಸ್ಕೀಯರ್‌ಗಳು ನೆಲಕ್ಕೆ ಬಿದ್ದಿದ್ದಾರೆ. ಉಲಿಯೆಲ್ ರಕ್ಷಣೆಗೆ ಬಂದಾಗ ಅವರು ಪ್ರಜ್ಞಾಹೀನರಾಗಿದ್ದರು, ಆದರೆ ಇತರ ಸ್ಕೀಯರ್ ಹಾನಿಗೊಳಗಾಗಿರಲಿಲ್ಲ ಎಂದು ಗ್ಯಾಚೆಸ್ ಹೇಳಿದರು. ಉಲ್ಲಿಲ್ ಅವರು ಹೆಲ್ಮೆಟ್ ಧರಿಸಿರಲಿಲ್ಲ ಎಂದು ಲಾ ರೋಸಿಯರ್ ರೆಸಾರ್ಟ್‌ನ ನಿರ್ದೇಶಕ ಜೀನ್ ರೆಗಾಲ್ಡೊ ಬಿ.ಎಫ್‌.ಎಂ ದೂರದರ್ಶನಕ್ಕೆ ಸ್ಪಷ್ಟಪಡಿಸಿದರು.

ಉಲ್ಲಿಲ್ ಅವರು ತಮ್ನ 11 ನೇ ವಯಸ್ಸಿನಲ್ಲಿ ಪ್ರಸಿದ್ಧ ನಟಿ ಸ್ಯಾಂಡ್ರಿನ್ ಬೊನೈರ್ ಅವರೊಂದಿಗೆ ನಟಿಸಲ ಪ್ರಾರಂಭಿಸಿದರು ಮತ್ತು ಫ್ರಾನ್ಸ್‌ನ ಎರಡು ಉನ್ನತ ಚಲನಚಿತ್ರ ಪ್ರಶಸ್ತಿಗಳಾದ ಸೀಸರ್ ಅನ್ನು ಗೆದ್ದಿದರು. ತಮ್ಮ ಆರನೇ ವಯಸ್ಸಿಗೆ ಅವರ ಮುಖಕ್ಕೆ ನಾಯಿ ಕಚ್ಚಿದ್ದ ಪರಿಣಾಮ ಟ್ರೇಡ್‌ಮಾರ್ಕ್ ರೀತಿ ಗಾಯವೊಂದು ಮುಖದ ಮೇಲಿತ್ತು.

ಉಲ್ಲಿಲ್ ಅವರು ಅನೇಕ ಪ್ರಮುಖ ಪಾತ್ರಗಳಾದ ಫ್ರೆಂಚ್ ಕ್ರಾಂತಿಕಾರಿ, ಸಾಯುತ್ತಿರುವ ನಾಟಕಕಾರ, ಕಣ್ಮರೆಯಾದ ವಿಶ್ವ ಸಮರ I ಸೈನಿಕ, ಉದಯೋನ್ಮುಖ ಸರಣಿ ಕೊಲೆಗಾರ, ಐಕಾನಿಕ್ ಫ್ಯಾಷನ್ ಡಿಸೈನರ್ ಪಾತ್ರವನ್ನು ನಿರ್ವಹಿಸಿದವರು. ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರನ್ನು ಇಂದು ಫ್ರೆಂಚ್ ಸಿನೆಮಾದ ಅವತಾರಗಳಲ್ಲಿ ಒಬ್ಬರು ಎಂದು ಕರೆಯಲಾಗುತ್ತಿದೆ ಮತ್ತು ಪ್ರಪಂಚದಾದ್ಯಂತ ಆಘಾತಕ್ಕೊಳಗಾದ ಸಹೋದ್ಯೋಗಿಗಳು ಮತ್ತು ಅಭಿಮಾನಿಗಳಿಂದ ಗೌರವಗಳ ಮಹಾಪೂರವೇ ಹರಿದುಬರುತ್ತಿದೆ.

