New Delhi : ಲಕ್ನೋ ಸೂಪರ್ ಜೈಂಟ್ಸ್ ನ (Lucknow Super Giants) ಮೆಂಟರ್ ಗೌತಮ್ ಗಂಭೀರ್, ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡ ಐದನೇ ಬಾರಿ ಟ್ರೋಫಿ ಗೆದ್ದಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಐಪಿಎಲ್ ನಂತಹ ಪ್ರಮುಖ ಟೂರ್ನಿಯಲ್ಲಿ ಒಂದು ಬಾರಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವುದು ಎಂದರೆ ಅದು ದೊಡ್ಡ ವಿಷಯ (Gautam Gambhir tweeted) ಅಂತಹದರಲ್ಲಿ ಐದು ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿರುವುದು ಎಂದರೆ ಸಣ್ಣ ವಿಷಯವೇನಲ್ಲ, ಇದೊಂದು ಗಮನಾರ್ಹ ಸಾಧನೆ ಎಂದು ಅಭಿನಂದಿಸಿದ್ದಾರೆ.

ಆದಾಗ್ಯೂ, ಗಂಭೀರ್ ಅವರ ಈ ಹೊಗಳಿಕೆಯು ಐಪಿಎಲ್ (IPL) ಇತಿಹಾಸದಲ್ಲಿ ಇನ್ನೂ ಪ್ರಶಸ್ತಿಯನ್ನು ಗಳಿಸದ ರಾಯಲ್ ಚಾಲೆಂಜರ್ಸ್
ಬೆಂಗಳೂರು ತಂಡಕ್ಕೆ ಮತ್ತು ಗಂಭೀರ್ ಅವರೊಂದಿಗೆ ಹಿಂದಿನ ವಾಗ್ವಾದವನ್ನು ಹೊಂದಿದ್ದ ವಿರಾಟ್ ಕೊಹ್ಲಿಯ (Virat Kohli) ಕಡೆಗೆ ಸೂಕ್ಷ್ಮವಾಗಿ ಕುಟುಕಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ಗೆ ಮತ್ತು ತಂಡಕ್ಕೆ ಧನ್ಯವಾದಗಳು!
ಒಂದು ಕಪ್ ಗೆಲ್ಲುವುದೇ ಬಹು ಕಷ್ಟ, 5 ಕಪ್ ಗೆಲ್ಲುವುದು ಎಂದರೆ ಅದು ಅಸಾಧಾರಣ ಸಾಧನೆ,” ಎಂದು ಗೌತಮ್ ಗಂಭೀರ್ (Gautam Gambhir) ಟ್ವಿಟ್ (Tweet) ಮಾಡಿದ್ದಾರೆ.
ಆ ಮೂಲಕ ಕೊಹ್ಲಿ ಮತ್ತು ಆರ್‌ಸಿಬಿಯನ್ನು ಗಂಭೀರ್ ಪರೋಕ್ಷವಾಗಿ ಟೀಕಿಸಿದರು. ಯಾವುದೇ ಹೆಸರನ್ನು ಉಲ್ಲೇಖಿಸದೆ ಗಂಭೀರ್ ಆರ್‌ಸಿಬಿ (RCB) ಮತ್ತು ಕೊಹ್ಲಿ ವಿರುದ್ಧ ಪರೋಕ್ಷ ಟೀಕೆಗಳನ್ನು ಮಾಡಿದರು.
ಇದನ್ನೂ ಓದಿ : https://vijayatimes.com/13year-old-girl-commits-suicide/
5 ಬಾರಿ ಟ್ರೋಫಿ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ನೇರವಾಗಿ ಅಭಿನಂದಿಸುವ ಬದಲು,
ಎಂಎಸ್ ಧೋನಿ (MS Dhoni) ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಮತ್ತು
ವಿರಾಟ್ ಕೊಹ್ಲಿ ವಿರುದ್ಧ ಪರೋಕ್ಷವಾಗಿ “ಕಪ್ ಗೆಲ್ಲುವುದು ಕಷ್ಟ” ಎಂಬ ಪದಗಳೊಂದಿಗೆ ಟಾಂಗ್ ಕೊಟ್ಟಿದ್ದಾರೆ.
ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ನಡುವೆ ವಿಷಯಗಳು ಸರಿಯಾಗಿಲ್ಲ. ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (Gautam Gambhir tweeted) ನಡುವಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ,
ನವೀನ್ ಉಲ್ಹಾಕ್ ಮತ್ತು ಗೌತಮ್ ಗಂಭೀರ್ ನಡುವೆ ತೀವ್ರ ಹಣಾಹಣಿ ನಡೆದಿತ್ತು. ಅದರಲ್ಲೂ ಕೊಹ್ಲಿ ಮತ್ತು ಗಂಭೀರ್ ನಡುವಿನ ಹೋರಾಟ ಮಿತಿ ಮೀರಿತ್ತು.
ಇದನ್ನೂ ಓದಿ : https://vijayatimes.com/mango-mela-in-lalbagh/
ಈಗ ಇದನ್ನೇ ಇಟ್ಟುಕೊಂಡು ಗಂಭೀರ್ ಕೊಹ್ಲಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಗೌತಮ್ ಗಂಭೀರ್ ಅವರ ಟ್ವೀಟ್ ವೈರಲ್ (Viral) ಆಗುತ್ತಿದ್ದಂತೆ,
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ವಿರಾಟ್ ಕೊಹ್ಲಿ ಅಭಿಮಾನಿಗಳು ಗಂಭೀರ್ ವಿರುದ್ಧ ವಾಗ್ದಾಳಿ ನಡೆಸಿದರು ಮತ್ತು ಟ್ರೋಲ್ (Troll) ಕೂಡ ಮಾಡಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಗೌತಮ್ ಗಂಭೀರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) 2012 ಮತ್ತು 2014ರ ಆವೃತ್ತಿಗಳಲ್ಲಿ ಚಾಂಪಿಯನ್ ಆಗಿತ್ತು
- ರಶ್ಮಿತಾ ಅನೀಶ್