America: ವಿಶ್ವದ ದೊಡ್ಡಣ್ಣ ಮತ್ತೆ ಜಗತ್ತಿನಾದ್ಯಂತ ಸಂಚಲನ ಸೃಷ್ಟಿಸಿದ್ದಾನೆ. ಹೊಸ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಂತೆ ಅಕ್ರಮ ವಲಸಿಗರ ಮೇಲೆ (Illegal immigrants) ಯುದ್ಧ ಸಾರಿದ್ದಾರೆ. ಇದರ ಜೊತೆಗೆ ಗಾಜಾ ಪಟ್ಟಿಯನ್ನು ವಶಪಡಿಸಿಕೊಳ್ಳುವ ಘೋಷಣೆ (Declaration of seizure) ಮಾಡಿ ಹಲ್ಚಲ್ ಸೃಷ್ಟಿಸಿದ್ದಾರೆ.ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮ ಆರಂಭಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರ, ಅದರ ಭಾಗವಾಗಿ ಇದೀಗ ಭಾರತೀಯ ಮೂಲದ ಅಕ್ರಮ ನಿವಾಸಿಗಳನ್ನು (Illegal residents of origin) ಸ್ವದೇಶಕ್ಕೆ ವಾಪಸ್ ಕಳುಹಿಸಲು ಆರಂಭಿಸಿದ್ದಾರೆ
ಇದೀಗ ಸೂಕ್ತ ದಾಖಲೆಗಳಿಲ್ಲದೆ (Without proper documents) ಅಮೆರಿಕದಲ್ಲಿ ನೆಲೆಸಿದ್ದ 205 ಮಂದಿ ಭಾರತೀ ಯರನ್ನು ಅಮೆರಿಕದ ಸ್ಯಾನ್ ಆ್ಯಂಟಾನಿಯೋ (San Antonio, USA) ವಿಮಾನ ನಿಲ್ದಾಣದಿಂದ ಸಿ-17 ಮಿಲಟಿರಿ ವಿಮಾನದ ಮೂಲಕ ಭಾರತಕ್ಕೆ ಕಳುಹಿಸಿಕೊಡಲಾಗಿದೆ. ಪ್ರತಿಯೊಬ್ಬರ ದಾಖಲೆಗಳನ್ನು ಸ್ಪಷ್ಟವಾಗಿ ಪರಿಶೀಲಿಸಿದ ಬಳಿಕವೇ ಅವರನ್ನು ವಾಪಸ್ ಕಳುಹಿಸಿಕೊಡಲಾಗಿದೆ. ಅಕ್ರಮ ವಲಸಿಗರು (Illegal immigrants) ಇರುವ ವಿಮಾನವು ಮಾರ್ಗ ಮಧ್ಯೆ ಜರ್ಮನಿಯ ರಾಮ್‌ಸ್ಟೈನ್‌ನಲ್ಲಿ ಇಂಧನಕ್ಕಾಗಿ (Fuel at Ramstein) ಕೆಲಕಾಲ ತಂಗಲಿದ್ದು, ಬಳಿಕ ನೇರವಾಗಿ ಪಂಜಾಬ್‌ನಲ್ಲಿ ಬಂದಿಳಿಯಲಿದೆ ಎಂದು ಮೂಲಗಳು ತಿಳಿಸಿವೆ.

ಅಕ್ರಮ ವಲಸಿಗರನ್ನು ಗಡಿಪಾರು ಮಾಡುವ (Exile) ಜೊತೆಗೆ ಟ್ರಂಪ್ ಮತ್ತೊಂದು ಸಂಚಲನಕಾರಿ ಘೋಷಣೆ ಮಾಡಿದ್ದಾರೆ. ಇಸ್ರೇಲ್-ಹಮಾಸ್ (Israel-Hamas) ನಡುವಿನ ಕದನ ವಿರಾಮದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಟ್ರಂಪ್ ಇದೀಗ ಇಸ್ರೇಲ್ನ ಗಾಜಾ ಪಟ್ಟಿ (Israel’s Gaza Strip) ಸ್ವಾಧೀನಕ್ಕೆ ಪ್ಲಾನ್ ಮಾಡಿದ್ದಾರೆ. ಪುನರಾಭಿವೃದ್ಧಿ ಯೋಜನೆಯಡಿ ಅಮೆರಿಕ, ಗಾಜಾ ಪಟ್ಟಿಯನ್ನು (Gaza strip) ಸ್ವಾಧೀನಪಡಿಸಿಕೊಳ್ಳುತ್ತದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.ಅಮೆರಿಕಕ್ಕೆ ಭೇಟಿ ನೀಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ (Prime Minister Benjamin) ನೆತನ್ಯಾಹು ಜೊತೆಗಿನ ಮಾತುಕತೆ ಬಳಿಕ ಟ್ರಂಪ್ ಈ ಘೋಷಣೆ ಮಾಡಿದ್ದಾರೆ.