ಉಲ್ಲಿಲ್ ಅವರ ಪ್ರತಿಯೊಂದು ಚಲನಚಿತ್ರ ಸೆಟ್‌ಗಳಲ್ಲಿ, ಉತ್ತಮವಾದ ವ್ಯಕ್ತಿತ್ವವನ್ನು ಹೊಂದಿದ್ದರು ಸದಾ ಮಾತನ್ನು ಕೇಳಲು ಸಿದ್ಧರಿದ್ದರು. ಎಲ್ಲಾ ತಂಡಗಳು ಗೌರವಿಸಿದರು. ಏಕೆಂದರೆ ಅವರು ಎಲ್ಲರಿಗೂ ಗೌರವಾನ್ವಿತರಾಗಿದ್ದಂತ ವ್ಯಕ್ತಿ ಎಂದು ಮ್ಯಾಕ್ರನ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪ್ರಧಾನಮಂತ್ರಿ ಜೀನ್ ಕ್ಯಾಸ್ಟೆಕ್ಸ್ ಟ್ವೀಟ್ ಮಾಡುವ ಮುಖೇನ, ಗ್ಯಾಸ್ಪರ್ಡ್ ಉಲಿಯೆಲ್ ಅವರು ಸಿನಿಮಾದೊಂದಿಗೆ ಬೆಳೆದವರು ಮತ್ತು ಅವರ ಜೊತೆ ಸಿನಿಮಾ ಕೂಡ ಬೆಳೆಯಿತು. ಅವರು ಒಬ್ಬರನ್ನೊಬ್ಬರು ಹುಚ್ಚುಚ್ಚಾಗಿ ಪ್ರೀತಿಸುತ್ತಿದ್ದರು ಎಂದು ಟ್ವೀಟ್ ಮಾಡಿದ್ದಾರೆ. ಹೌಸ್ ಆಫ್ ಶನೆಲ್ ತನ್ನ 12 ವರ್ಷಗಳ ರಾಯಭಾರಿ ಮತ್ತು ಸ್ನೇಹಿತನನ್ನು ಕಳೆದುಕೊಂಡಿರುವುದಾಗಿ ಹೇಳಿಕೆಯಲ್ಲಿ  ತಮ್ಮ ಸಂತಾಪವನ್ನು ಸೂಚಿಸಿದೆ.

Latest News

ದೇಶ-ವಿದೇಶ

ದೇಶದ ಹೆಮ್ಮೆ ತ್ರಿವರ್ಣ ಧ್ವಜವೂ ಕೂಡ ಬಿಜೆಪಿಗೆ ವ್ಯಾಪಾರದ ಸರಕಾಗಿದೆ : ಬಿ.ಕೆ.ಹರಿಪ್ರಸಾದ್

38×11,80,000=4.484 ಕೋಟಿ, ಹೇಗಿದೆ ಮೋದಿ ಸರ್ಕಾರದ ಲೂಟಿ? ಕೇಂದ್ರದ ಮೋದಿ ಸರ್ಕಾರ ವಸೂಲಿ ಬಾಜಿತನಕ್ಕೆ ರಾಷ್ಟ್ರಧ್ವಜವನ್ನ ಬಳಸಿಕೊಂಡಿರುವುದು ಅಕ್ಷಮ್ಯ ಅಪರಾಧ

ಕ್ರೀಡೆ

ಕಾಮನ್‌ವೆಲ್ತ್ ಗೇಮ್ಸ್‌ 2022 ; ಕಂಚಿನ ಪದಕ ಗೆದ್ದ ಪತ್ನಿಯನ್ನು ಅಭಿನಂದಿಸಿದ ದಿನೇಶ್ ಕಾರ್ತಿಕ್

ಭಾರತದ ಸ್ಕ್ವ್ಯಾಶ್ ಆಟಗಾರ್ತಿ ದೀಪಿಕಾ ಪಲ್ಲಿಕ್ಕಲ್(Deepika Pallikal) ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಕಂಚಿನ ಪದಕ(Bronze Medal) ಗೆದ್ದುಕೊಂಡಿದ್ದಾರೆ.

ಆರೋಗ್ಯ

ದೇಹ ನೀಡುವ `ಈ’ ಸೂಚನೆಗಳು ಕಿಡ್ನಿ ವೈಪಲ್ಯವನ್ನು ಸೂಚಿಸುತ್ತವೆ ; ಇಲ್ಲಿದೆ ಮಾಹಿತಿ ಓದಿ

ಕಿಡ್ನಿ(Kidney) ನಮ್ಮ ದೇಹದ ಪ್ರಮುಖ ಅಂಗವಾಗಿದೆ. ದೇಹದಲ್ಲಿ ಶುದ್ಧ ರಕ್ತವನ್ನು ಪರಿಚಲನೆ ಮಾಡುವಲ್ಲಿ ಮೂತ್ರಪಿಂಡಗಳು ಮುಖ್ಯ ಪಾತ್ರವಹಿಸುತ್ತವೆ.

ರಾಜಕೀಯ

1947ರ ಹಿಂದಿನ ಕಾಂಗ್ರೆಸ್ ಬೇರೆ, ಈಗಿನ ಸೋಗಲಾಡಿ ಸಿದ್ಧಹಸ್ತರು ಇರುವ ಕಾಂಗ್ರೆಸ್ಸೇ ಬೇರೆ : ಹೆಚ್‍ಡಿಕೆ

ಇದುವರೆಗೂ ಕಾಂಗ್ರೆಸ್ ನಡೆಸಿದ ಸ್ವಾತಂತ್ರ್ಯ ವಿರೋಧಿ ಕೃತ್ಯಗಳಿಗೆ ಉತ್ತರ ಕೊಡುವಿರಾ? ಕಾಂಗ್ರೆಸ್ ಕೋಳಿ ಕೂಗಿದರೆ ಭಾರತದಲ್ಲಿ ಬೆಳಕು ಹರಿಯುತ್ತದೆ ಎನ್ನುವ ಕಾಲ ಹೋಯಿತು.